ETV Bharat / briefs

ತುಮಕೂರು ಮಿನಿ ವಿಧಾನಸೌಧದಲ್ಲೇ ಸ್ವಚ್ಛತೆ ಮರೀಚಿಕೆ - ಮಿನಿವಿಧಾನ ಸೌಧ

ಮದ್ಯದ ಬಾಟಲಿ, ಸಿಗರೇಟ್​ ಪ್ಯಾಕ್​ಗಳಿಂದ ಮಿನಿ ವಿಧಾನಸೌಧ ತುಂಬಿಕೊಂಡಿದೆ. ಇದು ಜಿಲ್ಲಾ ಆಡಳಿತ, ಪಾಲಿಕೆಯ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ.

ತುಮಕೂರು ಮಿನಿವಿಧಾನ ಸೌಧದ ಸುತ್ತಲೂ ರಾಶಿ ರಾಶಿ ಕಸ
author img

By

Published : May 12, 2019, 9:58 PM IST

ತುಮಕೂರು: ನಗರದ ಪಾಲಿಕೆಗೆ ಶಕ್ತಿ ಕೇಂದ್ರ ಎನಿಸಿರುವ ಮಿನಿ ವಿಧಾನಸೌಧದಲ್ಲೇ ಸ್ವಚ್ಛತೆ ಎಂಬುದು ಮರೀಚಿಕೆ ಆಗಿದೆ. ಸಿಗರೇಟ್​ ಪ್ಯಾಕ್, ಕುಡಿದು ಬಿಸಾಡಿರುವ ಮದ್ಯದ ಬಾಟಲಿಗಳಿಂದ ಮಿನಿ ವಿಧಾನಸೌಧ ನೋಡಿದರೆ ಮೂಗು ಮುರಿಯುವಂತಾಗಿದೆ.

ತುಮಕೂರು ಮಿನಿವಿಧಾನ ಸೌಧದ ಸುತ್ತಲೂ ರಾಶಿ ರಾಶಿ ಕಸ

ಇನ್ನೂ ಆಶ್ವರ್ಯದ ಸಂಗತಿ ಎಂದರೆ, ಇದೇ ಕಟ್ಟಡದಲ್ಲಿಯೇ ಜಿಲ್ಲಾಧಿಕಾರಿ ಕಚೇರಿ, ಅಪರ ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ, ಎಸಿ ಕಚೇರಿಗಳಿವೆ. ಇವುಗಳು ಹೇಗೆ ಬಂದವು? ಯಾರು ಇಲ್ಲಿ ಹಾಕಿದವರು? ಇದೆಲ್ಲವೂ ಅಧಿಕಾರಿಗಳ ಗಮನಕ್ಕೆ ಇದೆಯೇ ಎಂಬ ಹಲವು ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡುತ್ತಿವೆ.

ಇವುಗಳ ಜತೆಗೆ ಆವರಣದಲ್ಲಿ ಕೆಟ್ಟು ನಿಂತಿರುವ ವಾಹನಗಳು, ಕಸದ ರಾಶಿಯೂ ಬಿದ್ದಿದೆ. ಕಟ್ಟಡದ ಕಿಟಕಿ ಗಾಜುಗಳು ಒಡೆದು ಹೋಗಿದ್ದು. ಇದೇನಾ ಇಲ್ಲಿನ ಆಡಳಿತ ಎಂಬ ಪ್ರಶ್ನೆ ಮೂಡುತ್ತಿದೆ.

ಹೀಗೆ ಜಿಲ್ಲೆಯ ಜವಾಬ್ದಾರಿ ಹೊತ್ತ ಮಿನಿ ವಿಧಾನಸೌಧದಲ್ಲೇ ಇಂತಹ ವ್ಯವಸ್ಥೆ ಇರುವುದು ನಿಜಕ್ಕೂ ವಿಪರ್ಯಾಸದ ಸಂಗತಿ. ಇನ್ನಾದರೂ ಜಿಲ್ಲಾಡಳಿತ ಮತ್ತು ಜಿಲ್ಲಾ ಅಧಿಕಾರಿಗಳು ಹಾಗೂ ಪಾಲಿಕೆಯವರು ಎಚ್ಚೆತ್ತುಕೊಳ್ಳಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Intro:ತುಮಕೂರು: ತುಮಕೂರು ನಗರ ದಿನದಿಂದ ದಿನಕ್ಕೆ ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದೆ. ಯಾವ ಯಾವ ರಸ್ತೆಲ್ಲಿ ನೋಡಿದರೂ ಅಭಿವೃದ್ಧಿ ಅಭಿವೃದ್ಧಿ ಎಂಬ ಮಾತುಗಳು ಜನಪ್ರತಿನಿಧಿಗಳು ಹಾಗು ಅಧಿಕಾರಿಗಳ ಬಾಯಿಂದ ಕೇಳಿ ಬರುತ್ತಿದೆ. ಜೊತೆಗೆ ಸ್ವಚ್ಛತೆ ಬಗ್ಗೆ ಸ್ಥಳೀಯ ಆಡಳಿತ ಹೆಚ್ಚು ಮುತುವರ್ಜಿ ವಹಿಸಿದೆ ಎಂದು ಹೋದಲ್ಲಿ ಬಂದಲ್ಲಿ ಹೇಳುತ್ತಾರೆ, ಆದರೆ ಅವರು ಹೇಳುವ ರೀತಿ ನಗರದಲ್ಲಿ ಅಭಿವೃದ್ಧಿ ಮತ್ತು ಸ್ವಚ್ಛತೆ ಮಾತ್ರ ಕಾಣುತ್ತಿಲ್ಲ.

