ETV Bharat / briefs

ವಿರಾಟ್‌ ತಂಡಕ್ಕೆ ಡಿ ಕಾಕ್​ ಭಯ, ಆತ ಸಿಡಿಸಿದ ಶತಕಗಳೆಷ್ಟು ಗೊತ್ತೇ? - ಸ್ಟೈನ್​

ಭಾರತದ ವಿರುದ್ಧ ತವರಿನಲ್ಲಾಗಲೀ ಅಥವಾ ಭಾರತದಲ್ಲೇ ಆಗಲಿ ಭಾರತೀಯ ಬೌಲರ್​ಗಳನ್ನು ಕೆಚ್ಚೆದೆಯಿಂದ ಎದುರಿಸಿ ಧಾರಾಳವಾಗಿ ರನ್ ​ಗಳಿಸುತ್ತಾರೆ. ಭಾರತದ ವಿರುದ್ಧ ಆಡಿರುವ 12 ಪಂದ್ಯಗಳಲ್ಲಿ ಈ ಎಡಗೈ ಬ್ಯಾಟ್ಸ್​ಮನ್​ 774 ರನ್ ಕಲೆ ಹಾಕಿದ್ದಾರೆ..

de kock
author img

By

Published : Jun 5, 2019, 1:58 PM IST

Updated : Jun 5, 2019, 2:03 PM IST

ಸೌತಮ್ಟನ್​: ವಿಶ್ವಕಪ್​ನಲ್ಲಿಂದು ಭಾರತ ತಂಡ ತನ್ನ ಮೊದಲ ಪಂದ್ಯವಾಡುತ್ತಿದ್ದು, ಕೊಹ್ಲಿ ಪಡೆಗೆ ಆಫ್ರಿಕಾ ಆರಂಭಿಕ ಬ್ಯಾಟ್ಸ್​ಮನ್​ ಡಿ ಕಾಕ್​ ಭಯ ಕಾಡುತ್ತಿದೆ.

ಭಾರತದ ವಿರುದ್ಧ ತವರಿನಲ್ಲಾಗಲೀ ಅಥವಾ ಅಥವಾ ಭಾರತದಲ್ಲೇ ಆಗಲಿ, ಡಿ ಕಾಕ್‌, ಭಾರತೀಯ ಬೌಲರ್​ಗಳನ್ನು ಕೆಚ್ಚೆದೆಯಿಂದ ದಂಡಿಸಿ ಧಾರಾಳವಾಗಿ ರನ್ ​ಗಳಿಸುತ್ತಾರೆ. ಭಾರತದ ವಿರುದ್ಧ 12 ಪಂದ್ಯ ಆಡಿರುವ ಈ ಎಡಗೈ ಬ್ಯಾಟ್ಸ್​ಮನ್​ 774 ರನ್ ​ಗಳಿಸಿದ್ದಾರೆ.

26 ವರ್ಷದ ವಿಕೆಟ್​ ಕೀಪರ್ ಕಮ್‌​ ಬ್ಯಾಟ್ಸ್​ಮನ್​ ಟೀಮ್​ ಇಂಡಿಯಾ ವಿರುದ್ಧ ಸತತ ಮೂರು ಶತಕ ಸೇರಿದಂತೆ ಒಟ್ಟಾರೆ 5 ಶತಕ ಹಾಗೂ 1 ಅರ್ಧಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. 64.5 ಸರಾಸರಿಯಲ್ಲಿ ರನ್ ​ಗಳಿಸಿರುವ ಡಿ ಕಾಕ್​ ನಿಜಕ್ಕೂ ಭಾರತಕ್ಕೆ ಸವಾಲೊಡ್ಡುವ ಬ್ಯಾಟ್ಸ್​ಮನ್​ ಆಗಿದ್ದಾರೆ.

Quinton de Kock
ಕ್ವಿಂಟನ್​ ಡಿ ಕಾಕ್​

2013 ರಲ್ಲಿ ಭಾರತ, ಆಫ್ರಿಕಾ ಪ್ರವಾಸ ಕೈಗೊಂಡಿದ್ದ ವೇಳೆ ಸತತ 3 ಶತಕ ಸಿಡಿಸಿದ್ದಾಗ ಟೀಮ್​ ಇಂಡಿಯಾದಲ್ಲಿದ್ದ ಪ್ರಮುಖ ಬೌಲರ್​ಗಳಾದ ಭುವನೇಶ್ವರ್​, ಮೊಹಮ್ಮದ್​ ಶಮಿ ಹಾಗೂ ರವೀಂದ್ರ ಜಡೇಜಾ ಇಂದು ನಡೆಯುವ ಪಂದ್ಯದಲ್ಲೂ ಇರುವುದರಿಂದ ಡಿ ಕಾಕ್ ಸುಲಭವಾಗಿ ಬ್ಯಾಟ್​ ಬೀಸಲಿದ್ದಾರೆ. ​

ಡಿ ಕಾಕ್​ ಜೊತೆಗೆ ಮತ್ತೊಬ್ಬ ಆರಂಭಿಕ ಆಟಗಾರ ಹಾಶಿಮ್ ಆಮ್ಲ(932 ರನ್​) ನಾಯಕ ಡು ಪ್ಲೆಸಿಸ್(658 ರನ್​) ಈ ಹಿಂದಿನ ಸರಣಿಗಳಲ್ಲಿ ಭಾರತದ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಇಂದಿನ ಪಂದ್ಯದಲ್ಲಿ ಗೆಲುವು ಕಾಣುವ ಲೆಕ್ಕಾಚಾರದಲ್ಲಿದ್ದಾರೆ.

Intro:Body:Conclusion:
Last Updated : Jun 5, 2019, 2:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.