ETV Bharat / briefs

ಅದ್ಧೂರಿ ವಿಶ್ವಕಪ್​ಗೆ ಇಂದು ವೈಭವದ ಚಾಲನೆ: ಕಂಡರಿಯದ ರೀತಿಯಲ್ಲಿ ಉದ್ಘಾಟನಾ ಸಮಾರಂಭ! - ಲಂಡನ್​ ಪ್ರಧಾನಿ

ನಾಳೆಯಿಂದ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್​ ಕ್ರಿಕೆಟ್‌ ಪಂದ್ಯಾವಳಿ ಹಿನ್ನೆಲೆಯಲ್ಲಿ ಇಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ವಿಜೃಂಭಣೆಯಿಂದ ನಡೆಸಲು ಐಸಿಸಿ ಪ್ಲಾನ್​ ಹಾಕಿಕೊಂಡಿದೆ.

ವಿಶ್ವಕಪ್
author img

By

Published : May 29, 2019, 1:53 PM IST

ಲಂಡನ್​: ಬಹುನಿರೀಕ್ಷಿತ ಐಸಿಸಿ ವಿಶ್ವಕಪ್​ ಮಹಾಮೇಳದ ಪಂದ್ಯಗಳು ನಾಳೆಯಿಂದ ಆರಂಭಗೊಳ್ಳಲಿದ್ದು, ಅದಕ್ಕೂ ಮುನ್ನಾದಿನವಾದ ಇಂದು ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ.

ಸೆಂಟ್ರಲ್​​ ಲಂಡನ್​​ನ 'ದಿ ಮಾಲ್' ಎಂಬ ನಗರದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಹಿಂದಿನಿಗಿಂತಲೂ ಮತ್ತಷ್ಟು ಅದ್ಧೂರಿಯಾಗಿ ಸಮಾರಂಭ ನಡೆಸಲು ಐಸಿಸಿ ಸಜ್ಜಾಗಿದೆ. ಕಾರ್ಯಕ್ರಮದಲ್ಲಿ ಲೈವ್​ ಸ್ಪೋರ್ಟ್ಸ್​​, ಸಂಗೀತ ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಗಳು ನಡೆಯಲಿದ್ದು, 4 ಸಾವಿರ ಅಭಿಮಾನಿಗಳು ಈ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ. ಈ ಹಿಂದೆ ನಡೆದಿರುವ ವಿಶ್ವಕಪ್​ಗಳಿಗಿಂತಲೂ ವಿಭಿನ್ನವಾಗಿ ಹಾಗೂ ಅದ್ಧೂರಿಯಾಗಿ ಈ ಕಾರ್ಯಕ್ರಮ ನಡೆಸಲು ಐಸಿಸಿ ಯೋಜನೆ​ ಹಾಕಿಕೊಂಡಿದ್ದು, ಅತೀ ಹೆಚ್ಚು ಹಣ ಕೂಡ ವೆಚ್ಚ ಮಾಡುವ ಸಾಧ್ಯತೆ ಇದೆ.

ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಿರುವ ತಂಡಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗುತ್ತಿಲ್ಲ. ಆದರೆ, ಅನೇಕ ಮಾಜಿ ದಿಗ್ಗಜ ಕ್ರಿಕೆಟರ್​ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಲಂಡನ್​ ಪ್ರಧಾನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಲಿದ್ದಾರೆ.

ನಾಳೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್​-ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ. 45 ದಿನಗಳ ಕಾಲ ಒಟ್ಟು 48 ಪಂದ್ಯಗಳು ನಡೆಯಲಿದ್ದು, ಜುಲೈ 14 ರಂದು ಕ್ರಿಕೆಟ್‌ ಕಾಶಿ ಲಾರ್ಡ್ಸ್​​ ಮೈದಾನದಲ್ಲಿ ಫೈನಲ್​ ಪಂದ್ಯ ನಡೆಯಲಿದೆ.

Intro:Body:

ಅದ್ಧೂರಿ ವಿಶ್ವಕಪ್​ಗೆ ಇಂದು ಚಾಲನೆ: ಹಿಂದೆಂದು ನಡೆಯದ ರೀತಿಯಲ್ಲಿ ಉದ್ಘಾಟನಾ ಸಮಾರಂಭ!

ಲಂಡನ್​: ಬಹುನೀರಿಕ್ಷಿತ ಐಸಿಸಿ ವಿಶ್ವಕಪ್​ ಮಹಾಟೂರ್ನಿಯ ಕ್ರಿಕೆಟ್​​ ಪಂದ್ಯಗಳು ನಾಳೆಯಿಂದ ಆರಂಭಗೊಳ್ಳಲಿದ್ದು, ಅದಕ್ಕೂ ಮುನ್ನಾದಿನವಾದ ಇಂದು ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ. 

ಸೆಂಟ್ರಲ್​​ ಲಂಡನ್​​ನ 'ದಿ ಮಾಲ್' ಎಂಬ ನಗರದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಈ ಹಿಂದಿನಿಗಿಂತಲೂ ಹೆಚ್ಚು ಅದ್ಧೂರಿಯಾಗಿ ಸಮಾರಂಭ ನಡೆಸಲು ಐಸಿಸಿ ಮುಂದಾಗಿದೆ. ಕಾರ್ಯಕ್ರಮದಲ್ಲಿ ಲೈವ್​ ಸ್ಪೋರ್ಟ್ಸ್​​, ಸಂಗಿತ ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಗಳು ನಡೆಯಲಿದ್ದು, 4 ಸಾವಿರ ಫ್ಯಾನ್ಸ್​ ಭಾಗಿಯಾಗಲಿದ್ದಾರೆ. 

ಇನ್ನು ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಿರುವ ತಂಡಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗುತ್ತಿಲ್ಲ. ಆದರೆ ಅನೇಕ ಮಾಜಿ ದಿಗ್ಗಜ ಕ್ರಿಕೆಟರ್​ ಇದರಲ್ಲಿ ಭಾಗಿಯಾಗಲಿದ್ದಾರೆ. ಲಂಡನ್​ ಪ್ರಧಾನಿ ಕಾರ್ಯಕ್ರಮ ಉದ್ಘಾಟನೆ ಮಾಡಿ, ಮಾತನಾಡಲಿದ್ದಾರೆ. ನಾಳೆ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್​-ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ. 45 ದಿನಗಳ ಕಾಲ ಒಟ್ಟು 48 ಪಂದ್ಯಗಳು ನಡೆಯಲಿದ್ದು, ಜುಲೈ 14ರಂದು ಲಾರ್ಡ್ಸ್​​ ಮೈದಾನದಲ್ಲಿ ಫೈನಲ್​ ಪಂದ್ಯ ನಡೆಯಲಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.