ಜಮ್ಮು ಮತ್ತು ಕಾಶ್ಮೀರ: ಕಣಿವೆ ರಾಜ್ಯದಲ್ಲಿ ಪ್ರಾಣಿ ಹಾಗೂ ಮಾನವನ ಸಂಘರ್ಷಕ್ಕೆ ಹೊಸದೊಂದು ಸಾಕ್ಷಿ ದೊರೆತಿದೆ.
ಒಂದು ವಿಡಿಯೋದಲ್ಲಿ ಏಷ್ಯಾದ ಬೂದು ಕರಡಿ ಮಾನವ ನಿರ್ಮಿತ ಬೇಲಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದರೆ ಇನ್ನೊಂದರಲ್ಲಿ ಪರ್ವತವನ್ನು ಹತ್ತಲು ಪ್ರಯತ್ನಿಸುತ್ತಿರುವ ವೇಳೆ ಸ್ಥಳೀಯರು ಒಂದೇ ಸಮನೆ ಕಲ್ಲೆಸೆದು ಪ್ರಪಾತಕ್ಕೆ ತಳ್ಳುತ್ತಾರೆ.
ಜಮ್ಮು ಮತ್ತು ಕಾಶ್ಮೀರದ ಸುಮಾರು ಶೇ.25ರಷ್ಟು ಭಾಗದ ಕಾಡಿನಲ್ಲಿ ಕರಡಿಗಳು ವಾಸಿಸುತ್ತಿವೆ. ಕಣಿವೆ ರಾಜ್ಯದಲ್ಲಿ ಪ್ರಾಣಿ ಹಾಗೂ ಮಾನವನ ಸಂಘರ್ಷ ಆಗಾಗ್ಗೆ ನಡೆಯುತ್ತಲೇ ಇರುತ್ತವೆ.