ಮುಂಬೈ: ಕ್ರಿಕೆಟ್ ಜಗತ್ತಿನಲ್ಲಿ ಹಲವು ಹೊಸ ಹೊಡೆತಗಳನ್ನು ಪರಿಚಯಿಸಿದ ಇಂಗ್ಲೆಂಡ್ ಕಂಡ ಗ್ರೇಟ್ ಕ್ರಿಕೆಟ್ ಪ್ಲೇಯರ್ ಕೆವಿನ್ ಪೀಟರ್ಸನ್ 'ಕನ್ನಡಿಗ ದ್ರಾವಿಡ್ರಿಂದ ಸ್ಪಿನ್ ಬೌಲರ್ಗಳ ಎದುರಿಸುವುದಕ್ಕೆ ಸಲಹೆ ಪಡೆದುಕೊಂಡಿದ್ದೆ' ಎಂದು ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಕೆವಿನ್ ಪೀಟರ್ಸನ್ ಇಂಗ್ಲೆಂಡ್ ಕಂಡ ಶ್ರೇಷ್ಠ ಕ್ರಿಕೆಟಿಗ. ಕ್ರಿಕೆಟ್ ಜಗತ್ತಿಗೆ 'ಸ್ಚಿಚ್ ಹಿಟ್' ಎಂಬ ಹೊಸ ಹೊಡೆತವನ್ನು ಪರಿಚಯಿಸಿದ ಈತ ಒಂದು ಕಾಲದಲ್ಲಿ ಯಾವುದೇ ಬೌಲರ್ಗೆ ಎದರದೇ ಕೆಚ್ಚೆದೆಯಿಂದ ಆಡುತ್ತಿದ್ದ. ಆದರೆ ಕಾಲಕ್ರಮೇಣ ಸ್ಪಿನ್ಬೌಲರ್ ಎದುರು ಸುಲಭವಾಗಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದು ಸಂಕಷ್ಟ ಎದುರಿಸಿದ್ದರು. ಆದರೆ ಭಾರತದ ದಿಗ್ಗಜ ದ್ರಾವಿಡ್ರಿಂದ ತಮ್ಮ ಸಮಸ್ಯೆ ಬಗೆಹರಿಯಿತೆಂದು ತಿಳಿಸಿದ್ದಾರೆ.
ವಾಟ್ ದಿ ಡಕ್ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ನಿರೂಪಕ ದ್ರಾವಿಡ್ ರನ್ನು ಬೇಟಿ ಮಾಡಿ ಸ್ಪಿನ್ಬೌಲರ್ಗಳನ್ನು ಎದುರಿಸುವುದು ಹೇಗೆ ಎಂಬುದರ ಬಗ್ಗೆ ಸಲಹೆ ಕೇಳಿದ್ದರ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕುತ್ತರಿಸಿದ ಕೆವಿನ್ '' ಶೇನ್ ವಾರ್ನ್,ಮುರುಳೀದರನ್,ವಿಟೋರಿಯಂತ ಸ್ಪಿನ್ನರ್ಗಳಿಗೆ ತುಂಬಾ ಚೆನ್ನಾಗಿ ಆಡುತ್ತಿದ್ದ ನನಗೆ ಡಿಆರ್ಎಸ್ ಜಾರಿಗೆ ಬಂದ ಮೇಲೆ ಹೆಚ್ಚು ಎಲ್ಬಿ ಬಲೆಗೆ ಬೀಳುತ್ತಿದ್ದೆ. ಅದೇ ಸಂದರ್ಭದಲ್ಲಿ ಐಪಿಎಲ್ ಆರಂಭವಾಗಿ ನನಗೆ ದ್ರಾವಿಡ್,ಕಾಲೀಸ್ರಂತಹ ಆಟಗಾರರ ಜೊತೆ ಆಡುವ ಅವಕಾಶ ಸಿಕ್ಕಿತು,
ಈ ವೇಳೆ ದ್ರಾವಿಡ್ರನ್ನು ಸ್ಪಿನ್ ಬೌಲರ್ ಎದುರು ಹೇಗೆ ಆಡಬೇಕೆಂದು ಸಲಹೆ ಕೇಳಿದ್ದೆ, ಇದಕ್ಕೆ ನೆರವಾಗಿದ್ದ ದ್ರಾವಿಡ್ ನನಗೆ ಮೇಲ್ ಮಾಡಿ, ಅದರಲ್ಲಿ ಸ್ಪಿನ್ ಬೌಲಿಂಗ್ ಹೇಗೆ ಎದುರಿಸಬೇಕೆಂದು ಸಂಪೂರ್ಣ ಮಾಹಿತಿ ನೀಡಿದ್ದರು. ಅದರ ಪ್ರಕಾರ ಅಭ್ಯಾಸ ಮಾಡಿ, ನನ್ನಲ್ಲಿ ಅಳವಡಿಸಿಕೊಂಡೆ ಎಂದು ದ್ರಾವಿಡ್ ಸಹಾಯವನ್ನು ನೆನೆದಿದ್ದಾರೆ.
- " class="align-text-top noRightClick twitterSection" data="">