ETV Bharat / briefs

ಏ. 26ರಂದು ನಮೋ ನಾಮಪತ್ರ... ಉಮೇದುವಾರಿಕೆಗೂ ಮುನ್ನಾದಿನ ಮೆಗಾ ರೋಡ್​ ಶೋ! - ನಾಮಪತ್ರ ಸಲ್ಲಿಕೆ

ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದ ವಾರಣಾಸಿಯಿಂದ ಈ ಸಲವೂ ತಮ್ಮ ರಾಜಕೀಯ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಏಪ್ರಿಲ್​ 26ರಂದು ಉಮೇದುವಾರಿಕೆ ಸಲ್ಲಿಕೆ ಮಾಡಲಿದ್ದಾರೆ.

ಪ್ರಧಾನಿ ಮೋದಿ
author img

By

Published : Apr 22, 2019, 11:46 AM IST

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಬರುವ ಏಪ್ರಿಲ್​​ 26ರಂದು ವಾರಣಾಸಿ ಸಂಸದೀಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಅದಕ್ಕೂ ಮುನ್ನಾದಿನ ಬೃಹತ್​ ರೋಡ್​ ಶೋನಲ್ಲಿ ನಮೋ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

2014ರ ಲೋಕಸಭಾ ಚುನಾವಣೆ ವೇಳೆ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಎಎಪಿ ಮುಖಂಡ ಅರವಿಂದ್​ ಕೇಜ್ರಿವಾಲ್​ ಹಾಗೂ ಕಾಂಗ್ರೆಸ್​​ನ ಅಜಯ್​ ರಾವ್​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿದ್ದರು. ಈ ಸಲವೂ ಅದೇ ಕ್ಷೇತ್ರದಿಂದ ತಮ್ಮ ಅದೃಷ್ಠ ಪರೀಕ್ಷೆಗೆ ಪ್ರಧಾನಿ ಮೋದಿ ಮುಂದಾಗಿದ್ದಾರೆ.

ಏಪ್ರಿಲ್​​ 25ರಂದು ಮಧ್ಯಾಹ್ನ ಬೃಹತ್​ ರೋಡ್​ ಶೋ ನಡೆಸಲಿರುವ ಮೋದಿ, ಮರುದಿನ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಅದಕ್ಕೂ ಮುಂಚಿತವಾಗಿ ಮೋದಿ ಪಕ್ಷದ ಮುಖ್ಯಸ್ಥ ಅಮಿತ್​ ಶಾ, ಜೆಪಿ ನಡ್ಡಾ, ಲಕ್ಷ್ಮಣ್ ಆಚಾರ್ಯ, ಸುನೀಲ್​ ಓಜಾ ಹಾಗೂ ಅಶುತೋಷ್ ಜತೆ ಮಹತ್ವದ ಮೀಟಿಂಗ್​ ಕೂಡ ನಡೆಸಲಿದ್ದಾರೆ.

ರೋಡ್​ ಶೋ ಲಂಕಾ ಗೇಟ್​​ನ ಬನಾರಸ್​ ಹಿಂದೂ ವಿಶ್ವವಿದ್ಯಾಲಯದಿಂದ ಆರಂಭಗೊಳ್ಳಲಿದ್ದು, ಇದೇ ವೇಳೆ ಪಂಡಿತ್​ ಮದನ್​ ಮೋಹನ್​ ಮಾಳವಿಯಾ ಪುತ್ಥಳಿಗೆ ಮೋದಿ ಪುಷ್ಪ ವೃಷ್ಟಿ ಮಾಡಲಿದ್ದಾರೆ. ಈ ವೇಳೆ ಅನೇಕ ಬಿಜೆಪಿ ನಾಯಕರು ಭಾಗಿಯಾಗಲಿದ್ದಾರೆ. ವಾರಣಾಸಿಯ ಕ್ಷೇತ್ರಕ್ಕೆ 7ನೇ ಹಂತದಲ್ಲಿ ಅಂದರೆ ಮೇ 19ರಂದು ಮತದಾನ ನಡೆಯಲಿದೆ.

Intro:Body:

ಮೇ 26ರಂದು ನಮೋ ನಾಮಪತ್ರ... ಉಮೇದುವಾರಿಕೆಗೂ ಮುನ್ನಾದಿನ ಮೆಗಾ ರೋಡ್​ ಶೋನಲ್ಲಿ ಮೋದಿ ಭಾಗಿ!

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಬರುವ ಏಪ್ರಿಲ್​​ 26ರಂದು ವಾರಣಾಸಿ ಸಂಸದೀಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಅದಕ್ಕೂ ಮುನ್ನಾದಿನ ಬೃಹತ್​ ರೋಡ್​ ಶೋನಲ್ಲಿ ನಮೋ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

2014ರ ಲೋಕಸಭಾ ಚುನಾವಣೆ ವೇಳೆ ಎಎಪಿ ಅಭ್ಯರ್ಥಿ ಅರವಿಂದ್​ ಕೇಜ್ರಿವಾಲ್​ ಹಾಗೂ ಕಾಂಗ್ರೆಸ್​​ನ ಅಜಯ್​ ರಾವ್​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿದ್ದ ನಮೋ, ಈ ಸಲವೂ ಅದೇ ಕ್ಷೇತ್ರದಿಂದ ತಮ್ಮ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. 

ಏಪ್ರಿಲ್​​ 25ರಂದು ಮಧ್ಯಾಹ್ನ ಬೃಹತ್​ ರೋಡ್​ ಶೋ ನಡೆಸಲಿರುವ ಮೋದಿ, ಮರುದಿನ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಅದಕ್ಕೂ ಮುಂಚಿತವಾಗಿ ಮೋದಿ ಪಕ್ಷದ ಮುಖ್ಯಸ್ಥ ಅಮಿತ್​ ಶಾ, ಜೆಪಿ ನಡ್ಡಾ, ಲಕ್ಷ್ಮಣ್ ಆಚಾರ್ಯ, ಸುನೀಲ್​ ಓಜಾ ಹಾಗೂ ಅಶುತೋಷ್ ಭಾಗಿಯಾಗಲಿದ್ದಾರೆ.

ರೋಡ್​ ಶೋ ಲಂಕಾ ಗೇಟ್​​ನ ಬನಾರಸ್​ ಹಿಂದೂ ವಿಶ್ವವಿದ್ಯಾಲಯದಿಂದ ಆರಂಭಗೊಳ್ಳಲಿದ್ದು, ಇದೇ ವೇಳೆ ಪಂಡಿತ್​ ಮದನ್​ ಮೋಹನ್​ ಮಾಳ್ವಿಯಾ ಪುತ್ಥಳಿಗೆ ಮೋದಿ ಪುಷ್ಪಾಚರಣೆ ಮಾಡಲಿದ್ದಾರೆ. ಈ ವೇಳೆ ಅನೇಕ ಬಿಜೆಪಿ ನಾಯಕರು ಭಾಗಿಯಾಗಲಿದ್ದಾರೆ. ವಾರಣಾಸಿಯ ಕ್ಷೇತ್ರಕ್ಕೆ 7ನೇ ಹಂತದಲ್ಲಿ ಅಂದರೆ ಮೇ 19ರಂದು ಮತದಾನ ನಡೆಯಲಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.