ETV Bharat / briefs

ಐದು ವರ್ಷ, ಆರು ಸವಾಲು... ಮೋದಿ ಮೇಲಿದೆ ಮತ್ತೆ ನಿರೀಕ್ಷೆಯ ಭಾರ..!

ವಿಪಕ್ಷಗಳ ನೇರ ಆರೋಪದ ನಡುವೆಯೂ ನರೇಂದ್ರ ಮೋದಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನಲ್ಲಿ ಮೋದಿ ಮೈಮರೆಯದೇ ಒಂದಷ್ಟು ಸವಾಲುಗಳನ್ನು ಎದುರಿಸಬೇಕಿದೆ. ಮೋದಿ ಮುಂದಿರುವ ಆರು ಪ್ರಮುಖ ಸವಾಲುಗಳು ಇಲ್ಲಿವೆ...

ನರೇಂದ್ರ ಮೋದಿ
author img

By

Published : May 28, 2019, 5:22 PM IST

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಎಲ್ಲ ಸಮೀಕ್ಷೆಗಳನ್ನು ತಲೆಕೆಳಗು ಮಾಡಿ ಬಿಜೆಪಿ ಸ್ವಂತ ಬಲದಲ್ಲಿ ಮತ್ತೆ ಅಧಿಕಾರಕ್ಕೇರಿದೆ.

ಐದು ವರ್ಷದ ಆಡಳಿತದಲ್ಲಿ ಮೋದಿ ಸರ್ಕಾರ ತನ್ನ ಭರವಸೆ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ ಎನ್ನುವ ವಿಪಕ್ಷಗಳ ನೇರ ಆರೋಪದ ನಡುವೆಯೂ ನರೇಂದ್ರ ಮೋದಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನಲ್ಲಿ ಮೋದಿ ಮೈಮರೆಯದೇ ಒಂದಷ್ಟು ಸವಾಲುಗಳನ್ನು ಎದುರಿಸಬೇಕಿದೆ. ಮೋದಿ ಮುಂದಿರುವ ಆರು ಪ್ರಮುಖ ಸವಾಲುಗಳು ಇಲ್ಲಿವೆ...

1. ಕೃಷಿ ವಲಯದ ಬಿಕ್ಕಟ್ಟು:

ಲೋಕಸಭಾ ಚುನಾವಣೆಯ ಕೆಲ ತಿಂಗಳುಗಳ ಮುನ್ನ ರೈತರ ಹೋರಾಟ ದೊಡ್ಡ ಮಟ್ಟದಲ್ಲಿ ನಡೆದಿತ್ತು. ರಾಷ್ಟ್ರ ರಾಜಧಾನಿಗೆ ರೈತರು ಜಾಥಾ ನಡೆಸಿ ತಮ್ಮ ಅಳಲು ತೋಡಿಕೊಂಡಿದ್ದರು. ಕಳೆದ ಹದಿನೈದು ವರ್ಷದಲ್ಲಿ ಕೃಷಿ ವಲಯದ ಜಿಡಿಪಿ ಶೇ.13ರಷ್ಟು ಕುಸಿತ ಕಂಡಿದೆ.

ಮೋದಿ ಸರ್ಕಾರ ಕಳೆದ ಐದು ವರ್ಷದಲ್ಲಿ ಕೃಷಿಕರ ಉತ್ತೇಜನಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ, ಇದು ಸಮರ್ಪಕವಾಗಿ ರೈತರಿಗೆ ದೊರೆತಿಲ್ಲ. ಇದು ರೈತವರ್ಗದ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಮಂತ್ರಿ ಕಿಸಾನ್ ಯೋಜನ ಮೂಲಕ ಹಣಕಾಸು ಸಹಾಯಕ್ಕೂ ಮೋದಿ ಸರ್ಕಾರ ಮುಂದಾಗಿತ್ತು. ಇಷ್ಟಾದರೂ ಮೋದಿ ಸರ್ಕಾರ ಕೃಷಿ ವಲಯಕ್ಕೆ ಇನ್ನಷ್ಟು ಪರಿಣಾಮಕಾರಿ ಯೋಜನೆಗಳನ್ನು ಕಾರ್ಯಗತಗೊಳಿಸಬೇಕಿದೆ.

