ETV Bharat / briefs

ರಾಜನಹಳ್ಳಿ ಏತ ನೀರಾವರಿಗೆ ಜೂನ್‌ 22ರಂದು ಚಾಲನೆ.. ಸಂಸದ ಸಿದ್ದೇಶ್ವರ್‌ ಸ್ಪಷ್ಟನೆ

ಈ ಯೋಜನೆಯು ಜೂನ್ ತಿಂಗಳಿನಿಂದ ನವೆಂಬರ್ ತಿಂಗಳವರೆಗೆ ಒಟ್ಟು 180 ದಿನಗಳವರೆಗೆ ತುಂಗಭದ್ರ ನದಿಯಿಂದ ನೀರನ್ನು ಎತ್ತಿ 22 ಕೆರೆಗಳಿಗೆ ಶೇ.75 ತುಂಬಿಸುವ ಯೋಜನೆಯಾಗಿದೆ.

Davanagere
Davanagere
author img

By

Published : Jun 13, 2020, 9:43 PM IST

ದಾವಣಗೆರೆ : ಮಳೆಗಾಲದ ಅವಧಿಯಲ್ಲಿ 22 ಕೆರೆಗಳಿಗೆ ನೀರು ತುಂಬಿಸುವ ರಾಜನಹಳ್ಳಿ ಏತ ನೀರಾವರಿ ಯೋಜನೆಗೆ ಜೂನ್ 22ರಂದು ಚಾಲನೆ ನೀಡಲಾಗುವುದು ಎಂದು ಸಂಸದರಾದ ಜಿ ಎಂ ಸಿದ್ದೇಶ್ವರ್ ಹೇಳಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುಮಾರು 9 ವರ್ಷಗಳ ಹಿಂದೆ ಮಂಜೂರಾತಿ ಪಡೆದುಕೊಂಡ ರಾಜನಹಳ್ಳಿ ಜಾಕ್‍ವೆಲ್ ಯೋಜನೆ ಸಮರ್ಪಕವಾಗಿ ಜಾರಿಯಾಗಿಲ್ಲ. ಇದಕ್ಕೆ ಗುತ್ತಿಗೆದಾರರು ಸೇರಿ ಅನೇಕ ತಾಂತ್ರಿಕ ತೊಂದರೆಗಳು ಕಾರಣವಾಗಿದ್ದವು. ಈ ಬಾರಿ ಶೇ.100 ಕೆರೆಗಳಿಗೆ ನೀರು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಎಲ್ಲಾ ಕಾಮಗಾರಿಗಳು ಮುಗಿದಿವೆ. ಆದರೆ, ರೈತರು ಈ ಯೋಜನೆ ಸಫಲವಾಗುವಲ್ಲಿ ಸಹಕರಿಸಬೇಕು. ಎಲ್ಲರೂ ಚೆನ್ನಾಗಿರಬೇಕೆಂಬುದೇ ನಮ್ಮ ಆಶಯ. ಎಲ್ಲಾ 22 ಕೆರೆಗಳಿಗೆ ನೀರು ತಲುಪಿಸಲು ಪ್ರಯತ್ನ ಮಾಡಲಾಗುವುದು ಎಂದರು.

