ನವದೆಹಲಿ: ಕಿರ್ಗಿಸ್ತಾನದ ಬಿಶ್ಕೆಕ್ನಲ್ಲಿ ಜೂನ್ 13-14ರಂದು ನಡೆಯಲಿರುವ ಶಾಂಘೈ ಶೃಂಗಸಭೆಯಲ್ಲಿ ಭಾರತದ ಪರವಾಗಿ ಭಾಗವಹಿಸುತ್ತಿರುವ ಪ್ರಧಾನಿ ಮೋದಿ, ಪಾಕ್ ವಾಯುಮಾರ್ಗದ ಮೂಲಕ ತೆರಳುವುದಿಲ್ಲವೆಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.
ಈ ಮೊದಲು ಪ್ರಧಾನಿ ಮೋದಿ ಪಾಕಿಸ್ತಾನದ ವಾಯುಮಾರ್ಗದ ಮೂಲಕ ಬಿಶ್ಕೆಕ್ಗೆ ಹೋಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಬಾಲಕೋಟ್ ವಾಯುದಾಳಿಯ ಬಳಿಕ ಪಾಕಿಸ್ತಾನ ತನ್ನ ವಾಯುಮಾರ್ಗವನ್ನು ಭಾರತೀಯ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಿತ್ತು.
ಮೋದಿ ಬಿಶ್ಕೆಕ್ಗೆ ತೆರಳಲು ವಾಯುಮಾರ್ಗ ತೆರವುಗೊಳಿಸಲು ಭಾರತ ಮನವಿ ಸಲ್ಲಿಸಿತ್ತು. ಇದಕ್ಕೆ ಪಾಕಿಸ್ತಾನ ಸಮ್ಮತಿ ಸೂಚಿಸಿತ್ತು. ಪಾಕ್ ಗ್ರೀನ್ ಸಿಗ್ನಲ್ ಹೊರಬಿದ್ದ ಎರಡನೇ ದಿನದಲ್ಲಿ ಮೋದಿ ತೆರಳುವ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
"ಸದ್ಯ ಮೋದಿ ತೆರಳುವ ಮಾರ್ಗವನ್ನು ಅಂತಿಮಗೊಳಿಸಲಾಗಿದ್ದು, ಮೋದಿಯವರುವ ವಿವಿಐಪಿ ವಿಮಾನ ಒಮನ್, ಇರಾನ್ ಹಾಗೂ ಮಧ್ಯ ಏಷ್ಯಾ ದೇಶಗಳ ಮೂಲಕ ಬಿಶ್ಕೆಕ್ಗೆ ತೆರಳಲಿದ್ದಾರೆ" ಎಂದು ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ.