ETV Bharat / briefs

ಮಂಗಳೂರಿನಲ್ಲಿ ಮೈತ್ರಿ ಸರ್ಕಾರದ ವಿರುದ್ದ ಮೋದಿ ವಾಗ್ದಾಳಿ... ಚೌಕಿದಾರ ಯಾರನ್ನು ಬಿಡಲ್ಲ ಎಂದ ಪ್ರಧಾನಿ

ಮಂಗಳೂರಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ವಿಜಯ ಸಂಕಲ್ಪ ಯಾತ್ರೆಯಲ್ಲಿ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮತ್ತು ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಶೋಭ ಕರಂದ್ಲಾಜೆ ಪರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಚಾರ ಮಾಡಿದರು.

ಮೋದಿ
author img

By

Published : Apr 14, 2019, 5:46 AM IST

Updated : Apr 14, 2019, 6:30 AM IST

ಮಂಗಳೂರು: ರಾಜ್ಯದ ರೈತರಿಗೆ ಯೋಜನೆಯನ್ನು ತಲುಪಿಸಲು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ರೈತರ ಪಟ್ಟಿಯನ್ನು ನೀಡದೆ ರೈತರಿಗೆ ಪ್ರಯೋಜನ ತಪ್ಪಿಸಿದ್ದು ರಾಜ್ಯ ಸರಕಾರ ರೈತ ವಿರೋಧಿ ಸರಕಾರ ವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ವಿಜಯ ಸಂಕಲ್ಪ ಯಾತ್ರೆಯಲ್ಲಿ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮತ್ತು ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಶೋಭ ಕರಂದ್ಲಾಜೆ ಪರ ಪ್ರಚಾರ‌ ನಡೆಸಿ ಮಾತನಾಡಿದ ಅವರು ಜೆಡಿಎಸ್ ಕಾಂಗ್ರೆಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರಕಾರ ಸಾಲಮನ್ನಾ ಘೋಷಣೆ ಮಾಡಿದ್ದರೂ ಇನ್ನೂ ಮಾಡಿಲ್ಲ. ರಾಜ್ಯದ ರೈತರಿಗೆ ಸಮ್ಮಿಶ್ರ ಸರಕಾರ ಮೋಸ ಮಾಡಿದೆ ಎಂದರು.

ಮಂಗಳೂರಿನಲ್ಲಿ ಮೈತ್ರಿ ಸರ್ಕಾರದ ವಿರುದ್ದ ಮೋದಿ ವಾಗ್ದಾಳಿ

ರಾಜ್ಯ ಸಮ್ಮಿಶ್ರ ಸರಕಾರ ವಂಶೋದ್ದಾರಕ ಚಿಂತನೆಯಲ್ಲಿ ಇದ್ದರೆ ಬಿಜೆಪಿ ಸರಕಾರ ಜನಸಾಮಾನ್ಯರ ಸರ್ಕಾರವಾಗಿದೆ. ನಮಗೆ ರಾಷ್ಟ್ರವಾದ ಪ್ರೇರಣೆಯಾದರೆ ಅವರಿಗೆ ಕುಟುಂಬದ ಲಾಭ ಪ್ರೇರಣೆಯಾಗಿದೆ ಎಂದರು. ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಿದೆ. ಆದರೆ ಕಾಂಗ್ರೆಸ್ ಸಾಲ ನೀಡುತ್ತಲೆ ಹೋಗಿ 2014 ರಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ವೆಂಟಿಲೇಟರ್​ನಲ್ಲಿ ಇರುವಂತಹ ಪರಿಸ್ಥಿತಿ ಇತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬ್ಯಾಂಕ್ ಪುನಶ್ಚೇತನವಾಗಿದೆ . ಕಾಂಗ್ರೆಸ್ ಕಮೀಷನ್ ಪಡೆದು ಸಾಲ ನೀಡಿ ಉದ್ಯಮಿಗಳು ದೇಶ ಬಿಡುವಂತೆ ಮಾಡಿದ್ದಾರೆ‌. ಆದರೆ ಚೌಕಿದಾರ್ ಯಾರನ್ನು ಬಿಡುವುದಿಲ್ಲ.. ಈಗಾಗಲೇ ‌ಮೂರು ಮಂದಿಯನ್ನು ಜೈಲಿಗಟ್ಟಿದ್ದು ಇನ್ನೂ ಕೂಡ ಯಾರನ್ನು ಬಿಡುವುದಿಲ್ಲ ಎಂದರು.

