ETV Bharat / briefs

‘ಕೋಟಿ ನಾಟಿ’ ಹಸಿರಿಕರಣಕ್ಕೆ ಚಾಲನೆ.. ಮುಂದಿನ ಜೂನ್ 5 ರೊಳಗೆ ಗಿನ್ನಿಸ್ ರೆಕಾರ್ಡ್ ಸೇರುತ್ತಾ ತುಮಕೂರು? - undefined

ಜಿಲ್ಲಾ ಪಂಚಾಯತ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಬೆಂಗಳೂರು ರೋಟರಿ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಕೋಟಿ ನಾಟಿ’ ಹಸಿರಿಕರಣದ ಜನಾಂದೋಲನ ಕಾರ್ಯಗಾರವನ್ನು ಉದ್ಘಾಟಿಸಲಾಯಿತು.

‘ಕೋಟಿ ನಾಟಿ’ ಹಸಿರಿಕರಣಕ್ಕೆ ಚಾಲನೆ..
author img

By

Published : May 14, 2019, 9:38 PM IST

ತುಮಕೂರು: ಮುಂದಿನ ಜೂನ್ 5 ರ ವಿಶ್ವ ಪರಿಸರ ದಿನಾಚರಣೆಯಂದು ತುಮಕೂರು ಜಿಲ್ಲೆಯಲ್ಲಿ ಒಂದು ಕೋಟಿ ಗಿಡಗಳನ್ನು ನೆಡುವ ಮೂಲಕ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರುವ ಸಂಬಂಧ ಸಾರ್ವಜನಿಕರೊಂದಿಗೆ ಚರ್ಚಿಸಿ ಕಾರ್ಯಕ್ರಮವನ್ನು ರೂಪಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಬೆಂಗಳೂರು ರೋಟರಿ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಕೋಟಿ ನಾಟಿ’ ಹಸಿರಿಕರಣದ ಜನಾಂದೋಲನ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. 1 ಕೋಟಿ ಗಿಡಗಳನ್ನು ಜಿಲ್ಲೆಯಲ್ಲಿ ನೆಡಬೇಕು. ರೋಟರಿ ಸಂಸ್ಥೆ ತುಮಕೂರು ತಾಲೂಕಿನಲ್ಲಿ ಒಂದು ಕೋಟಿ ಸಸಿಗಳನ್ನು ನಡೆಲು ಕಾರ್ಯಕ್ರಮ ರೂಪಿಸಿದೆ. ಪ್ರತಿ ತಾಲೂಕಿನಲ್ಲೂ 10 ಲಕ್ಷ ಸಸಿ, ಜಿಲ್ಲೆಯಲ್ಲಿ ಒಂದು ಕೋಟಿ ಗಿಡ ನೀಡಲು ಮುಂದಾಗಬೇಕು. ಇದಕ್ಕೆ ಎಲ್ಲ ರೀತಿಯ ನೆರವನ್ನು ಒದಗಿಸಲಾಗುವುದು ಎಂದು ತಿಳಿಸಿದರು.

‘ಕೋಟಿ ನಾಟಿ’ ಹಸಿರಿಕರಣಕ್ಕೆ ಚಾಲನೆ..

ಜೂನ್ 5 ರಂದು ಜಿಲ್ಲೆಯಲ್ಲಿ 1 ಕೋಟಿ ಗಿಡಗಳನ್ನು ನೆಟ್ಟು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಅನ್ನು ಸೇರಬೇಕು. ಇದಕ್ಕಾಗಿ ಸಾರ್ವಜನಿಕರ ಸಹಕಾರವೂ ಅತ್ಯಗತ್ಯ. ಈ ಕಾರ್ಯಕ್ರಮಕ್ಕೆ ಸ್ವ ಸಹಾಯ ಸಂಸ್ಥೆಗಳು, ಸಂಘ-ಸಂಸ್ಥೆಗಳು, ಆಶಾ ಕಾರ್ಯಕರ್ತೆಯರು ಹಾಗೂ ಸಮುದಾಯದ ಜನರು ಭಾಗವಹಿಸಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಹುರಿದುಂಬಿಸಿದರು.

ಕಾರ್ಯಗಾರದಲ್ಲಿ ಮಾತನಾಡಿದ ರೋಟರಿ ‘ಕೋಟಿ ನಾಟಿ’ ಅಧ್ಯಕ್ಷರಾದ ಅಮರ ನಾರಾಯಣ, ಪೋಲಿಯೋವನ್ನು ಮುಕ್ತಗೊಳಿಸಿದಂತೆ ಭೂ ಮಾತೆಗೆ ಅಂಟಿಕೊಂಡಿರುವ ಮಾಲಿನ್ಯವನ್ನು ಗಿಡ ನೆಡುವ ಮೂಲಕ ಹೋಗಲಾಡಿಸಬೇಕು. ಜಿಲ್ಲೆಯಲ್ಲಿ ಶೇ. 6.58 ರಷ್ಟು ಅರಣ್ಯ ಪ್ರದೇಶ ಮಾತ್ರವಿದೆ ಎಂದರು. ಇದೇ ಸಂದರ್ಭದಲ್ಲಿ ‘ಕೋಟಿ ನಾಟಿ’ ಹಸಿರಿಕರಣದ ಒಡಂಬಡಿಕೆಗೆ ಸಹಿ ಹಾಕಲಾಯಿತು.