ಈ ಶೃಂಗದಲ್ಲಾದರೂ ಮೋದಿ - ಇಮ್ರಾನ್​ ಆಗ್ತಾರಾ ಮುಖಾಮುಖಿ: ನಡೆಸ್ತಾರಾ ಮಹತ್ವದ ಮಾತುಕತೆ?

2.ನಿರುದ್ಯೋಗ:

ಪ್ರಸ್ತುತ 136 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಮೋದಿ ಸರ್ಕಾರಕ್ಕೆ ಬಹುದೊಡ್ಡ ಸವಾಲಾಗಿದೆ. ಕಳೆದ ಅವಧಿಯಲ್ಲಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಮೋದಿ ಘೋಷಿಸಿದ್ದರೂ ಈ ವಿಚಾರದಲ್ಲಿ ಅಷ್ಟೊಂದು ಸಾಧಿಸಿಲ್ಲ.

ಈ ವರ್ಷದ ಆರಂಭದಲ್ಲಿ ಹೊರಬಿದ್ದ ವರದಿಯೊಂದರ ಪ್ರಕಾರ ನೋಟ್​​ಬ್ಯಾನ್ ಹಾಗೂ ಜಿಎಸ್​​ಟಿ ಪರಿಣಾಮ ಸರಿಸುಮಾರು 1.1 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.

ಅಧ್ಯಯನವೊಂದರ ಪ್ರಕಾರ ಪ್ರತಿವರ್ಷ 1.2 ಕೋಟಿ ಮಂದಿ ಉದ್ಯೋಗದತ್ತ ಮುಖಮಾಡುತ್ತಿದ್ದಾರೆ. ಆದರೆ 47.5 ಲಕ್ಷ ಮಂದಿ ಮಾತ್ರ ಉದ್ಯೋಗ ಪಡೆಯುತ್ತಿದ್ದಾರೆ. ಅರ್ಧಕ್ಕೂ ಹೆಚ್ಚಿನ ಮಂದಿ ನಿರುದ್ಯೋಗಿಗಳಾಗಿಯೇ ಉಳಿಯುತ್ತಿದ್ದಾರೆ.

ದೀದಿಗೆ ಬಿಜೆಪಿ ಬಿಗ್​ ಶಾಕ್​​​... ಇದು 1ನೇ ಹಂತ ಕಾದು ನೋಡಿ ಎಂದ ಕಮಲ ನಾಯಕರು!

3.ಆರ್ಥಿಕತೆಯ ಲೋಪದೋಷಗಳ ನಿವಾರಣೆ:

ಬಿಜೆಪಿ ಆಡಳಿತದಲ್ಲಿ ಕಳೆದ ಐದು ವರ್ಷದಲ್ಲಿ ಜಿಡಿಪಿ ಪ್ರಮಾಣ ಗಣನೀಯ ಏರಿಕೆ ಕಂಡಿದೆ. ಇದರ ಜೊತೆಗೆ ಭಾರತದ ಆರ್ಥಿಕತೆ ಅತಿ ವೇಗವಾಗಿ ಏರಿಕೆಯಾಗುತ್ತಿದೆ ಎಂದು ಸಾಕಷ್ಟು ವರದಿಗಳು ಹೇಳಿವೆ.

ಭಾರತದ ಆರ್ಥಿಕತೆಯಲ್ಲಿ ಒಂದಷ್ಟು ಲೋಪಗಳು ಇದ್ದು, ಇದನ್ನು ಸರಿಪಡಿಸುವ ಕಾರ್ಯ ಆಗಬೇಕಿದೆ. ಸಾರ್ವಜನಿಕ ವಲಯದ ಒಂದಷ್ಟು ಬ್ಯಾಂಕ್​​ಗಳು ನಷ್ಟದಲ್ಲಿವೆ. ವಿಲೀನ ಪ್ರಕ್ರಿಯೆ ಮೂಲಕ ಈ ನಷ್ಟವನ್ನು ಸರಿದೂಗಿಸುವ ಪ್ರಯತ್ನವನ್ನು ಕೇಂದ್ರ ಮಾಡಿದೆ. ಇಷ್ಟಾದರೂ ಪರಿಣಾಮಕಾರಿ ಕ್ರಮಗಳ ಮೂಲಕ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸುವ ಸವಾಲು ಮೋದಿ ಸರ್ಕಾರದ ಮುಂದಿದೆ.

