ಮಂಗಳೂರು: ಜರ್ಮನಿಯಲ್ಲಿರುವ ಡಿಸಿಪಿ ಹರಿರಾಂ ಶಂಕರ್ ಗೆಳೆಯರಿಬ್ಬರು ಮಂಗಳೂರು ಪೊಲೀಸರ ಉಪಯೋಗಕ್ಕೆ ಆಕ್ಸಿಜನ್ ಕಾನ್ಸಂಟ್ರೇಟರ್ ನೆರವು ನೀಡಿದ್ದಾರೆ.
ಡಿಸಿಪಿ ಹರಿರಾಂ ಶಂಕರ್ ಅವರು ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಗೆಳೆಯರಾಗಿದ್ದ ರಿಶಿತ್ ಮತ್ತು ರಿತ್ವಿಕ್ ಎಂಬುವರು ಜರ್ಮನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಡಿಸಿಪಿ ಹರಿರಾಂ ಶಂಕರ್ ಜೊತೆಗೆ ಮಾತನಾಡುವ ವೇಳೆ ಪೊಲೀಸ್ ಇಲಾಖೆಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಅಗತ್ಯವಿದೆಯಾ ಎಂದು ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಕೋವಿಡ್ ಸೋಂಕಿತ ಪೊಲೀಸರಿಗೆ ಈಗಾಗಲೇ ಆರಂಭಿಸಲಾದ ಕೋವಿಡ್ ಕೇರ್ ಸೆಂಟರ್ಗೆ ಒಂದು ಆಕ್ಸಿಜನ್ ಕಾನ್ಸಂಟ್ರೇಟರ್ ಅಗತ್ಯದ ಬಗ್ಗೆ ಡಿಸಿಪಿ ತಿಳಿಸಿದ್ದಾರೆ.
ಅದರಂತೆ ಅವರ ಗೆಳೆಯರು ಒಂದು ಆಕ್ಸಿಜನ್ ಕಾನ್ಸಂಟ್ರೇಟರ್ಅನ್ನು ಜರ್ಮನಿಯಿಂದ ಕಳುಹಿಸಿಕೊಟ್ಟಿದ್ದಾರೆ. ಇದನ್ನು ಇಂದು ಮಂಗಳೂರಿನಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಕೋವಿಡ್ ಕೇರ್ ಸೆಂಟರ್ ಉಸ್ತುವಾರಿ ವಹಿಸಿರುವ ಡಾ. ಶ್ರೀನಿಧಿ ಅವರಿಗೆ ಹಸ್ತಾಂತರಿಸಿದರು.