ಗದಗ : ಕೊರೊನಾ ವೀಕೆಂಡ್ ಕರ್ಪ್ಯೂ ಹಿನ್ನೆಲೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಸಿಟಿ ರೌಂಡ್ಸ್ ಹಾಕಿ ಕರ್ಪ್ಯೂ ಪರಿಶೀಲಿಸಿದರು.
ಗದಗ ಜಿಲ್ಲಾ ಆಡಳಿತ ಭವನದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ನಡೆಸಿದ ಸಭೆ ನಂತರ ಸಿಟಿ ರೌಂಡ್ಸ್ ಹಾಕಿದರು.
ಕಾರಿನಲ್ಲೇ ನಗರ ಪ್ರದಕ್ಷಿಣೆ ಹಾಕಿದ ಸಚಿವ ಸಿ.ಸಿ ಪಾಟೀಲ್ ನಗರದ ನಾಮಜೋಷಿ ರೋಡ್, ಸ್ಟೇಷನ್ ರೋಡ್, ಗಾಂಧಿ ವೃತ್ತ, ಹಳೆ ಡಿಸಿ ಕಚೇರಿ ವೃತ್ತ, ಮುಳಗುಂದ ನಾಕಾ ಪ್ರದೇಶದಲ್ಲಿ ಕರ್ಪ್ಯೂ ಪರಿಸ್ಥಿತಿ ಅವಲೋಕನ ಮಾಡಿದರು.
ಈ ಬಳಿಕ ಮಾತನಾಡಿದ ಅವರು, ಗದಗನಲ್ಲಿ ಕರ್ಪ್ಯೂ ಯಶಸ್ವಿಯಾಗಿದೆ. ಜನರು ಸಹಕಾರ ನೀಡಿದ್ದಕ್ಕೆ ಧನ್ಯವಾದ ಎಂದರು.
ಇನ್ನು, ಸಚಿವರಿಗೆ ಡಿಸಿ ಸುಂದರೇಶಬಾಬು, ಎಸ್ಪಿ ಯತೀಶ್, ನಗರಸಭೆ ಆಯುಕ್ತ ರಮೇಶ್ ಜಾಧವ್, ಡಿವೈಎಸ್ಪಿ ಶಿವಾನಂದ ಸೇರಿದಂತೆ ಅನೇಕ ಅಧಿಕಾರಿಗಳು ಸಾಥ್ ನೀಡಿ ಅವರೂ ಸಹ ನಗರ ಪ್ರದಕ್ಷಿಣೆ ಹಾಕಿ ಮಾಹಿತಿ ನೀಡಿದರು.