ETV Bharat / briefs

ನಗರದ ಎಲ್ಲ ಕೋವಿಡ್ ಕೇಂದ್ರಗಳಲ್ಲಿ ಆಕ್ಸಿಜನ್ ಕಾನ್ಸಂಟ್ರೇಟ್​​ ಲಭ್ಯ: ಆರ್.ಅಶೋಕ್

author img

By

Published : May 12, 2021, 9:13 PM IST

ಕೋವಿಡ್ ಪಾಸಿಟಿವ್ ಎಂದ ತಕ್ಷಣ ಆಕ್ಸಿಜನ್ ಬೆಡ್​ಗಳನ್ನ ಹುಡುಕುವ ಪ್ರಯತ್ನ ಬೇಡ. ಮೊದಲು ಆರೈಕೆ ಕೇಂದ್ರಕ್ಕೆ ಭೇಟಿ ಕೊಡಿ. ನಗರದಲ್ಲಿ ಒಟ್ಟು 17 ಆರೈಕೆ ಕೇಂದ್ರಗಳಿವೆ. ಅವುಗಳಲ್ಲಿ ಸಾವಿರಕ್ಕಿಂತಲೂ ಹೆಚ್ಚು ಬೆಡ್‌ಗಳಿವೆ. ಹೀಗಾಗಿ ಮೊದಲು ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಿ ಎಂದು ಸಚಿವ ಆರ್​ ಅಶೋಕ್​ ಹೇಳಿದ್ದಾರೆ.

R Ashok
R Ashok

ಬೆಂಗಳೂರು: ಹಾಸಿಗೆ ನೀಡದೇ ಕಣ್ಣಾಮುಚ್ಚಾಲೆ ಆಡುತ್ತಿದ್ದ ಖಾಸಗಿ ಆಸ್ಪತ್ರೆಗಳ ಮೇಲೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾದ ತಕ್ಷಣ ಹಲವು ಆಸ್ಪತ್ರೆಗಳು ತಮ್ಮ ಬಳಿಯಿರುವ ಹಾಸಿಗೆಗಳನ್ನ ನೀಡಲು ಮುಂದೆ ಬರುತ್ತಿವೆ. ಇದರಿಂದ ಲಭ್ಯ ಬೆಡ್​ಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಹೊಸಕೆರೆಹಳ್ಳಿ ವಾರ್ಡ್‍ನ ರೆಫೆರೆಲ್ ಆಸ್ಪತ್ರೆಯಲ್ಲಿ ಸಿದ್ಧಗೊಂಡಿರುವ ಕೋವಿಡ್ ಆರೈಕೆ ಕೇಂದ್ರ ಹಾಗೂ ಇದೇ ವಾರ್ಡ್‍ನಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಸ್ಥಳಕ್ಕೆ ಭೇಟಿ ನೀಡಿದ ನಂತರ ವಿಷಯ ತಿಳಿಸಿದರು.

ರೆಮ್ಡೆಸಿವಿರ್ ಕುರಿತಂತೆ ಸಾಕಷ್ಟು ಮಾತುಗಳು ಕೇಳಿ ಬರುತ್ತಿವೆ. ಆದರೆ, ಸದ್ಯ ನಮ್ಮಲ್ಲಿ ರೆಮ್ಡೆಸಿವಿರ್ ಕೊರತೆ ಇಲ್ಲ. ಔಷಧ ಕಂಪನಿಯವರು ಅಗತ್ಯವಿರುವಷ್ಟು ನೀಡದೇ ಸಮಸ್ಯೆ ಉಂಟು ಮಾಡಿದ್ದವು. ಅವರಿಗೆ ನೋಟೀಸ್ ನೀಡಿದ ನಂತರ ಈಗ ಅವರಿಂದ ಮೆಡಿಸಿನ್ ಪೂರೈಕೆ ಆಗುತ್ತಿದೆ ಎಂದರು.

