ಬೆಂಗಳೂರು: ನಾನು ಎಲ್.ಕೆ. ಅಡ್ವಾಣಿ ಅವರ ರೀತಿ ನಾನು ರಾಜಕೀಯ ನಿವೃತ್ತಿ ಪಡೆಯಲ್ಲ. ಮೊದಲು ನನ್ನ ಪಕ್ಷ ಉಳಿಸುತ್ತೇನೆ ಆ ಬಳಿಕವೇ ಪಕ್ಷದ ಕಚೇರಿ ಉಳಿಸುವ ಬಗ್ಗೆ ಯೋಚಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ಕರ್ನಾಟಕದಲ್ಲಿ ನಿನ್ನೆ ಮೊದಲ ಹಂತದ ಮತದಾನ ಪೂರ್ಣಗೊಂಡ ಬಳಿಕ ಖಾಸಗಿ ಮಾಧ್ಯಮ ಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ಕಳೆದ ಮೂರು ವರ್ಷಗಳ ಹಿಂದೆ ನಿವೃತ್ತಿ ಪಡೆಯುವುದಾಗಿ ಹೇಳಿದ್ದು ನಿಜ. ಆದರೆ, ಬದಲಾದ ಸನ್ನಿವೇಶದಲ್ಲಿ ಚುನಾವಣೆಗೆ ಮತ್ತೆ ನಿಲ್ಲುವ ಪರಿಸ್ಥಿತಿ ಬಂತು, ಜನರು ಮತ್ತೆ ಚುನಾವಣೆಗೆ ನಿಲ್ಲಬೇಕು ಎಂದು ಒತ್ತಡ ಹೇರಿದರು. ಇದರಲ್ಲಿ ಯಾವುದೂ ಮುಚ್ಚಿಡುವುದು ಇಲ್ಲ. ಆದರೆ ನಾನು ಸಕ್ರಿಯ ರಾಜಕಾರಣದಿಂದ ಯಾವತ್ತೂ ನಿವೃತ್ತಿ ಪಡೆಯಲ್ಲ ಎಂದೂ ಘೋಷಿಸಿದರು.
ಇದೇ ವೇಳೆ ಮಾತನಾಡಿದ ಅವರು, ಮೋದಿ ಪಿಎಂ ಆದರೆ ಮತ್ತೆ ಅವರನ್ನ ಪ್ರಶ್ನಿಸುವ ಅವರ ನಡೆಗಳನ್ನ ಪ್ರಶ್ನಿಸುವ ಧೈರ್ಯ ಬಂದಿದೆ. ಒಂದೊಮ್ಮೆ ರಾಹುಲ್ ಪ್ರಧಾನಿ ಆದರೆ ನಾನು ಅವರ ಪರವೇ ನಿಲ್ಲುತ್ತೇನೆ. ಆದರೆ ನಾನು ಪ್ರಧಾನಿ ಆಗುವ ಪ್ರಮೇಯವೇ ಬರಲ್ಲ ಎಂದೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಮ್ಮದು ಸಣ್ಣ ಪಕ್ಷ, ಅಂತಹ ಪಕ್ಷಕ್ಕೆ ಬೆಂಬಲ ನೀಡುವ ನಿರ್ಣಯವನ್ನ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ತೆಗೆದುಕೊಂಡಿದ್ದಾರೆ. ಅವರ ಕಮಿಟ್ಮೆಂಟ್ ಗಾಗಿ ನಾನು ಧನ್ಯವಾದ ಸಲ್ಲಿಸುತ್ತೇನೆ. ಕಾಂಗ್ರೆಸ್ ಪರವೇ ನಾನು ನಿಲ್ಲುತ್ತೇನೆ ಎಂದು ದೇವೇಗೌಡ ಹೇಳಿದ್ದಾರೆ.