4.ಅಲ್ಪಸಂಖ್ಯಾತರ ಮನಗೆಲ್ಲುವಿಕೆ:

2014 ಭರ್ಜರಿ ಗೆಲುವು ಸಾಧಿಸಿದ್ದ ಎನ್​ಡಿಎ ಮೈತ್ರಿಕೂಟ ಅಲ್ಪಸಂಖ್ಯಾತರ ಮನಗೆಲ್ಲುವಲ್ಲಿ ವಿಫಲವಾಗಿತ್ತು ಎನ್ನುವ ಮಾತು ಕೇಳಿಬಂದಿತ್ತು. 2019ರಲ್ಲಿ ಈ ಗೆಲುವು ಮತ್ತಷ್ಟು ದೊಡ್ಡಮಟ್ಟದಲ್ಲಿ ದೊರೆತಿದ್ದು ಈ ಬಾರಿ ಅಲ್ಪಸಂಖ್ಯಾತರ ಮನಗೆಲ್ಲುವ ಪ್ರಯತ್ನ ಇನ್ನೈದು ವರ್ಷದಲ್ಲಿ ಮಾಡಬೇಕಿದೆ.

ಸಬ್​ ಕಾ ಸಾಥ್​, ಸಬ್​ ಕಾ ವಿಕಾಸ್​ ಎನ್ನುವ ಘೋಷವಾಕ್ಯವನ್ನು ಮೋದಿ ಹಾಗೂ ಪಕ್ಷ ಸಂಘಟಿತ ರೀತಿಯಲ್ಲಿ ಕಾರ್ಯಗತಗೊಳಿಸುವ ಸವಾಲನ್ನು ಹೊಂದಿದ್ದಾರೆ.

ಮೋದಿ 2.0 ಸರ್ಕಾರದ ಮುಂದಿವೆ ಬೆಟ್ಟದಷ್ಟು ಸವಾಲುಗಳು: ಚೀನಾ, ಅಮೆರಿಕವೇ ಫಸ್ಟ್​ ಎನಿಮಿ..?

5.ವಿವಾದಾತ್ಮಕ ಹೇಳಿಕೆಗಳು:

ಕೆಲವೊಂದು ಸೂಕ್ಷ್ಮ ವಿಚಾರಗಳಲ್ಲಿ ನಾಲಗೆ ಹರಿಬಿಡುವ ಬಿಜೆಪಿ ಸಂಸದರು ಇದೇ ಮೋದಿ ಕೆಂಗಣ್ಣಿಗೆ ಗುರಿಯಾಗಿದ್ದರು. ಅನಂತ್​ ಕುಮಾರ್​ ಹೆಗ್ಡೆ, ಸಾಧ್ವಿ ಪ್ರಗ್ಯಾ ಸಿಂಗ್​ರಂತ ನಾಯಕರ ಹೇಳಿಕೆ ಪಕ್ಷದ ಘನತೆಗೆ ಕುಂದುಂಟು ಮಾಡಿತ್ತು.

ಎರಡನೇ ಅವಧಿಯ ಮೋದಿ ಸರ್ಕಾರದಲ್ಲಿ ಇಂತಹ ಹೇಳಿಕೆಗಳನ್ನು ಹದ್ದುಬಸ್ತಿಗೆ ತರುವ ಕಾರ್ಯ ಮೋದಿ ಹಾಗೂ ಅಮಿತ್ ಶಾರಿಂದ ಆಗಬೇಕಿದೆ. ಪಕ್ಷವನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಇಂತಹ ಹೇಳಿಕೆ ಭಾರಿ ಹೊಡೆತ ನೀಡುತ್ತದೆ.

6.ಪಾಕಿಸ್ತಾನ ಹಾಗೂ ಭಯೋತ್ಪಾದನೆ:

ಪುಲ್ವಾಮಾ ದಾಳಿಯ ಬಳಿಕ ಉಗ್ರಪೋಷಕ ರಾಷ್ಟ್ರ ಪಾಕಿಸ್ತಾನದ ಮೇಲೆ ಸಾಕಷ್ಟು ನಿರ್ಬಂಧ ಹೇರಿರುವ ಭಾರತ, ಭಯೋತ್ಪಾದನೆ ವಿಚಾರದಲ್ಲಿ ತನ್ನ ನಿರ್ಧಾರವನ್ನು ಮತ್ತಷ್ಟು ಸ್ಪಷ್ಟಗೊಳಿಸಿದೆ.

