ETV Bharat / briefs

ಸುಶಾಂತ್​ ಸಿಂಗ್​ ಸಾವು ಪ್ರಕರಣ: ಇಬ್ಬರು ಕೆಲಸಗಾರರ ವಿಚಾರಣೆ ನಡೆಸಿದ ಎನ್​ಸಿಬಿ - ಸಿದ್ಧಾರ್ಥ್ ಪಿಥಾಣಿ

ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಎನ್​ಸಿಬಿ ಆತನ ಇಬ್ಬರು ಕೆಲಸಗಾರರಾದ ನೀರಜ್ ಮತ್ತು ಕೇಶವ್ ಎಂಬವರನ್ನು ಕರೆದು ಪ್ರಕರಣದ ವಿಚಾರಣೆ ನಡೆಸಿದೆ.

Sushant Singh Rajput
Sushant Singh Rajput
author img

By

Published : May 30, 2021, 10:28 PM IST

ಮುಂಬೈ (ಮಹಾರಾಷ್ಟ್ರ): ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಅವರ ಸ್ನೇಹಿತ ಸಿದ್ಧಾರ್ಥ್ ಪಿಥಾಣಿಯನ್ನು ಎನ್​ಸಿಬಿ ಬಂಧಿಸಿದೆ.

ಇದಾದ ಕೆಲವು ದಿನಗಳ ನಂತರ ಸುಶಾಂತ್​ನ ಇಬ್ಬರು ಕೆಲಸಗಾರರಾದ ನೀರಜ್ ಮತ್ತು ಕೇಶವ್ ಎಂಬವರನ್ನು ಕರೆದು ಪ್ರಕರಣದ ವಿಚಾರಣೆ ನಡೆಸಿದೆ. ಕಳೆದ ಎಂಟು ತಿಂಗಳಿನಿಂದ ಈ ಇಬ್ಬರು ಮುಂಬೈನಿಂದ ಬೇರೆಡೆಗೆ ತೆರಳಿದ್ದರು ಎಂದು ತಿಳಿದುಬಂದಿದೆ.

ಎಸ್‌ಎಸ್‌ಆರ್ ಸಾವಿನ ಪ್ರಕರಣದಲ್ಲಿ ಡ್ರಗ್​ ದಂಧೆಯ ಹೆಸರು ತಳುಕು ಹಾಕಿಕೊಂಡಿತ್ತು. ಅಷ್ಟೇ ಅಲ್ಲದೆ ಸುಶಾಂತ್‌ಗೆ ಡ್ರಗ್​ ಪೂರೈಸಿದ ಪ್ರಮುಖ ವ್ಯಕ್ತಿಗಳಲ್ಲಿ ಸಿದ್ಧಾರ್ಥ್ ಕೂಡ ಒಬ್ಬ ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿ ಸಿದ್ದಾರ್ಥ್​ನನ್ನು ಎನ್​ಸಿಬಿ ಬಂಧಿಸಿದೆ.

ಸಿದ್ಧಾರ್ಥ್‌ ಪಿಥಾಣಿ ಹೈದರಾಬಾದ್​ನಲ್ಲಿ ನೆಲೆಸಿದ್ದಾನೆ ಎಂದು ಮಾಹಿತಿ ಪಡೆದ ಎನ್‌ಸಿಬಿ, ಬಂಧಿಸಿರುವುದಾಗಿ ವರದಿಯಾಗಿದೆ. 2020ರ ಜೂನ್‌ 14ರಂದು ಸುಶಾಂತ್‌ ಸಿಂಗ್‌ ತಮ್ಮ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.