Intro:ತುಮಕೂರು: ಮುಂದಿನ ಜೂನ್ 5 ರ ವಿಶ್ವ ಪರಿಸರ ದಿನಾಚರಣೆಯಂದು ತುಮಕೂರು ಜಿಲ್ಲೆಯಲ್ಲಿ ಒಂದು ಕೋಟಿ ಗಿಡಗಳನ್ನು ನೆಡುವ ಮೂಲಕ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸ್ಥಾಪಿಸುವ ಸಂಬಂಧ ಸಾರ್ವಜನಿಕರೊಂದಿಗೆ ಚರ್ಚಿಸಿ ಕಾರ್ಯಕ್ರಮವನ್ನು ರೂಪಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅಧಿಕಾರಿಗಳಿಗೆ ಸೂಚಿಸಿದರು.

Body:ಜಿಲ್ಲಾ ಪಂಚಾಯತ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗು ಬೆಂಗಳೂರು ರೋಟರಿ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ 'ಕೋಟಿ ನಾಟಿ' ಹಸಿರೀ ಕರಣದ ಜನ ಜನಾಂದೋಲನ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
1 ಕೋಟಿ ಗಿಡಗಳನ್ನು ತುಮಕೂರು ಜಿಲ್ಲೆಯಲ್ಲಿ ನೆಡಬೇಕು, ರೋಟರಿ ಸಂಸ್ಥೆ ತುಮಕೂರು ತಾಲ್ಲೂಕಿನಲ್ಲಿ ಒಂದು ಕೋಟಿ ಸಸಿಗಳನ್ನು ಕಾರ್ಯಕ್ರಮ ರೂಪಿಸಿದೆ. ಪ್ರತಿ ತಾಲೂಕಿನಲ್ಲೂ 10 ಲಕ್ಷ ಸಸಿಗಳನ್ನು ಜಿಲ್ಲೆಯಲ್ಲಿ ಒಂದು ಕೋಟಿ ಗಿಡ ನೀಡಲು ಮುಂದಾಗಬೇಕು, ಇದಕ್ಕೆ ಎಲ್ಲ ರೀತಿಯ ನೆರವನ್ನು ಒದಗಿಸಲಾಗುವುದು.
ಜೂನ್ 5 ರಂದು ಜಿಲ್ಲೆಯಲ್ಲಿ ಒಂದು ಕೋಟಿ ಗಿಡಗಳನ್ನು ನೆಟ್ಟು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಅನ್ನು ಸ್ಥಾಪನೆ ಮಾಡಬೇಕು. ಇದಕ್ಕಾಗಿ ಸಾರ್ವಜನಿಕರ ಸಹಕಾರವೂ ಅತ್ಯಗತ್ಯ ಎಂದರು. ಈ ಕಾರ್ಯಕ್ರಮಕ್ಕೆ ಸ್ವ ಸಹಾಯ ಸಂಸ್ಥೆಗಳು, ಸಂಘ-ಸಂಸ್ಥೆಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಹಾಗೂ ಸಮುದಾಯದ ಜನರು ಭಾಗವಹಿಸಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದರು.
ಕಾರ್ಯಗಾರದಲ್ಲಿ ಮಾತನಾಡಿದ ರೋಟರಿ 'ಕೋಟಿ ನಾಟಿ' ಅಧ್ಯಕ್ಷರಾದ ಅಮರನಾರಾಯಣ ಅವರು ಪೋಲಿಯೋವನ್ನು ಮುಕ್ತಗೊಳಿಸಿದಂತೆ ಭೂ ಮಾತೆಗೆ ಅಂಟಿಕೊಂಡಿರುವ ಮಾಲಿನ್ಯವನ್ನು ಗಿಡ ನೆಡುವ ಮೂಲಕ ಹೋಗಲಾಡಿಸಬೇಕು. ಜಿಲ್ಲೆಯಲ್ಲಿ ಶೇಕಡ 6.58ರಷ್ಟು ಅರಣ್ಯ ಪ್ರದೇಶ ಮಾತ್ರವಿದೆ, ತುಮಕೂರು ಜಿಲ್ಲೆಯ ಮತ್ತು ತಾಲೂಕುಗಳು ವೈವಿಧ್ಯಮಯ ದಿಂದ ಕೂಡಿವೆ ಎಂದರು.

Conclusion:ಇದೇ ಸಂದರ್ಭದಲ್ಲಿ 'ಕೋಟಿ ನಾಟಿ' ಹಸಿರೀಕರಣದ ಒಡಂಬಡಿಕೆಗೆ ಸಹಿ ಹಾಕಲಾಯಿತು.

ವರದಿ
ಸುಧಾಕರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.