ನವದೆಹಲಿ:ದ್ವಿಪಕ್ಷೀಯ ಸರಣಿಗಳನ್ನು ಆಡುವ ಒಪ್ಪಂದವನ್ನು ಪಾಲಿಸಲು ವಿಫಲವಾದ ಬಿಸಿಸಿಐ 70 ಮಿಲಿಯನ್(ಸುಮಾರು 450 ಕೋಟಿ )ನಷ್ಟ ಪರಿಹಾರ ಕೊಡಿಸಬೇಕೆಂಬ ಪಿಸಿಬಿ (ಪಾಕ್ ಕ್ರಿಕೆಟ್ ಮಂಡಳಿ) ಮನವಿಯವನ್ನು ತಿರಸ್ಕರಿಸುವ ಐಸಿಸಿ ಕಾನೂನು ವೆಚ್ಚವಾಗಿ ಬಿಸಿಸಿಐಗೆ 11 ಕೋಟಿ ನೀಡುವಂತೆ ಆದೇಶ ಹೊರಡಿಸಿದೆ.
ಭಾರತ ಮತ್ತು ಪಾಕಿಸ್ತಾನ ಮಧ್ಯೆ ರಾಯಭಾರ ಸಂಬಂಧಗಳು ಹದಗೆಟ್ಟಿರುವುದರಿಂದ ಗಡಿಭಾಗದಲ್ಲಿ ಕದನ ವಿರಾಮ ಉಲ್ಲಂಘನೆಯಾಗುತ್ತಿರುವುದರಿಂದ ಪಂದ್ಯಗಳಿಗೆ ಅನುಮೋದನೆ ನೀಡಲು ಭಾರತ ನಿರಾಕರಿಸಿತ್ತು.
ಇದರಿಂದ ಭಾರಿ ಮೊತ್ತದ ಪರಿಹಾರ ಕೋರಿ ಬಿಸಿಸಿಐ ವಿರುದ್ಧ ಐಸಿಸಿಗೆ ದೂರು ಸಲ್ಲಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಂತಿಮವಾಗಿ ತಾನೇ 11 ಕೋಟಿ ರೂಪಾಯಿ ದಂಡ ನೀಡಿದೆ. ಒಪ್ಪಂದದ ಅನ್ವಯ ಭಾರತ ಕ್ರಿಕೆಟ್ ತಂಡ ತನ್ನ ಜತೆ ದ್ವಿಪಕ್ಷೀಯ ಸರಣಿಗಳನ್ನಾಡದ ಹಿನ್ನೆಲೆಯಲ್ಲಿ ಬಿಸಿಸಿಐಯಿಂದ ಹೆಚ್ಚೂಕಡಿಮೆ 480 ಕೋಟಿ ರೂಪಾಯಿ ಪರಿಹಾರ ಕೊಡಿಸುವಂತೆ ಪಾಕ್ ಮಂಡಳಿ ಐಸಿಸಿಗೆ ಮನವಿ ಮಾಡಿಕೊಂಡಿತ್ತು. ಆದರೆ, ಪಿಸಿಬಿಯ ಮನವಿಯನ್ನು ತಿರಸ್ಕರಿಸಿ ಐಸಿಸಿ, ಕಾನೂನು ವೆಚ್ಚವಾಗಿ ಬಿಸಿಸಿಐಗೆ 11 ಕೋಟಿ ರೂಪಾಯಿ ನೀಡುವಂತೆ ಆದೇಶಿಸಿದೆ.