ETV Bharat / briefs

ವಿಶ್ವದ ಜನಪ್ರಿಯ ಕ್ರೀಡಾ ತಂಡ: ಮುಂಬೈ ಇಂಡಿಯನ್ಸ್​ಗೆ ವಿಶ್ವದಲ್ಲಿ 3ನೇ ಸ್ಥಾನ, ಏಷ್ಯಾದಲ್ಲಿ ನಂ.1 - ಏಷ್ಯಾ

ಕ್ರಿಕೆಟ್​ ಜಗತ್ತಿನಲ್ಲೇ ಶ್ರೀಮಂತ ಲೀಗ್​ ಆಗಿರುವ ಐಪಿಎಲ್​ನ ಪ್ರಾಂಚೈಸಿಯಾದ ಮುಂಬೈ ಇಂಡಿಯನ್ಸ್​ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಪಟ್ಟಿಯಲ್ಲಿ ಏಷ್ಯಾದಲ್ಲಿ ಮೊದಲ ಹಾಗೂ ಪ್ರಪಂಚದಲ್ಲಿ 3ನೇ ಸ್ಥಾನ ಗಿಟ್ಟಿಸಿಕೊಂಡಿದೆ.

mi
author img

By

Published : May 4, 2019, 9:35 PM IST

ಮುಂಬೈ: ಕ್ರಿಕೆಟ್​ ಜಗತ್ತಿನಲ್ಲೇ ಶ್ರೀಮಂತ ಲೀಗ್​ ಆಗಿರುವ ಐಪಿಎಲ್​ನ ಪ್ರಾಂಚೈಸಿಯಾದ ಮುಂಬೈ ಇಂಡಿಯನ್ಸ್​ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಪಟ್ಟಿಯಲ್ಲಿ ಏಷ್ಯಾದಲ್ಲಿ ಮೊದಲ ಹಾಗೂ ಪ್ರಪಂಚದಲ್ಲಿ 3ನೇ ಸ್ಥಾನ ಗಿಟ್ಟಿಸಿಕೊಂಡಿದೆ.

ಇನ್​ಸ್ಟಾಗ್ರಾಮ್​ ವೀಕ್ಷಣೆಯಲ್ಲಿ ಮುಂಬೈಗೆ 5 ನೇ ಸ್ಥಾನ:

ಮಾರ್ಚ್​ ತಿಂಗಳಲ್ಲಿ ಬಿಡುಗಡೆಯಾಗಿರುವ ಅತಿ ಹೆಚ್ಚು ವೀಕ್ಷಣೆಯಾಗಿರುವ ಕ್ರೀಡಾ ತಂಡಗಳ ಇನ್​ಸ್ಟಾಗ್ರಾಮ್​ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್​ ಪೇಜ್​ನ ಪೋಸ್ಟ್​ಗಳನ್ನು 34.5 ಮಿಲಿಯನ್ಸ್ ಜನರು ವೀಕ್ಷಣೆ ಮಾಡಿದ್ದಾರೆ. ಸಿಎಸ್​ಕೆ ತಂಡದ ಪೋಸ್ಟ್​ಗಳು ಸಹಾ ಇಷ್ಠೇ ಪ್ರಮಾಣದ ವೀಕ್ಷಣೆ​ ಪಡೆದಿವೆಯಾದರೂ ಯೂಟ್ಯೂಬ್​ನಲ್ಲಿ ಸಿಎಸ್​ಕೆಗಿಂತ ಮುಂಬೈ ಇಂಡಿಯನ್ಸ್​ ತಂಡದ ವಿಡಿಯೋಗಳನ್ನು ಹೆಚ್ಚಿನ ಜನರು ವೀಕ್ಷಿಸಿರುವುದರಿಂದ ಮುಂಬೈ ಇಂಡಿಯನ್ಸ್​ ಶ್ರೇಯಾಂಕದಲ್ಲಿ ಸಿಎಸ್​ಕೆಯನ್ನು ಹಿಂದಿಕ್ಕಿದೆ.

