ETV Bharat / briefs

ಜಿಲ್ಲಾ ಖನಿಜ ನಿಧಿ ಮೇಲೆ ಜನಪ್ರತಿನಿಧಿಗಳ ಕಣ್ಣು: ಕೋವಿಡ್​ ಹೆಸರಿನಡಿ ಅನುದಾನ ದುರ್ಬಳಕೆ ?

ಜಿಲ್ಲಾ ಖನಿಜ ನಿಧಿಯ ಅಧ್ಯಕ್ಷರಾದ ಹಾಲಿ ಜಿಲ್ಲಾಧಿಕಾರಿ ಪವನ್​​ಕುಮಾರ ಮಾಲಪಾಟಿ ಅವರು ಕಿಂಚಿತ್ತೂ ಖನಿಜ ನಿಧಿಯ ಅನುದಾನ ಬಳಕೆ ಕುರಿತು ಮಾತನಾಡುತ್ತಿಲ್ಲ. ಹಾಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರಿಗೆ ಜಿಲ್ಲಾ ಖನಿಜ ನಿಧಿಯಲ್ಲಿ ಸಂಗ್ರಹಗೊಂಡ ಅನುದಾನದ ಬಗ್ಗೆ ಮಾಹಿತಿಯೇ ಇಲ್ವಂತೆ.

 politicians trying to Appropriation of grants under Covid name in bellary

author img

By

Published : May 11, 2021, 7:15 PM IST

ಬಳ್ಳಾರಿ: ಮಹಾಮಾರಿ ಕೊರೊನಾ ನಿಯಂತ್ರಣದ ಸಲುವಾಗಿಯೇ ಜಿಲ್ಲಾ ಖನಿಜ ನಿಧಿಯನ್ನ ಸಮರ್ಪಕವಾಗಿ ಬಳಸಿಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ. ಆದರೆ, ಜಿಲ್ಲಾ ಖನಿಜ ನಿಧಿಯ ಅನುದಾನವನ್ನ ಹೇಗಾದ್ರೂ ಮಾಡಿ ತಂತಮ್ಮ ಜೇಬಿಗೆ ಹಾಕಿ ಕೊಳ್ಳಬೇಕೆಂಬ ಚಿಂತೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಇದ್ದಾರೆಯೇ ಎಂಬ ಅನುಮಾನ ಈಗ ಮೂಡ ತೊಡಗಿದೆ.

ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಬರುವ ಒಟ್ಟಾರೆಯಾಗಿ ವಾರ್ಷಿಕ ಆದಾಯದಲ್ಲಿ ಶೇಕಡಾ 10ರಷ್ಟು ಅನುದಾನವನ್ನ ಜಿಲ್ಲಾ ಖನಿಜ ನಿಧಿ ಹೆಸರಿನಡಿ ಮೀಸಲಿರಿಸಲಾಗಿದ್ದು, ಈವರೆಗೂ ಕೂಡ ಸಾವಿರಾರು ಕೋಟಿ ರೂ.ಗಳ ಅನುದಾನ ಸಂಗ್ರಹಗೊಂಡಿದೆ. ಈವರೆಗೂ ಸಂಗ್ರಹಗೊಂಡ ಅನುದಾನವನ್ನ ಶಿಕ್ಷಣ, ಆರೋಗ್ಯ ಮತ್ತು ಅಗತ್ಯ ಸೌಲಭ್ಯಗಳನ್ನ‌ ಕಲ್ಪಿಸಲು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಕಳೆದ ಬಾರಿಯ ಕೋವಿಡ್ ಸಂದರ್ಭದಲ್ಲೂ ಜಿಲ್ಲಾ ಖನಿಜ ನಿಧಿಯ ಅನುದಾನವನ್ನ ಅಂದಿನ ಜಿಲ್ಲಾಧಿಕಾರಿ ಆಗಿದ್ದ ಎಸ್.ಎಸ್.ನಕುಲ್ ಅವರು ಬಹಳ ಅಚ್ಚು ಕಟ್ಟಾಗಿ ಸದ್ಬಳಕೆ ಮಾಡಿಕೊಂಡಿದ್ದರು. ಅದರ ಲೆಕ್ಕ ಪತ್ರವನ್ನೂ ಆಡಿಟ್ ಮಾಡಿಸಿದ್ದರು. ಸಾರ್ವಜನಿಕರ ಮಾಹಿತಿಗಾಗಿ ಅದನ್ನ ತೆರೆದ ಪುಸ್ತಕದಂತೆ ಮಾಡಿದ್ದರು. ಆದರೆ, ಆ ಖನಿಜ ನಿಧಿಯ ಮೇಲೆ ಈ ಉಭಯ ಜಿಲ್ಲೆಗಳ ಜನಪ್ರತಿನಿಧಿಗಳ ವಕ್ರದೃಷ್ಠಿ ಕೂಡ ಬೀಳಲಾರದಂತೆ ಮಾಡಿದ್ದರು‌. ಆದರೆ, ಈ ಬಾರಿ ಮಾತ್ರ ಜಿಲ್ಲಾ ಉಸ್ತುವಾರಿ ಸಚಿವರದ್ದೇ ಕಾರುಬಾರು ಆಗಿದೆ.

