ETV Bharat / briefs

ನಾಯಿಗೆ ಗುಂಡು ಹೊಡೆದು ಹತ್ಯೆ: ಆರೋಪಿಗೆ ಪೊಲೀಸ್ ನೋಟಿಸ್ ಜಾರಿ

ಬೀದಿ ನಾಯಿಯನ್ನು ಗುಂಡು ಹೊಡೆದು ಹತ್ಯೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಪೊಲೀಸರು ನೋಟಿಸ್​ ಜಾರಿ ಮಾಡಿದ್ದಾರೆ.

   police notice issued to the accused in the shooting incident

author img

By

Published : Jul 5, 2021, 3:51 PM IST

ಮಂಗಳೂರು: ನಗರದ ಕದ್ರಿ ಶಿವಬಾಗ್‌ ಪ್ರದೇಶದಲ್ಲಿ ಬೀದಿ ನಾಯಿಯನ್ನು ಗುಂಡು ಹೊಡೆದು ಹತ್ಯೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿ ಅನಿಲ್ ಸೋನ್ಸ್‌ ಎಂಬಾತನಿಗೆ ಕದ್ರಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ನಾಯಿಯನ್ನು ಕೊಲ್ಲಲು ಕಾರಣವೇನು ಎಂಬುದರ ಬಗ್ಗೆ ಠಾಣೆಗೆ ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಲಾಗಿದೆ.

ಆರೋಪಿ ಅನಿಲ್ ಸೋನ್ಸ್‌ ವಿರುದ್ಧ ಐಪಿಸಿ 428 ಮತ್ತು 429 ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯ ಸೆಕ್ಷನ್ 11 (1) (ಎಲ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ನೀಡುವ ಕಾರಣಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಜು.1ರ ಸಂಜೆ 5 ಗಂಟೆಗೆ ಕದ್ರಿ ಶಿವಭಾಗ್‌ನ ಸಾರ್ವಜನಿಕ ಸ್ಥಳದಲ್ಲಿ ಕೊಲ್ಲಲ್ಪಟ್ಟಂತೆ ಬೀದಿ ನಾಯಿಯ ಮೃತದೇಹ ಪತ್ತೆಯಾಗಿತ್ತು. ನಾಯಿಯ ಮೇಲೆ ಗಾಯವಾಗಿ ರಕ್ತ ಇರುವ ಬಗ್ಗೆ ಎನಿಮಲ್ ಕೇರ್ ಟ್ರಸ್ಟ್‌ನವರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ಅದರಂತೆ ಟ್ರಸ್ಟ್‌ನ ಸುಮಾ ಆರ್. ನಾಯಕ್ ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿ ಆರೋಪಿಯ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರು.

ನಾಯಿಯ ಮರಣೋತ್ತರ ಪರೀಕ್ಷೆ ನಡೆಸಿದಾಗ ದೇಹದಲ್ಲಿ ಗುಂಡಿನಂತಹ ವಸ್ತು ಪತ್ತೆಯಾಗಿದ್ದು, ಏರ್‌ಗನ್‌ನಿಂದ ಗುಂಡು ಹೊಡೆದಿರುವ ಸಾಧ್ಯತೆ ಇದೆ ಎಂಬ ಸಂಶಯ ವ್ಯಕ್ತವಾಗಿತ್ತು. ಈ ದೂರಿನಲ್ಲಿ ಸ್ಥಳೀಯ ನಿವಾಸಿ ಅನಿಲ್ ಸೋನ್ಸ್ ಮೇಲೆ ಸಂಶಯ ವ್ಯಕ್ತಪಡಿಸಿ ಆತನ ಹೆಸರನ್ನು ನಮೂದಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅನಿಲ್ ಸೋನ್ಸ್ ಠಾಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.