modi
ಮರದ ಮೇಲೆ ಕುಳಿತು ಮೋದಿ ಬಾಷಣ ಕೇಳಿದ ಜನ

ಮುಂದಿನ ಸರಕಾರದಲ್ಲಿ ಮೀನುಗಾರರಿಗೆ ಅನುಕೂಲವಾಗಲೆಂದು ಮೀನುಗಾರಿಕಾ ಸಚಿವಾಲಯ ಮಾಡಲಿದೆ. ಮಿನುಗಾರರಿಗೆ ಪ್ರತ್ಯೇಕ ಸಚಿವ ಖಾತೆ ಇರಲಿದೆ ಎಂಬ ಭರವಸೆ ನೀಡಿದರು. ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್​ಗೆ ಸಾಕ್ಷಿ ಕೇಳುತ್ತಿದೆ. ದೇಶದ ಸೇನಾ ಮುಖ್ಯಸ್ಥ ರನ್ನು ಅಪಮಾನ ಮಾಡಲಾಗುತ್ತಿದೆ. ಸೈನಿಕರನ್ನು ಗೂಂಡಗಳೆಂದು ಕಾಂಗ್ರೆಸ್ ಕರೆಯುತ್ತಿದೆ. ಆದರೆ ನಮಗೆ ಸೈನಿಕರ ಮೇಲೆ ವಿಶ್ವಾಸವಿದೆ ಎಂದರು.

ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ ಪ್ರಸಾದ

ಮಂಗಳೂರಿಗೆ ಬಂದ ಮೋದಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ರಂಗ ಪೂಜೆಯ ಪ್ರಸಾದವನ್ನು ನೀಡಿದರು. ಇವರಲ್ಲಿ ಗಮನಸೆಳೆದದ್ದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ. ಶಾಸಕ ಹರೀಶ್ ಪೂಂಜಾ ಅವರು ಕಾರ್ಯಕ್ರಮಕ್ಕೆ ಕಾವಲುಗಾರ ವೇಷದಲ್ಲಿ ಬಂದಿದ್ದರು. ಕಾರ್ಯಕ್ರಮದಲ್ಲಿ ಮೋದಿ ಅವರಿಗೆ ಮಂಗಳೂರಿನ ಕಲಾವಿದರು ರಚಿಸಿದ ಕೋಟಿ ಚೆನ್ನಯ್ಯ ಕಲಾಕೃತಿ, ಮೋದಿ ತಾಯಿ ಹೀರಾಬೆನ್ ಅವರ ಕಲಾಕೃತಿ, ಚೌಕಿದಾರ್ ಶೇರ್ ಹೇ ಕಲಾಕೃತಿ ಕೊಡುಗೆಯಾಗಿ ನೀಡಲಾಯಿತು.

modi
ಮಂಗಳೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮೋದಿ ತದ್ರೂಪಿ

ಕಾರ್ಯಕ್ರಮದಲ್ಲಿ ಗಮನ ಸಳೆದ ಮೂರು ತಿಂಗಳ ಹಸುಳೆ

ಮೋದಿ ಕಾರ್ಯಕ್ರಮದಲ್ಲಿ ಹಿರಿಯರು ಕಿರಿಯರೆನ್ನದೆ ಆಗಮಿಸಿದ್ದರು. ಅದರಲ್ಲಿ ಮೂರು‌ ತಿಂಗಳ ಹಸುಳೆ ಗಮನಸೆಳೆಯುತ್ತಿತ್ತು. ತಲೆಗೆ ಕೇಸರಿ ಶಾಲು ಸುತ್ತಿಸಿ‌ ಮಗುವನ್ನು ಕರೆತರಲಾಗಿತ್ತು. ಅದೇ ರೀತಿಯಲ್ಲಿ ಸಣ್ಣ ಸಣ್ಣ ಮಕ್ಕಳು ಕೇಸರಿ ಶಾಲು ಹಾಕಿ ಬಂದದ್ದು ಗಮನ ಸೆಳೆಯಿತು. ಗಮನಸೆಳೆದ ತದ್ರೂಪಿ ಮೋದಿ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುವುದಕ್ಕೆ ಮುಂಚೆ ಗಮನಸೆಳೆದದ್ದು ಮೋದಿಯಂತೆ ಕಾಣುವ ವ್ಯಕ್ತಿ. ಮೋದಿ ಕಾರ್ಯಕ್ರಮಕ್ಕೆ ಬರುವ ಮುಂಚೆ ಮೈದಾನದಲ್ಲಿ ಸುತ್ತು ಹಾಕಿದ ತದ್ರೂಪಿ ಮೋದಿ ಎಲ್ಲರ ಗಮನಸೆಳೆದರು.