ಕೋವಿಡ್ ಪರೀಕ್ಷೆಗಳನ್ನ ಯಾವುದೇ ಕಾರಣಕ್ಕೂ ನಿಲ್ಲಿಸಿಲ್ಲ. ಆದರೆ, ಯಾರಿಗೆ ಪರೀಕ್ಷೆ ನಡೆಸಬೇಕು ಎಂಬುದರ ಕುರಿತು ಅಧಿಸೂಚನೆ ಹೊರಡಿಸಿದ್ದೇವೆ. ಆ ಪ್ರಕಾರ ಸೋಂಕಿನ ಲಕ್ಷಣಗಳಿರುವ ಐಎಲ್​ಐ, ಎಸ್‍ಎಆರ್​ಐ ಹಾಗೂ ಸೋಂಕಿತರ ಮನೆಯಲ್ಲಿರುವ ಎಲ್ಲರಿಗೂ ಪರೀಕ್ಷೆ ಮಾಡಲು ಸೂಚನೆ ನೀಡಲಾಗಿದೆ. ಸೋಂಕಿನಿಂದ ಸಾವನ್ನಪ್ಪಿರುವವರಿಗೆ ಗೌರವಯುತವಾದ ಶಸವಸಂಸ್ಕಾರವಾಗಬೇಕು ಎಂಬ ಕಾಳಜಿಯಿಂದ ಸರ್ಕಾರ ಇದಕ್ಕಾಗಿ ಒಂದು ಸಹಾಯವಾಣಿ ತೆರೆಯಲಿದೆ. ಈ ಸಹಾಯವಾಣಿ ದಿನದ 24 ತಾಸು ಕಾರ್ಯನಿರ್ವಹಿಸಲಿದ್ದು, ನಗರದಲ್ಲಿ ಸೋಂಕಿತರು ಸಾವನ್ನಪ್ಪಿದ ಸಮಯದಲ್ಲಿ ಈ ಸಹಾಯವಾಣಿ 8495998495ಗೆ ಕರೆ ಮಾಡಿದರೆ ಚಿತಾಗಾರಕ್ಕೆ ಕೊಂಡೊಯ್ಯಲು ಉಚಿತ ಶವ ವಾಹನ ನೀಡಲಾಗುವುದು. ಇದಕ್ಕಾಗಿ ಸಹಾಯವಾಣಿಯೇ ಸಮಯ ನಿಗದಿಪಡಿಸಿ ವಾಹನ ವ್ಯವಸ್ಥೆ ಮಾಡಲಿದೆ. ಇದರಿಂದ ಚಿತಾಗಾರಗಳ ಮುಂದೆ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ ಎಂದು ತಿಳಿಸಿದರು.

ಕೋವಿಡ್ ಪಾಸಿಟಿವ್ ಎಂದ ತಕ್ಷಣ ಆಕ್ಸಿಜನ್ ಬೆಡ್​ಗಳನ್ನ ಹುಡುಕುವ ಪ್ರಯತ್ನ ಬೇಡ. ಮೊದಲು ಆರೈಕೆ ಕೇಂದ್ರಕ್ಕೆ ಭೇಟಿ ಕೊಡಿ. ನಗರದಲ್ಲಿ ಒಟ್ಟು 17 ಆರೈಕೆ ಕೇಂದ್ರಗಳಿವೆ. ಅವುಗಳಲ್ಲಿ ಸಾವಿರಕ್ಕಿಂತಲೂ ಹೆಚ್ಚು ಬೆಡ್‌ಗಳಿವೆ. ಹೀಗಾಗಿ ಮೊದಲು ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಿ. ಅಲ್ಲಿನ ವೈದ್ಯರು ನಿಮ್ಮ ಆರೋಗ್ಯ ಸ್ಥಿತಿಯನ್ನ ಪರಿಶೀಲನೆ ಮಾಡುತ್ತಾರೆ. ನಗರದ ಪ್ರತೀ ಕೋವಿಡ್ ಕೇರ್ ಸೆಂಟರ್​ನಲ್ಲಿಯೂ 20 ರಿಂದ 30 ಆಕ್ಸಿಜನ್ ಕಾನ್ಸನ್ಟ್ರೇ​ಟರ್‌ಗಳನ್ನ ಅಳವಡಿಸಲಾಗುತ್ತಿದೆ. ಇದರಿಂದ ಸೋಂಕಿತರಿಗೆ ಆಕ್ಸಿಜನ್ ಅಗತ್ಯ ಬಂದರೆ ಕೂಡಲೇ ವೈದ್ಯರು ಅಲ್ಲೇ ಲಭ್ಯವಿರುವ ಕಾನ್ಸಂಟ್ರೇಟ್​​​ ಮೂಲಕ ಚಿಕಿತ್ಸೆ ನೀಡುತ್ತಾರೆ. ಎರಡ್ಮೂರು ದಿನಗಳಲ್ಲಿ ಇನ್ನೂ 500 ಕಾನ್ಸಟ್ರೇಟರ್‌ಗಳು ಲಭ್ಯವಾಗಲಿವೆ. ಒಟ್ಟು 1200 ರಿಂದ 1300 ಆಕ್ಸಿಜೆನ್ ಕಾನ್ಸ್ಟ್ರೇಟರ್​ಗಳನ್ನ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿನ ಹೊಸಕೆರೆಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನವನ್ನ 50 ಹಾಸಿಗೆಗಳ ಮಕ್ಕಳ ಆಸ್ಪತ್ರೆಯಾಗಿ ಬದಲಾವಣೆ ಮಾಡಲು ಸೂಚಿಸಿದ್ದು, ಇದಕ್ಕಾಗಿ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನ ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ವ್ಯಾಕ್ಸಿನ್ ಗೊಂದಲ ನಿವಾರಿಸಿ, 2ನೇ ಡೋಸ್ ಪಡೆಯುವವರಿಗೆ ಮೊದಲ ಆದ್ಯತೆ ನೀಡಿ​: ಬಿಎಸ್​​​ವೈ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.