ಪ್ಯಾರೀಸ್: ಮಣ್ಣಿನ ಅಂಕಣದ ದೊರೆ ರಾಫೆಲ್ ನಡಾಲ್ ಹಾಗೂ 20 ಗ್ರ್ಯಾಂಡ್ಸ್ಲಾಮ್ ಒಡೆಯ ರೋಜರ್ ಫೆಡರರ್ ನಡುವೆ ಫ್ರೆಂಚ್ ಓಪನ್ ಸೆಮಿಫೈನಲ್ ನಡೆಯಲಿದೆ.
ಇಂದು ನಡೆದ ಸೆಮಿಫೈನಲ್ನಲ್ಲಿ ಸ್ವಿಸ್ನ ರೋಜರ್ ಫೆಡರರ್ ಅದೇ ದೇಶದ ವಾವ್ರಿಂಕಾ ವಿರುದ್ಧ 7-6(4), 4-6, 7-5(5),6-4 ಸೆಟ್ಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದರು.
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಸ್ಪೈನ್ನ ರಾಫೆಲ್ ನಡಾಲ್ ಜಪಾನ್ನ ನಿಶಿಕೋರಿ ವಿರುದ್ಧ 6-1,6-1 ಸೆಟ್ಗಳಲ್ಲಿ ಗೆದ್ದು ಸೆಮಿಫೈನಲ್ಗೆ ಎಂಟ್ರಿ ಕೊಟ್ಟರು.
ಫೆಡರರ್ vs ನಡಾಲ್ ನಡುವೆ ಮಹಾಸಮರ
20 ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಪಡೆದಿರುವ ರೋಜರ್ ಫೆಡರರ್ ಸೆಮಿಫೈನಲ್ನಲ್ಲಿ 17 ಗ್ರ್ಯಾಂಡ್ಸ್ಲಾಮ್ ವಿಜೇತ ಸ್ಪೇನ್ನ ರಾಫೆಲ್ ನಡಾಲ್ ವಿರುದ್ಧ ಸೆಣಸಾಡಲಿದ್ದಾರೆ. ಮಣ್ಣಿನ ಅಂಕಣದ ವೀರ ರಾಫೆಲ್ ನಡಾಲ್ ಫೆಡರರ್ ಜೊತೆ 38 ಬಾರಿ ಮುಖಾಮುಖಿಯಾಗುದ್ದು, 23 ಬಾರಿ ಜಯ ಸಾಧಿಸಿದ್ದಾರೆ. ಫೆಡರರ್ 15 ಬಾರಿ ಮಾತ್ರ ಗೆಲುವು ಸಾಧಿಸಿದ್ದಾರೆ.
ರೋಜರ್ ಫೆಡರರ್ 6 ಆಸ್ಟ್ರೇಲಿಯನ್ ಓಪನ್, 1 ಫ್ರೆಂಚ್ ಓಪನ್, 8 ವಿಂಬಲ್ಡನ್ ಹಾಗೂ 5 ಯುಎಸ್ಎ ಓಪನ್ ಪ್ರಶಸ್ತಿ ಪಡೆದಿದ್ದಾರೆ. ನಡಾಲ್ 1 ಆಸ್ಟ್ರಲಿಯಾ ಓಪನ್, 11 ಫ್ರೆಂಚ್ ಓಪನ್, 2 ವಿಂಬಲ್ಡನ್ ಹಾಗೂ ಯುಎಸ್ಎ ಓಪನ್ ಪ್ರಶಸ್ತಿ ಪಡೆದಿದ್ದಾರೆ.