ಟ್ರೆಂಟ್ಬ್ರಿಡ್ಜ್: ವಿಶ್ವಕಪ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ಹೀನಾಯ ಪ್ರದರ್ಶನ ತೋರಿದ್ದು, ವೆಸ್ಟ್ ಇಂಡೀಸ್ ವಿರುದ್ಧ ಕೇವಲ 105 ರನ್ಗಳಿಗೆ ಸರ್ವಪತನ ಕಂಡಿದೆ.
ಟಾಸ್ ಗೆದ್ದು ಪಾಕಿಸ್ತಾನವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ ಹೋಲ್ಡರ್ ಪಡೆ ಪಂದ್ಯದ ಆರಂಭದಿಂದಲೂ ಹಿಡಿತ ಸಾಧಿಸಿತ್ತು.
ವೇಗಿಗಳಾದ ಓಶಾನೆ ಥೋಮಸ್, ಜೇಸನ್ ಹೋಲ್ಡರ್ ಬಿರುಸಿನ ಬೌಲಿಂಗ್ಗೆ ತತ್ತರಿಸಿದ ಸರ್ಫರಾಜ್ ಪಡೆ ನೂರು ರನ್ ಗಳಿಸುವಷ್ಟರಲ್ಲಿ ಸುಸ್ತಾಯಿತು. ಫಖರ್ ಜಮಾನ್ ಹಾಗೂ ಬಾಬರ್ ಅಜಮ್ ಗಳಿಸಿದ ತಲಾ 22 ರನ್ ವೈಯಕ್ತಿಕ ಗರಿಷ್ಠ ಸ್ಕೋರ್.
ವಿಶ್ವಕಪ್ ಸಮರ : ಉದ್ಘಾಟನಾ ಪಂದ್ಯದಲ್ಲೇ ಅದ್ಭುತ ಕ್ಯಾಚ್ ಪಡೆದ ಬೆನ್ ಸ್ಟೋಕ್ಸ್..!
ಪಾಕ್ ತಂಡದಲ್ಲಿ ಒಟ್ಟಾರೆ ನಾಲ್ವರು ಎರಡಂಕಿ ಗಡಿ ದಾಟಿದರೆ ಉಳಿದವರು ಬಂದ ದಾರಿಯನ್ನು ಅಷ್ಟೇ ವೇಗವಾಗಿ ಹಿಡಿದರು. ಪರಿಣಾಮ 21.4 ಓವರ್ನಲ್ಲಿ 105 ರನ್ ಗಳಿಸಿ ಪಾಕಿಸ್ತಾನ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಕೆರಬಿಯನ್ನರ ಪರ ಓಶಾನೆ ಥೋಮಸ್ ನಾಲ್ಕು, ಹೋಲ್ಡರ್ ಮೂರು ಹಾಗೂ ಆಂಡ್ರೆ ರಸೆಲ್ ಎರಡು ವಿಕೆಟ್ ಪಡೆದು ಮಿಂಚಿದರು.