ಶಾಂತಿ ಮಾತುಕತೆ ಮಂತ್ರ ಜಪಿಸುತ್ತಲೇ ಮತ್ತೊಂದೆಡೆ ಉಗ್ರರನ್ನು ಛೂ ಬಿಡುತ್ತಾ ಪಾಕಿಸ್ತಾ, ಭಾರತಕ್ಕೆ ತೊಂದರೆ ನೀಡುತ್ತಲೇ ಬಂದಿದೆ. ಹೀಗಾಗಿ ಮೋದಿ ಸರ್ಕಾರ ಎರಡನೇ ಅವಧಿಯಲ್ಲಿ ಉಗ್ರರ ನಿರ್ಮೂಲನೆಗೆ ಅಗ್ರ ರಾಷ್ಟ್ರಗಳನ್ನು ಒಗ್ಗೂಡಿಸಿ ಮಾಸ್ಟರ್​​ಪ್ಲಾನ್ ರೂಪಿಸಬೇಕಿದೆ.

Intro:Body:

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಎಲ್ಲ ಸಮೀಕ್ಷೆಗಳನ್ನು ತಲೆಕೆಳಗು ಮಾಡಿ ಬಿಜೆಪಿ ಸ್ವಂತ ಬಲದಲ್ಲಿ ಮತ್ತೆ ಅಧಿಕಾರಕ್ಕೇರಿದೆ.

ಐದು ವರ್ಷದ ಆಡಳಿತದಲ್ಲಿ ಮೋದಿ ಸರ್ಕಾರ ತನ್ನ ಭರವಸೆ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ ಎನ್ನುವ ವಿಪಕ್ಷಗಳ ನೇರ ಆರೋಪದ ನಡುವೆಯೂ ನರೇಂದ್ರ ಮೋದಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನಲ್ಲಿ ಮೋದಿ ಮೈಮರೆಯದೆ ಒಂದಷ್ಟು ಸವಾಲುಗಳನ್ನು ಎದುರಿಸಬೇಕಿದೆ. ಮೋದಿ ಮುಂದಿರುವ ಆರು ಪ್ರಮುಖ ಸವಾಲುಗಳು ಇಲ್ಲಿವೆ...

1. ಕೃಷಿ ವಲಯದ ಬಿಕ್ಕಟ್ಟು:

ಲೋಕಸಭಾ ಚುನಾವಣೆಯ ಕೆಲ ತಿಂಗಳುಗಳ ಮುನ್ನ ರೈತರ ಹೋರಾಟ ದೊಡ್ಡ ಮಟ್ಟದಲ್ಲಿ ನಡೆದಿತ್ತು. ರಾಷ್ಟ್ರ ರಾಜಧಾನಿಗೆ ರೈತರು ಜಾಥಾ ನಡೆಸಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಕಳೆದ ಹದಿನೈದು ವರ್ಷದಲ್ಲಿ ಕೃಷಿ ವಲಯದ ಜಿಡಿಪಿ ಶೇ.13ರಷ್ಟು ಕುಸಿತ ಕಂಡಿದೆ.

ಮೋದಿ ಸರ್ಕಾರ ಕಳೆದ ಐದು ವರ್ಷದಲ್ಲಿ ಕೃಷಿಕರ ಉತ್ತೇಜನಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ ಇದು ಸಮರ್ಪಕವಾಗಿ ರೈತರಿಗೆ ದೊರೆತಿಲ್ಲ. ಇದು ರೈತವರ್ಗದ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಮಂತ್ರಿ ಕಿಸಾನ್ ಯೋಜನ ಮೂಲಕ ಹಣಕಾಸು ಸಹಾಯಕ್ಕೂ ಮೋದಿ ಸರ್ಕಾರ ಮುಂದಾಗಿತ್ತು. ಇಷ್ಟಾದರೂ ಮೋದಿ ಸರ್ಕಾರ ಕೃಷಿ ವಲಯಕ್ಕೆ ಇನ್ನಷ್ಟು ಪರಿಣಾಮಕಾರಿ ಯೋಜನೆಗಳನ್ನು ಕಾರ್ಯಗತಗೊಳಿಸಬೇಕಿದೆ.

