ETV Bharat / briefs

ಬೆಂಗಳೂರಿನ IIScಗೆ ವಿಶ್ವದ ಉನ್ನತ ಸಂಶೋಧನಾ ವಿವಿ ಹೆಗ್ಗಳಿಕೆ : ಪಿಎಂ ಅಭಿನಂದನೆ - ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್

ರ್ಯಾಂಕಿಂಗ್‌ನ 18ನೇ ಆವೃತ್ತಿಯ ಪ್ರಕಾರ, ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಕ್ಯೂಎಸ್ ವಿಶ್ವವಿಶ್ವವಿದ್ಯಾಲಯ ಸತತ ನಾಲ್ಕನೇ ವರ್ಷವೂ ಭಾರತದ ಅಗ್ರ ಶ್ರೇಯಾಂಕಿತ ಸಂಸ್ಥೆಯಾಗಿದೆ. ದೆಹಲಿಯ ಐಐಟಿ ಭಾರತದ ಎರಡನೇ ಅತ್ಯುತ್ತಮ ವಿಶ್ವವಿದ್ಯಾಲಯವಾಗಿ ಮಾರ್ಪಟ್ಟಿದೆ..

Congratulations to IISc Bangalore, IIT Bombay & IIT Delhi
ಬೆಂಗಳೂರಿನ ಐಐಎಸ್​ಸಿ
author img

By

Published : Jun 9, 2021, 9:26 PM IST

Updated : Jun 9, 2021, 10:28 PM IST

ಬೆಂಗಳೂರು : ಕ್ಯೂಎಸ್ ವಿಶ್ವವಿಶ್ವವಿದ್ಯಾಲಯ ಶ್ರೇಯಾಂಕ 2022 ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪ್ರತಿ ಬೋಧಕ ವರ್ಗದ ಸೂಚಕಗಳ ಪ್ರಕಾರ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವಿಶ್ವದ ಉನ್ನತ ಸಂಶೋಧನಾ ವಿಶ್ವವಿದ್ಯಾಲಯವಾಗಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ.

"ಭಾರತದ ಹೆಚ್ಚಿನ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಜಾಗತಿಕ ಶ್ರೇಷ್ಠತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಯುವಕರಲ್ಲಿ ಬೌದ್ಧಿಕ ಪರಾಕ್ರಮವನ್ನು ಬೆಂಬಲಿಸುವ ಪ್ರಯತ್ನಗಳನ್ನು ನಡೆಸುತ್ತಿವೆ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಲಂಡನ್ ಮೂಲದ Quacquarelli Symonds ನಡೆಸಿದ ಸಮೀಕ್ಷೆಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಪ್ರತಿ ಬೋಧಕವರ್ಗದ (CCF) ಮೆಟ್ರಿಕ್‌ನ ಉಲ್ಲೇಖಗಳಿಗೆ 100ರಲ್ಲಿ 100ಅಂಕಗಳನ್ನು ಪಡೆದಿದೆ. ಒಟ್ಟಾರೆ ಶ್ರೇಯಾಂಕದಲ್ಲಿ ಮೂರು ಭಾರತೀಯ ಸಂಸ್ಥೆಗಳು ವಿಶ್ವ ಪಟ್ಟಿಯಲ್ಲಿ ಅಗ್ರ 200 ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದಿವೆ.

  • "Congratulations to IISc Bangalore, IIT Bombay & IIT Delhi. Efforts are underway to ensure more universities and institutions of India scale global excellence and support intellectual prowess among the youth," tweets Prime Minister Narendra Modi pic.twitter.com/cFqLBOTZFJ

    — ANI (@ANI) June 9, 2021 " class="align-text-top noRightClick twitterSection" data=" ">

ರ್ಯಾಂಕಿಂಗ್‌ನ 18ನೇ ಆವೃತ್ತಿಯ ಪ್ರಕಾರ, ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಕ್ಯೂಎಸ್ ವಿಶ್ವವಿಶ್ವವಿದ್ಯಾಲಯ ಸತತ ನಾಲ್ಕನೇ ವರ್ಷವೂ ಭಾರತದ ಅಗ್ರ ಶ್ರೇಯಾಂಕಿತ ಸಂಸ್ಥೆಯಾಗಿದೆ. ದೆಹಲಿಯ ಐಐಟಿ ಭಾರತದ ಎರಡನೇ ಅತ್ಯುತ್ತಮ ವಿಶ್ವವಿದ್ಯಾಲಯವಾಗಿ ಮಾರ್ಪಟ್ಟಿದೆ. ಕಳೆದ ವರ್ಷದಿಂದ 193ನೇ ಶ್ರೇಯಾಂಕದಿಂದ 185ಕ್ಕೆ ಏರಿದೆ. ಶ್ರೇಯಾಂಕಗಳ ಪ್ರಕಾರ ಕಳೆದ ವರ್ಷದ ಶ್ರೇಯಾಂಕಕ್ಕಿಂತ ಕೆಳಗಿರುವ 186ನೇ ರ್ಯಾಂಕ್ ಪಡೆದ ಐಐಎಸ್​ಸಿಯನ್ನು ಹಿಂದಿಕ್ಕಿದೆ.

ಇದನ್ನೂ ಓದಿ: ಐಐಎಸ್​ಸಿಯಲ್ಲಿ ಒಂದೇ ದಿನ ಇಬ್ಬರು ವಿದ್ಯಾರ್ಥಿಗಳ ದುರ್ಮರಣ

ಐಐಟಿ ಮದ್ರಾಸ್ 255ನೇ ಸ್ಥಾನದಲ್ಲಿದೆ, ಐಐಟಿ ಖರಗ್‌ಪುರ 280ನೇ ಸ್ಥಾನದಲ್ಲಿದ್ದರೆ, ಐಐಟಿ ಗುವಾಹಟಿ-395ನೇ ಶ್ರೇಯಾಂಕದಲ್ಲಿದೆ. ಐಐಟಿ ಹೈದರಾಬಾದ್ 591, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯವು 561-570 ಬ್ಯಾಂಡ್‌ನಲ್ಲಿ ಸ್ಥಾನ ಪಡೆದಿದೆ. ಮ್ಯಾಸಚೂಸೆಟ್ಸ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (Massachusetts Institute of Technology, MIT) ಸತತ 10ನೇ ವರ್ಷವು ವಿಶ್ವದ ನಂಬರ್ ಒನ್ ಸ್ಥಾನ ದಾಖಲಿಸಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು 2006ರ ನಂತರ ಮೊದಲ ಬಾರಿಗೆ ಎರಡನೇ ಸ್ಥಾನಕ್ಕೆ ಏರಿದೆ, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯವು ಮೂರನೇ ಸ್ಥಾನವನ್ನು ಹಂಚಿಕೊಂಡಿವೆ.

Last Updated : Jun 9, 2021, 10:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.