ಮರವೇರಿದವರನ್ನು ಕೆಳಗಿಳಿಯಲು ಹೇಳಿದ ಮೋದಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಕಾರ್ಯಕರ್ತರಲ್ಲಿ ಕೆಲವರು ಮೈದಾನದ ಒಳಗೆ ಬದಿಯಲ್ಲಿದ್ದ ಮರ ಏರಿ ಕುಳಿತಿದ್ದರು. ಸಭೆಗೆ ಬಂದ ಕೂಡಲೇ ಗಮನಿಸಿದ ಮೋದಿ ತಮ್ಮ ಭಾಷಣದಲ್ಲಿ ಮರದಲ್ಲಿ ಕುಳಿತವರನ್ನು ಕೆಳಗಿಳಿಯುವಂತೆ ವಿನಂತಿಸಿದರು. ನಿಮಗೆ ಏನಾದರೂ ಆದರೆ ನನಗೆ ಬಹಳ ‌ದುಃಖವಾಗಲಿದೆ. ಕೆಳಗಿಳಿದು ಬನ್ನಿ ಎಂದು ವಿನಂತಿಸಿದರು. ಕೆಲವರು ಮರದಿಂದ ಕೆಳಗಿಳಿದರೆ ಇನ್ನೂ ಕೆಲವರು ಭಾಷಣ ಮುಗಿಯುವ ತನಕ ಮರವೇರಿ ಭಾಷಣ ಕೇಳಿದರು.

ಶಿಷ್ಟಾಚಾರ ಮುರಿದು ಜನರಿಗೆ ಕೈಬೀಸಿದ ಮೋದಿ

ಕಾರ್ಯಕ್ರಮ ಮುಗಿಸಿ ತೆರಳುವ ವೇಳೆ ಮೋದಿ ಶಿಷ್ಟಾಚಾರ ಮುರಿದ ಘಟನೆ ನಡೆಯಿತು. ಮೋದಿ ಕಾರಿನಲ್ಲಿ ಕಾರಿನ ಬಾಗಿಲು ತೆರೆದು ಪುಟ್ ಬೋರ್ಡ್​ನಲ್ಲಿ ನಿಂತು ಕೈ ಬೀಸಿದ್ದಾರೆ. ಈ ವೇಳೆ ಜನರು ಮುತ್ತಿಕೊಂಡು ಮೋದಿ ಮೋದಿ ಘೋಷಣೆ ಕೂಗಿದರು.

Intro:ಮಂಗಳೂರು: ರಾಜ್ಯದ ರೈತರಿಗೆ ಯೋಜನೆಯನ್ನು ತಲುಪಿಸಲು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ರೈತರ ಪಟ್ಟಿಯನ್ನು ನೀಡದೆ ರೈತರಿಗೆ ಪ್ರಯೋಜನ ತಪ್ಪಿಸಿದ್ದು ರಾಜ್ಯ ಸರಕಾರ ರೈತ ವಿರೋಧಿ ಸರಕಾರ ವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Body:ಮಂಗಳೂರಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ವಿಜಯ ಸಂಕಲ್ಪ ಯಾತ್ರೆಯಲ್ಲಿ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮತ್ತು ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಶೋಭ ಕರಂದ್ಲಾಜೆ ಪರ ಪ್ರಚಾರ‌ ನಡೆಸಿ ಮಾತನಾಡಿದ ಅವರು ಜೆಡಿಎಸ್ ಕಾಂಗ್ರೆಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರಕಾರ ಸಾಲಮನ್ನಾ ಘೋಷಣೆ ಮಾಡಿದ್ದರೂ ಇನ್ನೂ ಮಾಡಿಲ್ಲ. ರಾಜ್ಯದ ರೈತರಿಗೆ ಸಮ್ಮಿಶ್ರ ಸರಕಾರ ಮೋಸ ಮಾಡಿದೆ ಎಂದರು. ರಾಜ್ಯ ಸಮ್ಮಿಶ್ರ ಸರಕಾರ ವಂಶೋದ್ದಾರಕ ಚಿಂತನೆಯಲ್ಲಿ ಇದ್ದರೆ ಬಿಜೆಪಿ ಸರಕಾರ ಜನಸಾಮಾನ್ಯರ ಸರಕಾರವಾಗಿದೆ. ನಮಗೆ ರಾಷ್ಟ್ರವಾದ ಪ್ರೇರಣೆಯಾದರೆ ಅವರಿಗೆ ಕುಟುಂಬದ ಲಾಭ ಪ್ರೇರಣೆಯಾಗಿದೆ ಎಂದರು. ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಿದೆ. ಆದರೆ ಕಾಂಗ್ರೆಸ್ ಸಾಲ ನೀಡುತ್ತಲೆ ಹೋಗಿ 2014 ರಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ವೆಂಟಿಲೇಟರ್ ನಲ್ಲಿ ಇರುವಂತಹ ಪರಿಸ್ಥಿತಿ ಇತ್ತು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಬ್ಯಾಂಕ್ ಪುನಶ್ಚೇತನವಾಗಿದೆ . ಕಾಂಗ್ರೆಸ್ ಕಮೀಷನ್ ಪಡೆದು ಸಾಲ ನೀಡಿ ಉದ್ಯಮಿಗಳು ದೇಶ ಬಿಡುವಂತೆ ಮಾಡಿದ್ದಾರೆ‌. ಆದರೆ ಚೌಕಿದಾರ್ ಯಾರನ್ನು ಬಿಡುವುದಿಲ್ಲ.. ಈಗಾಗಲೇ ‌ಮೂರು ಮಂದಿಯನ್ನು ಜೈಲಿಗಟ್ಟಿದ್ದು ಇನ್ನೂ ಕೂಡ ಯಾರನ್ನು ಬಿಡುವುದಿಲ್ಲ ಎಂದರು. ಮುಂದಿನ ಸರಕಾರದಲ್ಲಿ ಮೀನುಗಾರರಿಗೆ ಅನುಕೂಲವಾಗಲೆಂದು ಮೀನುಗಾರಿಕಾ ಸಚಿವಾಲಯ ಮಾಡಲಿದೆ. ಮಿನುಗಾರರಿಗೆ ಪ್ರತ್ಯೇಕ ಸಚಿವ ಖಾತೆ ಇರಲಿದೆ ಎಂಬ ಭರವಸೆ ನೀಡಿದರು. ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್ ಗೆ ಸಾಕ್ಷಿ ಕೇಳುತ್ತಿದೆ. ದೇಶದ ಸೇನಾ ಮುಖ್ಯಸ್ಥ ರನ್ನು ಅಪಮಾನ ಮಾಡಲಾಗುತ್ತಿದೆ. ಸೈನಿಕರನ್ನು ಗೂಂಡಗಳೆಂದು ಕಾಂಗ್ರೆಸ್ ಕರೆಯುತ್ತಿದೆ. ಆದರೆ ನಮಗೆ ಸೈನಿಕರ ಮೇಲೆ ವಿಶ್ವಾಸವಿದೆ ಎಂದರು. ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ ಪ್ರಸಾದ; ಮಂಗಳೂರಿಗೆ ಬಂದ ಮೋದಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ರಂಗ ಪೂಜೆಯ ಪ್ರಸಾದವನ್ನು ನೀಡಿದರು. ವೇದಿಕೆಯಲ್ಲಿ ಕಾವಲುಗಾರ ವೇಷದಲ್ಲಿ ಶಾಸಕ ಹರೀಶ್ ಪೂಂಜಾ ಮೋದಿ ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲೆಯ ಶಾಸಕರು ಭಾಗಿಯಾಗಿದ್ದರು. ಆದರೆ ಇವರಲ್ಲಿ ಗಮನಸೆಳೆದದ್ದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ. ಶಾಸಕ ಹರೀಶ್ ಪೂಂಜಾ ಅವರು ಕಾರ್ಯಕ್ರಮಕ್ಕೆ ಕಾವಲುಗಾರ ವೇಷದಲ್ಲಿ ಬಂದಿದ್ದರು. ಕಾರ್ಯಕ್ರಮದಲ್ಲಿ ಮೋದಿ ಅವರಿಗೆ ಮಂಗಳೂರಿನ ಕಲಾವಿದರು ರಚಿಸಿದ ಕೋಟಿ ಚೆನ್ನಯ್ಯ ಕಲಾಕೃತಿ, ಮೋದಿ ತಾಯಿ ಹೀರಾಬೆನ್ ಅವರ ಕಲಾಕೃತಿ, ಚೌಕಿದಾರ್ ಶೇರ್ ಹೇ ಕಲಾಕೃತಿ ಕೊಡುಗೆಯಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಗಮನ ಸಳೆದ ಮೂರು ತಿಂಗಳ ಹಸುಳೆ- ಮೋದಿ ಕಾರ್ಯಕ್ರಮದಲ್ಲಿ ಹಿರಿಯರು ಕಿರಿಯರೆನ್ನದೆ ಆಗಮಿಸಿದ್ದರು. ಅದರಲ್ಲಿ ಮೂರು‌ ತಿಂಗಳ ಹಸುಳೆ ಗಮನಸೆಳೆಯುತ್ತಿತ್ತು. ತಲೆಗೆ ಕೇಸರಿ ಶಾಲು ಸುತ್ತಿಸಿ‌ ಮಗುವನ್ನು ಕರೆತರಲಾಗಿತ್ತು. ಅದೇ ರೀತಿಯಲ್ಲಿ ಸಣ್ಣ ಸಣ್ಣ ಮಕ್ಕಳು ಕೇಸರಿ ಶಾಲು ಹಾಕಿ ಬಂದದ್ದು ಗಮನಸೆಳೆಯಿತು. ಗಮನಸೆಳೆದ ತದ್ರೂಪಿ ಮೋದಿ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುವುದಕ್ಕೆ ಮುಂಚೆ ಗಮನಸೆಳೆದದ್ದು ಮೋದಿ ಯಂತೆ ಕಾಣುವ ವ್ಯಕ್ತಿ. ಮೋದಿ ಕಾರ್ಯಕ್ರಮಕ್ಕೆ ಬರುವ ಮುಂಚೆ ಮೈದಾನದಲ್ಲಿ ಸುತ್ತು ಹಾಕಿದ ತದ್ರೂಪಿ ಮೋದಿ ಎಲ್ಲರ ಗಮನಸೆಳೆದರು. ಮರವೇರಿದವರನ್ನು ಕೆಳಗಿಳಿಯಲು ಹೇಳಿದ ಮೋದಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಕಾರ್ಯಕರ್ತರಲ್ಲಿ ಕೆಲವರು ಮೈದಾನದ ಒಳಗೆ ಬದಿಯಲ್ಲಿದ್ದ ಮರ ಏರಿ ಕೂತಿದ್ದರು. ಸಭೆಗೆ ಬಂದ ಕೂಡಲೇ ಗಮನಿಸಿದ ಮೋದಿ ತಮ್ಮ ಭಾಷಣದಲ್ಲಿ ಮರದಲ್ಲಿ ಕುಳಿತವರನ್ನು ಕೆಳಗಿಳಿಯುವಂತೆ ವಿನಂತಿಸಿದರು. ನಿಮಗೆ ಏನಾದರೂ ಆದರೆ ನನಗೆ ಬಹಳ ‌ದುಃಖವಾಗಲಿದೆ. ಕೆಳಗಿಳಿದು ಬನ್ನಿ ಎಂದು ವಿನಂತಿಸಿದರು. ಕೆಲವರು ಮರದಿಂದ ಕೆಳಗಿಳಿದರೆ ಇನ್ನೂ ಕೆಲವರು ಭಾಷಣ ಮುಗಿಯುವ ತನಕ ಮರವೇರಿ ಭಾಷಣ ಕೇಳಿದರು. ಶಿಷ್ಟಾಚಾರ ಮುರಿದು ಜನರಿಗೆ ಕೈಬೀಸಿದ ಮೋದಿ ಕಾರ್ಯಕ್ರಮ ಮುಗಿಸಿ ತೆರಳುವ ವೇಳೆ ಮೋದಿ ಶಿಷ್ಟಾಚಾರ ಮುರಿದ ಘಟನೆ ನಡೆಯಿತು. ಮೋದಿ ಕಾರಿನಲ್ಲಿ ಕಾರಿನ ಬಾಗಿಲು ತೆರೆದು ಪುಟ್ ಬೋರ್ಡ್ ನಲ್ಲಿ ನಿಂತು ಕೈ ಬೀಸಿದ್ದಾರೆ. ಈ ವೇಳೆ ಜನರು ಮುತ್ತಿಕೊಂಡು ಮೋದಿ ಮೋದಿ ಘೋಷಣೆ ಕೂಗಿದರು.

Conclusion:
Last Updated : Apr 14, 2019, 6:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.