2.ನಿರುದ್ಯೋಗ:

ಪ್ರಸ್ತುತ 136 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಮೋದಿ ಸರ್ಕಾರಕ್ಕೆ ಬಹುದೊಡ್ಡ ಸವಾಲಾಗಿದೆ. ಕಳೆದ ಅವಧಿಯಲ್ಲಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಮೋದಿ ಘೋಷಿಸಿದ್ದರೂ ಈ ವಿಚಾರದಲ್ಲಿ ಅಷ್ಟೊಂದು ಸಾಧಿಸಿಲ್ಲ.

ಈ ವರ್ಷದ ಆರಂಭದಲ್ಲಿ ಹೊರಬಿದ್ದ ವರದಿಯೊಂದರ ಪ್ರಕಾರ ನೋಟ್​​ಬ್ಯಾನ್ ಹಾಗೂ ಜಿಎಸ್​​ಟಿ ಪರಿಣಾಮ ಸರಿಸುಮಾರು 1.1 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.

ಅಧ್ಯಯನವೊಂದರ ಪ್ರಕಾರ ಪ್ರತಿವರ್ಷ 1.2 ಕೋಟಿ ಮಂದಿ ಉದ್ಯೋಗದತ್ತ ಮುಖಮಾಡುತ್ತಿದ್ದಾರೆ. ಆದರೆ 47.5 ಲಕ್ಷ ಮಂದಿ ಮಾತ್ರ ಉದ್ಯೋಗ ಪಡೆಯುತ್ತಿದ್ದಾರೆ. ಅರ್ಧಕ್ಕೂ ಹೆಚ್ಚಿನ ಮಂದಿ ನಿರುದ್ಯೋಗಿಗಳಾಗಿಯೇ ಉಳಿಯುತ್ತಿದ್ದಾರೆ.

3.ಆರ್ಥಿಕತೆಯ ಲೋಪದೋಷಗಳ ನಿವಾರಣೆ:

ಬಿಜೆಪಿ ಆಡಳಿತದಲ್ಲಿ ಕಳೆದ ಐದು ವರ್ಷದಲ್ಲಿ ಜಿಡಿಪಿ ಪ್ರಮಾಣ ಗಣನೀಯ ಏರಿಕೆ ಕಂಡಿದೆ. ಇದರ ಜೊತೆಗೆ ಭಾರತದ ಆರ್ಥಿಕತೆ ಅತಿ ವೇಗವಾಗಿ ಏರಿಕೆಯಾಗುತ್ತಿದೆ ಎಂದು ಸಾಕಷ್ಟು ವರದಿಗಳು ಹೇಳಿವೆ.

ಭಾರತದ ಆರ್ಥಿಕತೆಯಲ್ಲಿ ಒಂದಷ್ಟು ಲೋಪಗಳು ಇದ್ದು ಇದನ್ನು ಸರಿಪಡಿಸುವ ಕಾರ್ಯ ಆಗಬೇಕಿದೆ. ಸಾರ್ವಜನಿಕ ವಲಯದ ಒಂದಷ್ಟು ಬ್ಯಾಂಕ್​​ಗಳು ನಷ್ಟದಲ್ಲಿವೆ. ವಿಲೀನ ಪ್ರಕ್ರಿಯೆ ಮೂಲಕ ಈ ನಷ್ಟವನ್ನು ಸರಿದೂಗಿಸುವ ಪ್ರಯತ್ನವನ್ನು ಕೇಂದ್ರ ಮಾಡಿದೆ.  ಇಷ್ಟಾದರೂ ಪರಿಣಾಮಕಾರಿ ಕ್ರಮಗಳ ಮೂಲಕ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸುವ ಸವಾಲು ಮೋದಿ ಸರ್ಕಾರದ ಮುಂದಿದೆ.

4.ಅಲ್ಪಸಂಖ್ಯಾತರ ಮನಗೆಲ್ಲುವಿಕೆ:

2014 ಭರ್ಜರಿ ಗೆಲುವು ಸಾಧಿಸಿದ್ದ ಎನ್​ಡಿಎ ಮೈತ್ರಿಕೂಟ ಅಲ್ಪಸಂಖ್ಯಾತರ ಮನಗೆಲ್ಲುವಲ್ಲಿ ವಿಫಲವಾಗಿತ್ತು ಎನ್ನುವ ಮಾತು ಕೇಳಿಬಂದಿತ್ತು. 2019ರಲ್ಲಿ ಈ ಗೆಲುವು ಮತ್ತಷ್ಟು ದೊಡ್ಡಮಟ್ಟದಲ್ಲಿ ದೊರೆತಿದ್ದು ಈ ಬಾರಿ ಅಲ್ಪಸಂಖ್ಯಾತರ ಮನಗೆಲ್ಲುವ ಪ್ರಯತ್ನ ಇನ್ನೈದು ವರ್ಷದಲ್ಲಿ ಮಾಡಬೇಕಿದೆ.

