ಮುಂಬೈ: ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲು ಕೆಲ ಗಂಟೆಗಳಷ್ಟೇ ಬಾಕಿ ಇದ್ದು ಈ ನಡುವೆ ಮುಂಬೈ ಷೇರು ಮಾರುಕಟ್ಟೆಯಲ್ಲಿ ಧನಾತ್ಮಕ ಬದಲಾವಣೆಯಾಗಿದೆ.
ನಿಫ್ಟಿ ಶೇ.0.47 ಏರಿಕೆಯಾಗಿ 11,917.50 ಅಂಕಗಳಿಗೆ ಬಂದು ನಿಂತಿದ್ದರೆ ಸೆನ್ಸೆಕ್ಸ್ ಶೇ 0.56ರಷ್ಟು ಹೆಚ್ಚಳವಾಗಿ 39,722.45 ಅಂಕ ತಲುಪಿದೆ. ಇದರ ಜೊತೆಗೆ ಡಾಲರ್ ಎದುರು ರೂಪಾಯಿ ಮೌಲ್ಯ ಶೇ.0.18ರಷ್ಟು ಏರಿಕೆಯಾಗಿದ್ದು 69.70 ಬೆಲೆಗೆ ಬಂದು ನಿಂತಿದೆ.
ಮೋದಿ 2.0 ನಲ್ಲಿ ಕೋಟ್ಯಾಂತರ ಶ್ರೀಸಾಮನ್ಯರಿಗೆ ಉಡಾನ್ ಇನ್ನೂ ಹತ್ತಿರ?
ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ ವೇಳೆಯಲ್ಲಿ ಷೇರು ಮಾರುಕಟ್ಟೆ ಭರ್ಜರಿ ವಹಿವಾಟು ನಡೆಸಿತ್ತು. ಸೆನ್ಸೆಕ್ಸ್ ದಾಖಲೆಯ ನಲ್ವತ್ತು ಸಾವಿರ ಅಂಕ ತಲುಪಿತ್ತು. ಈ ಮೂಲಕ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ನೂತನ ಇತಿಹಾಸ ಬರೆದಿತ್ತು.
ಇಂದಿನ ವಹಿವಾಟಿನಲ್ಲಿ ಟಾಟಾ ಕನ್ಸಲ್ಟನ್ಸಿ ಹಾಗೂ ಅದಾನಿ ಪವರ್ ಉತ್ತಮ ಲಾಭ ಪಡೆದುಕೊಂಡಿದೆ. ಇಂದಿನ ಈ ವಹಿವಾಟು ನಾಳಿನ ವ್ಯವಹಾರದಲ್ಲಿ ಧನಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.