Body:ಅಷ್ಟೇ ಏಕೆ ತುಮಕೂರಿನ ಪಾಲಿಕೆಗೆ ಶಕ್ತಿಕೇಂದ್ರ ಎನಿಸಿರುವ ಮಿನಿ ವಿಧಾನಸೌಧದಲ್ಲೇ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಈ ಕಟ್ಟಡದಲ್ಲಿಯೇ ಜಿಲ್ಲಾಧಿಕಾರಿ, ಅಪಾರ ಜಿಲ್ಲಾಧಿಕಾರಿ, ತಹಶೀಲ್ದಾರ್, ಎಸಿ ಕಚೇರಿಗಳಿವೆ. ಆದರೆ ದೀಪದ ಕೆಳಗೆ ಕತ್ತಲು ಎಂಬಂತೆ ಇಲ್ಲಿಯೇ ಸ್ವಚ್ಛತೆ ಮರೀಚಿಕೆಯಾಗಿದೆ.
ಆರೋಗ್ಯಕ್ಕೆ ಹಾನಿಕಾರಕ ಎಂದು ಜಾಹೀರಾತಿನಲ್ಲಿ ತಿಳಿಸುವ, ಸಾರ್ವಜನಿಕ ಪ್ರದೇಶಗಳಲ್ಲಿ ನಿಷೇಧಿಸಲಾಗಿರುವ ಸಿಗರೇಟಿನ ಖಾಲಿ ಪ್ಯಾಕ್ ಗಳು, ಸೇದಿ ಬಿಸಾಕಿದ ಸಿಗರೇಟ್ ತುಂಡುಗಳು ಮತ್ತು ಮದ್ಯದ ಬಾಟಲಿಗಳನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಾಣಬಹುದಾಗಿದೆ.
ಇಂತಹ ಶಕ್ತಿ ಕೇಂದ್ರದಲ್ಲಿ ಎಣ್ಣೆ ಹೊಡೆಯುವುದು, ಸಿಗರೇಟ್ ಯಾರಪ್ಪ ಸೇರುತ್ತಾರೆ ಎಂಬ ಅನುಮಾನ ಮೂಡುತ್ತಿದೆ. ಇಲ್ಲಿ ಯಾರಾದರೂ ರಾತ್ರಿ ವೇಳೆ ಮಧ್ಯ ಸೇವನೆ ಮಾಡುತ್ತಾರೆ ಎಂಬ ಶಂಕೆ ಮೂಡುವಂತಾಗಿದೆ.
ಕಚೇರಿ ಆವರಣದಲ್ಲಿ ಕೆಟ್ಟು ನಿಂತಿರುವ ವಾಹನಗಳು, ಕಸದ ರಾಶಿ ಕಾಣಬಹುದಾಗಿದೆ. ಇನ್ನು ಕಟ್ಟಡದ ಕಿಟಕಿಯ ಗಾಜುಗಳನ್ನು ಒಡೆದು ಹೋಗಿದ್ದು, ಇದೇನಾ ಇಲ್ಲಿನ ಆಡಳಿತ ಎಂಬ ಪ್ರಶ್ನೆ ಮೂಡುವಂತಾಗಿದೆ.

Conclusion:ಇಡೀ ಜಿಲ್ಲೆಯ ಜವಾಬ್ದಾರಿ ಹೊತ್ತ ಜಿಲ್ಲಾಧಿಕಾರಿಗಳ ಕಚೇರಿಯಲ್ಲೇ ಇಂತಹ ವ್ಯವಸ್ಥೆ ಇರುವುದು ನಿಜಕ್ಕೂ ವಿಪರ್ಯಾಸದ ಸಂಗತಿ. ಇನ್ನಾದರೂ ಜಿಲ್ಲಾಡಳಿತ ಮತ್ತು ಜಿಲ್ಲಾ ಅಧಿಕಾರಿಗಳು ಇಲ್ಲೇ ಇರುವ ತಹಶೀಲ್ದಾರ್, ಎಸಿ ಅವರು ಎಚ್ಚೆತ್ತು ಸ್ವಚ್ಛತೆಗೆ ಆದ್ಯತೆ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ವರದಿ
ಸುಧಾಕರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.