ಪ್ಯಾರಿಸ್(ಫ್ರಾನ್ಸ್): ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಕೆ ಇಂದು ಕ್ರಿಕೆಟರ್ ಆಗಿ ರಾಷ್ಟ್ರೀಯ ತಂಡದಲ್ಲಿ ಮಿಂಚಬೇಕಿತ್ತು. ಆದರೆ ಇದೀಗ ಫ್ರೆಂಚ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ.
ಹೌದು, ಫ್ರೆಂಚ್ ಓಪನ್ ಮಹಿಳೆಯ ವಿಭಾಗದಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ ಆಶ್ಲೀ ಬಾರ್ಟಿ ಮೂಲತಃ ಓರ್ವ ಕ್ರಿಕೆಟರ್. 1973ರ ಬಳಿಕ ಫ್ರೆಂಚ್ ಓಪನ್ ಗೆದ್ದ ಆಸೀಸ್ನ ಟೆನಿಸ್ ಆಟಗಾರ್ತಿಯಾಗಿರುವ ಈಕೆ ಕೆಲ ವರ್ಷಗಳ ಹಿಂದೆ ಮಹಿಳಾ ಕ್ರಿಕೆಟ್ ಲೀಗ್ನಲ್ಲಿ ಮಿಂಚು ಹರಿಸಿದ್ದಳು. ಉಪಾಂತ್ಯದಲ್ಲಿ ಮಾರ್ಕೆಟಾ ವುಂಡ್ರೋಸುವಾರನ್ನು 6-1, 6-3 ಸೆಟ್ಗಳಿಂದ ಮಣಿಸಿ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಗೆದ್ದಿದ್ದಾಳೆ.
-
That was FUN.
— Roland-Garros (@rolandgarros) June 9, 2019 " class="align-text-top noRightClick twitterSection" data="
Check out highlights from @ashbar96's #RG19 triumph.
📝: https://t.co/FJdsaBBRCP pic.twitter.com/9Mvos9Qi7x
">That was FUN.
— Roland-Garros (@rolandgarros) June 9, 2019
Check out highlights from @ashbar96's #RG19 triumph.
📝: https://t.co/FJdsaBBRCP pic.twitter.com/9Mvos9Qi7xThat was FUN.
— Roland-Garros (@rolandgarros) June 9, 2019
Check out highlights from @ashbar96's #RG19 triumph.
📝: https://t.co/FJdsaBBRCP pic.twitter.com/9Mvos9Qi7x
2011ರಲ್ಲಿ ವಿಂಬಲ್ಡನ್ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಆಶ್ಲೀ ಕೊಂಚ ಬ್ರೇಕ್ ಅಗತ್ಯವಿದೆ ಎಂದು ಕಾರಣ ನೀಡಿ ಸ್ಪರ್ಧಾತ್ಮಕ ಟೆನಿಸ್ನಿಂದ ದೂರ ಸರಿದಿದ್ದಳು. ಇದೇ ಸಮಯದಲ್ಲಿ ಆಕೆ ಕ್ರಿಕೆಟ್ ಟ್ರೈ ಮಾಡೋಣ ಎಂದು ಮೈದಾನಕ್ಕಿಳಿದಿದ್ದಳು.
ಮಹಿಳಾ ಬಿಗ್ಬ್ಯಾಷ್ ಲೀಗ್ನಲ್ಲಿ ಬ್ರಸ್ಬೇನ್ ಹೀಟ್ ಪರವಾಗಿ ಕಾಣಿಸಿಕೊಂಡಿದ್ದಳು. ಒಂಭತ್ತು ಪಂದ್ಯವನ್ನಾಡಿದ್ದ ಆಶ್ಲೀಯ ಗರಿಷ್ಠ ಸ್ಕೋರ್ 39.
"ಮೂರು ವರ್ಷದ ಹಿಂದೆ ಆಶ್ಲೀ ವೃತ್ತಿಪರ ಕ್ರಿಕೆಟ್ ಆಟವಾಡುತ್ತಿದ್ದಳು. ಅದೇ ರೀತಿ ಮುಂದುವರೆದಿದ್ದರೆ ಈ ವೇಳೆಗೆ ಆಕೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರುತ್ತಿದ್ದಳು" ಎಂದು ಮಾಜಿ ಕೋಚ್ ಆ್ಯಂಡಿ ರಿಚರ್ಡ್ ಆಶ್ಲೀ ಬಗ್ಗೆ ಹೇಳಿದ್ದಾರೆ.
ಪ್ರಸ್ತುತ ಮಹಿಳಾ ಟೆನ್ನಿಸ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಆಶ್ಲೀ ಮೊದಲ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾಳೆ. ಫ್ರೆಂಚ್ ಓಪನ್ ಫೈನಲ್ ಗೆಲುವು ಆಕೆಯ ಈ ಗುರಿ ತಲುಪಲು ಮತ್ತಷ್ಟು ಉತ್ತೇಜನ ನೀಡಿದೆ.