ಸಬ್​ ಕಾ ಸಾಥ್​, ಸಬ್​ ಕಾ ವಿಕಾಸ್​ ಎನ್ನುವ ಘೋಷವಾಕ್ಯವನ್ನು ಮೋದಿ ಹಾಗೂ ಪಕ್ಷ ಸಂಘಟಿತ ರೀತಿಯಲ್ಲಿ ಕಾರ್ಯಗತಗೊಳಿಸುವ ಸವಾಲನ್ನು ಹೊಂದಿದ್ದಾರೆ.

5.ವಿವಾದಾತ್ಮಕ ಹೇಳಿಕೆಗಳು:

ಕೆಲವೊಂದು ಸೂಕ್ಷ್ಮ ವಿಚಾರಗಳಲ್ಲಿ ನಾಲಗೆ ಹರಿಬಿಡುವ ಬಿಜೆಪಿ ಸಂಸದರು ಇದೇ ಮೋದಿ ಕೆಂಗಣ್ಣಿಗೆ ಗುರಿಯಾಗಿದ್ದರು. ಅನಂತ್​ ಕುಮಾರ್​ ಹೆಗ್ಡೆ, ಸಾಧ್ವಿ ಪ್ರಗ್ಯಾ ಸಿಂಗ್​ರಂತ ನಾಯಕರ ಹೇಳಿಕೆ ಪಕ್ಷದ ಘನತೆಗೆ ಕುಂದುಂಟು ಮಾಡಿತ್ತು.

ಎರಡನೇ ಅವಧಿಯ ಮೋದಿ ಸರ್ಕಾರದಲ್ಲಿ ಇಂತಹ ಹೇಳಿಕೆಗಳನ್ನು ಹದ್ದುಬಸ್ತಿಗೆ ತರುವ ಕಾರ್ಯ ಮೋದಿ ಹಾಗೂ ಅಮಿತ್ ಶಾರಿಂದ ಆಗಬೇಕಿದೆ. ಪಕ್ಷವನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಇಂತಹ ಹೇಳಿಕೆ ಭಾರಿ ಹೊಡೆತ ನೀಡುತ್ತದೆ.

6.ಪಾಕಿಸ್ತಾನ ಹಾಗೂ ಭಯೋತ್ಪಾದನೆ:

ಪುಲ್ವಾಮಾ ದಾಳಿಯ ಬಳಿಕ ಉಗ್ರಪೋಷಕ ರಾಷ್ಟ್ರ ಪಾಕಿಸ್ತಾನದ ಮೇಲೆ ಸಾಕಷ್ಟು ನಿರ್ಬಂಧ ಹೇರಿರುವ ಭಾರತ, ಭಯೋತ್ಪಾದನೆ ವಿಚಾರದಲ್ಲಿ ತನ್ನ ನಿರ್ಧಾರವನ್ನು ಮತ್ತಷ್ಟು ಸ್ಪಷ್ಟಗೊಳಿಸಿದೆ.

ಶಾಂತಿ ಮಾತುಕತೆ ಮಂತ್ರ ಜಪಿಸುತ್ತಲೇ ಮತ್ತೊಂದೆಡೆ ಉಗ್ರರನ್ನು ಛೂ ಬಿಡುತ್ತಾ ಪಾಕಿಸ್ತಾ, ಭಾರತಕ್ಕೆ ತೊಂದರೆ ನೀಡುತ್ತಲೇ ಬಂದಿದೆ. ಹೀಗಾಗಿ ಮೋದಿ ಸರ್ಕಾರ ಎರಡನೇ ಅವಧಿಯಲ್ಲಿ ಉಗ್ರರ ನಿರ್ಮೂಲನೆಗೆ ಅಗ್ರ ರಾಷ್ಟ್ರಗಳನ್ನು ಒಗ್ಗೂಡಿಸಿ ಮಾಸ್ಟರ್​​ಪ್ಲಾನ್ ರೂಪಿಸಬೇಕಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.