ಜಿಲ್ಲಾ ಖನಿಜ ನಿಧಿಯ ಅಧ್ಯಕ್ಷರಾದ ಹಾಲಿ ಜಿಲ್ಲಾಧಿಕಾರಿ ಪವನ್​​ಕುಮಾರ ಮಾಲಪಾಟಿ ಅವರು ಕಿಂಚಿತ್ತೂ ಖನಿಜ ನಿಧಿಯ ಅನುದಾನ ಬಳಕೆ ಕುರಿತು ಮಾತನಾಡುತ್ತಿಲ್ಲ. ಇದೆಲ್ಲವನ್ನೂ ಕೂಡ ಜಿಲ್ಲಾ ಉಸ್ತುವಾರಿ ಸಚಿವರೇ ಮಾತನಾಡುತ್ತಿದ್ದಾರೆ. ಜಿಲ್ಲೆಯ ಜನರ ಜೀವ ಉಳಿಸೋದಕ್ಕೆ ಎಷ್ಟು ಕೋಟಿ ರೂ.ಗಳು ಖರ್ಚಾದ್ರೂ ಚಿಂತೆಯಿಲ್ಲ‌. ಮೊದಲು ಮಹಾಮಾರಿ ಈ ಕೋವಿಡ್ ನಿಯಂತ್ರಣ ಆಗಬೇಕೆಂಬ ಮನಕಲಕುವ ಮಾತುಗಳನ್ನಾಡೋ‌ ಮುಖೇನ ನಾಟಕೀಯವಾಗಿ ನಡೆದುಕೊಳ್ಳೋದು ಕೂಡ ಒಂದು ರೀತಿಯ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ‌ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇನ್ನು ಪ್ರಮುಖ ವಿಷಯ ಎಂದರೆ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರಿಗೆ ಜಿಲ್ಲಾ ಖನಿಜ ನಿಧಿಯಲ್ಲಿ ಸಂಗ್ರಹಗೊಂಡ ಅನುದಾನದ ಬಗ್ಗೆ ಮಾಹಿತಿಯೇ ಇಲ್ವಂತೆ.

ನೆಪ ಮಾತ್ರಕ್ಕೆ ಸಭೆ:

ಕೋವಿಡ್ ಎರಡನೇ ಅಲೆ ನಿಯಂತ್ರಣ ಮಾಡೋ ಹೆಸರಿನಡಿ ಬಳ್ಳಾರಿಯ ಬಿಡಿಎಎ ಫುಟ್ಬಾಲ್ ಮೈದಾನದಲ್ಲಿ ಡಿಸಿ ನಿನ್ನೆ ಕೇವಲ ನೆಪಮಾತ್ರಕ್ಕೆ ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಮಾಧ್ಯಮದವರನ್ನ ಕರೆಯಿಸಿ ಬಿಟ್ಟಿ ಸಲಹೆ - ಸೂಚನೆಗಳನ್ನ ಪಡೆದು ಕೊಂಡರು. ಕೆಲವರಿಗೆ ಈ ಸಭೆ ಕರೆದ ಉದ್ದೇಶವೇ ಅರ್ಥವಾಗಲಿಲ್ಲ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.