ಇನ್​​ಸ್ಟಾಗ್ರಾಮ್​ನ ಹೆಚ್ಚು ವೀಕ್ಷಣೆ ಪಡೆದಿರುವ ಕ್ರೀಡಾ ತಂಡದಲ್ಲಿ ಮೊದಲ 3 ಮೂರು ಸ್ಥಾನದಲ್ಲಿ ಫುಟ್​ಬಾಲ್​ ಕ್ಲಬ್​ಗಳಾದ​ ಬಾರ್ಸಿಲೋನಾ(108 ಮಿಲಿಯನ್ಸ್​ ವೀಕ್ಷಣೆ ) 2ನೇ ಸ್ಥಾನದಲ್ಲಿ ಲೈವರ್​ಪೂಲ್​ (93.3 ಮಿಲಿಯನ್​) 3 ನೇ ಸ್ಥಾನದಲ್ಲಿ ಜುವೆಂಟಸ್​(65.6 ಮಿಲಿಯನ್​​) ಇವೆ. ಮುಂಬೈ ಇಂಡಿಯನ್ಸ್​ 5 ನೇ ಸ್ಥಾನದಲ್ಲಿದೆ.

ಯೂಟ್ಯೂಬ್​ ಶ್ರೇಯಾಂಕದಲ್ಲಿ 3ನೇ ಸ್ಥಾನ, ಏಷ್ಯಾದ ಶ್ರೇಯಾಂಕದಲ್ಲಿ ನಂ.1

ಏಪ್ರಿಲ್​ನಲ್ಲಿ ಬಿಡುಗಡೆಯಾದ ಯೂಟ್ಯೂಬ್​ನಲ್ಲಿ ಹೆಚ್ಚು ವೀಕ್ಷಣೆ​ ಪಡೆದಿರುವ ಕ್ರೀಡಾ ತಂಡಗಳ​ ಶ್ರೇಯಾಂಕ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್​ ಏಷ್ಯಾದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಮುಂಬೈ ತಂಡದ ಯೂಟ್ಯೂಬ್​ ಚಾನಲ್​ನ ವಿಡಿಯೋಗಳು ಏಪ್ರಿಲ್​ ತಿಂಗಳಲ್ಲಿ 16.1 ಮಿಲಿಯನ್​ ವೀಕ್ಷಣೆ ಪಡೆದುಕೊಂಡಿವೆ. ನಂತರದ 2 ಸ್ಥಾನಗಳಲ್ಲಿ ಆರ್​​ಸಿಬಿ(7.26) ಮತ್ತು ಸಿಎಸ್​ಕೆ(6.73)ತಂಡಗಳಿವೆ.

ಇದೇ ಶ್ರೇಯಾಂಕವನ್ನು ವಿಶ್ವಮಟ್ಟದಲ್ಲಿ ನೋಡುವುದಾದರೆ ಬಾರ್ಸಿಲೋನ ಫುಟ್​ಬಾಲ್​ ಕ್ಲಬ್​ 35.9 ಮಿಲಿಯನ್​ ವೀಕ್ಷಣೆ ಪಡೆದು ಮೊದಲನೇ ಸ್ಥಾನ ಪಡೆದುಕೊಂಡಿದೆ. 2ನೇ ಸ್ಥಾನದಲ್ಲಿ 18.1 ಮಿಲಿಯನ್​ ವೀಕ್ಷಣೆಯೊಂದಿಗೆ ಲೈವರ್​ಪೂಲ್​ ಕ್ಲಬ್​ ಇದ್ದರೆ, ಮುಂಬೈ ಇಂಡಿಯನ್​ 3ನೇ ಸ್ಥಾನ ಪಡೆದುಕೊಂಡಿದೆ. ಆರ್​ಸಿಬಿ ಈ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ.

ಕ್ರೀಡಾ ತಂಡಗಳ ಸಾಮಾಜಿಕ ಮಾಧ್ಯಮ ಪ್ರಭಾವವನ್ನು ವಿಶ್ವಮಟ್ಟದಲ್ಲಿ ಅಧ್ಯಯನ ಮಾಡುವ ಸ್ಪ್ಯಾನೀಷ್​ ಕ್ರೀಡಾ ನಿರ್ವಹಣೆ ಸಂಸ್ಥೆಯಾದ ಡೆಪೋರ್ಟ್ಸ್​ ಮತ್ತು ಫಿನಾಂಜಸ್​ ಸಾಮಾಜಿಕ ಜಾಲತಾಣಗಳನ್ನು ವಿಶ್ಲೇಷಣೆ ನಡೆಸಿ ಶ್ರೇಯಾಂಕಗಳನ್ನು ಘೋಷಿಸಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.