ಈ ಯೋಜನೆಯಡಿ ತುಂಗಭದ್ರ ನದಿಗೆ ಅಡ್ಡಲಾಗಿ 30 ಅಡಿ ಬ್ಯಾರೇಜ್ ನಿರ್ಮಿಸಲಾಗಿದೆ. ನದಿಯಿಂದ 240 ಮೀಟರ್‌ವರೆಗಿನ ಕಾಲುವೆಯಲ್ಲಿ 1 ಅಡಿ ಶಿಲ್ಟ್ ಇದ್ದು, ಅದನ್ನು ಕ್ಲಿಯರ್ ಮಾಡಿಸಲಾಗುವುದು. ಕೆಇಬಿ ಇಲಾಖೆ ಸಹ ಅನಿರ್ಬಂಧಿತ ವಿದ್ಯುತ್ ನೀಡುವ ಭರವಸೆ ನೀಡಿದ್ದು, ನೀರಾವರಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಮತ್ತು ಕೆಇಬಿ ಎಲ್ಲಾ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, 22 ಕೆರೆ ತುಂಬಿಸುವ ಹೋರಾಟ ಸಮಿತಿ ಅಧ್ಯಕ್ಷರು, ಸದಸ್ಯರು, ಶಾಸಕರು, ಜನಪ್ರತಿನಿಧಿಗಳು, ಸಿರಿಗೆರೆ ಶ್ರೀಗಳು ಎಲ್ಲಾ ಸೇರಿ 22 ಕೆರೆ ತುಂಬಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಈ ಯೋಜನೆ ಯಶಸ್ವಿಯಾಗಲು ರೈತರೂ ಸಹಕರಿಸಬೇಕು. ಜೊತೆಗೆ ವರುಣನ ಕೃಪೆ ಅತ್ಯವಶ್ಯಕವಾಗಿದೆ ಎಂದರು.

ಈ ಯೋಜನೆಯು ಜೂನ್ ತಿಂಗಳಿನಿಂದ ನವೆಂಬರ್ ತಿಂಗಳವರೆಗೆ ಒಟ್ಟು 180 ದಿನಗಳವರೆಗೆ ತುಂಗಭದ್ರ ನದಿಯಿಂದ ನೀರನ್ನು ಎತ್ತಿ 22 ಕೆರೆಗಳಿಗೆ ಶೇ.75 ತುಂಬಿಸುವ ಯೋಜನೆಯಾಗಿದೆ. ಈ ಯೋಜನೆಯು ಎರಡು ಹಂತಗಳನ್ನು ಒಳಗೊಂಡಿದ್ದು, ಮೊದಲನೇ ಹಂತದಲ್ಲಿ ಹರಿಹರ ತಾಲೂಕಿನಲ್ಲಿ ಹಲಸಬಾಳು ಗ್ರಾಮದ ಬಳಿ ತುಂಗಭದ್ರ ನದಿಯಿಂದ 100 ಮೀಟರ್ ಎತ್ತರಕ್ಕೆ ನೀರನ್ನೆತ್ತಿ 28 ಕಿ.ಮೀ ದೂರದಲ್ಲಿರುವ ದಾವಣಗೆರೆ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದ ಹತ್ತಿರದ 2ನೇ ಹಂತಕ್ಕೆ ನೀರೊದೊಗಿಸುವುದು. ಎರಡನೇ ಹಂತದಲ್ಲಿ ಉದ್ದೇಶಿತ ಕೆರೆಗಳಿಗೆ ಸುಮಾರು 70 ಮೀಟರ್ ಎತ್ತರಕ್ಕೆ ನೀರೆತ್ತಿ ಒಟ್ಟು 150 ಕಿ.ಮೀ ಪೈಪ್‍ಲೈನ್ ಮುಖಾಂತರ ಯೋಜಿತ ಕೆರೆಗಳಿಗೆ ನೀರೊದೊಗಿಸಲಾಗುವುದು ಎಂದರು.

ಬಳಿಕ ಭದ್ರಾನಾಲಾ ವಿಭಾಗದ ಕಾರ್ಯಪಾಲಕ ಅಭಿಯಂತರ ಮಲ್ಲಪ್ಪ ಮಾತನಾಡಿ, ರಾಜನಹಳ್ಳಿ ಜಾಕ್‍ವೆಲ್ ಯೋಜನೆಗೆ ಸಂಬಂಧಿಸಿದಂತೆ ಇನ್ನೂ 5.5 ಕಿ.ಮೀ ಪೈಪ್‍ಲೈನ್ ಕೆಲಸ ಬಾಕಿ ಇದೆ. ಮೂರು ಕಡೆ ಗ್ಯಾಪ್ ಇದ್ದು, ಇನ್ನೊಂದು ವಾರದೊಳಗೆ ಆ ಕೆಲಸವನ್ನು ಪೂರ್ಣಗೊಳಿಸಿ ಜೂನ್ 22ರೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.