ETV Bharat / briefs

ಆನ್‌ಲೈನ್ ತರಗತಿಗೆ ಎನ್​ಎಸ್​ಯೂಐ ವಿರೋಧ: ಸಿಎಂಗೆ ಪತ್ರ

ರಾಜ್ಯ ಸರ್ಕಾರದ ಆನ್‌ಲೈನ್ ಶಿಕ್ಷಣ ನಿರ್ಧಾರವನ್ನು ವಿರೋಧಿಸಿ ಎನ್​ಎಸ್​ಯೂಐ ಸಂಘಟನೆಯ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ ಅವರು ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.

Nsui letter to bs yaditurappa for cancel online education system

author img

By

Published : Jun 8, 2020, 11:41 PM IST

ಮುದ್ದೇಬಿಹಾಳ: ಆನ್‌ಲೈನ್ ಶಿಕ್ಷಣ ಜಾರಿ ಮಾಡಿದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಸರ್ಕಾರದ ಇಂತಹ ಅವೈಜ್ಞಾನಿಕ ನಿರ್ಧಾರವನ್ನು ವಿರೋಧಿಸುವುದಾಗಿ ಎನ್​​ಎಸ್​ಯುಐ ಸಂಘಟನೆ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ ತಿಳಿಸಿದ್ದಾರೆ.

ಈ ಕುರಿತು ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಅವರು, ಎಷ್ಟೋ ಪೋಷಕರ ಬಳಿ ಸ್ಮಾರ್ಟ್ ಫೋನ್ ಇಲ್ಲ. ಎಲ್ಲ ವ್ಯವಸ್ಥೆ ಇದ್ದರೂ ನೆಟ್​​ವರ್ಕ್ ಸಿಗಲ್ಲ. ಶಿಕ್ಷಕರು ಏನಾದರೂ ಬೋರ್ಡ್ ಮೇಲೆ ಬರೆದರೆ ಅದು ಮೊಬೈಲ್ ಪರದೆ ಮೇಲೆ ಸರಿಯಾಗಿ ಕಾಣುವುದಿಲ್ಲ, ಲ್ಯಾಪ್‌ಟಾಪ್ ಬೇಕಾಗುತ್ತದೆ.

Nsui letter to bs yaditurappa for cancel online education system
ಎನ್.ಎಸ್.ಯೂ.ಐ ಸಂಘಟನೆ ಪತ್ರ

ಇದಕ್ಕಾಗಿ ಮಕ್ಕಳು ಪಾಲಕರ ಮೇಲೆ ಲ್ಯಾಪ್‌ಟಾಪ್, ಸ್ಮಾರ್ಟ್ ಫೋನ್‌ಗಾಗಿ ಬೇಡಿಕೆ ಸಲ್ಲಿಸಲು ಶುರು ಮಾಡುತ್ತಾರೆ. ಕೊರೊನಾದಿಂದ ಗ್ರಾಮೀಣ ಪ್ರದೇಶಕ್ಕೆ ಬಂದಿದ್ದ ಐಟಿ ಕಂಪನಿಗಳ ಉದ್ಯೋಗಿಗಳು ನೆಟ್‌ವರ್ಕ ಸಿಗದ ಕಾರಣ ವಾಪಸ್ ನಗರಗಳಿಗೆ ತೆರಳುತ್ತಿದ್ದಾರೆ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಅವಸರದಲ್ಲಿ ಈ ಆನ್​ಲೈನ್ ಶಿಕ್ಷಣ ಜಾರಿಗೆ ಸರ್ಕಾರ ಮುಂದಾಗಬಾರದು ಎಂದು ಮನವಿ ಮಾಡಿಕೊಳ್ಳುವುದಾಗಿ ಸಿಎಂಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.