ನವದೆಹಲಿ : ಕೋವಿಡ್ ಪರಿಸ್ಥಿತಿಯಿಂದಾಗಿ ಪ್ರಸ್ತುತ ಜನರು ಆಸ್ಪತ್ರೆಗೆ ಹೋಗುವ ಬದಲು ವೈದ್ಯರಿಗೆ ಕರೆಗಳು ಮತ್ತು ವಿಡಿಯೋ ಕರೆಗಳ ಮೂಲಕ ಸಮಾಲೋಚನೆ ನಡೆಸುತ್ತಿದ್ದಾರೆ. ವೈದ್ಯರು ಸಹಾ ಕೊರೊನಾಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಆನ್‌ಲೈನ್ ಮೂಲಕ ತಮ್ಮ ರೋಗಿಗಳಿಗೆ ನೀಡುತ್ತಿದ್ದಾರೆ.
ಆದರೆ, ಈ ನಡುವೆ, ವಾಟ್ಸ್ಆ್ಯಪ್ ಚಾಟ್ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ದೆಹಲಿಯ ಸಾಕೆತ್ ಮ್ಯಾಕ್ಸ್ ಆಸ್ಪತ್ರೆಯ ಡಾ. ವಿಕಾಸ್ ಅಹ್ಲುವಾಲಿಯಾ ಅವರು ವಿಡಿಯೋ ಸಮಾಲೋಚನೆ ಮತ್ತು ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕ ಕೊರೊನಾಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ನೀಡಲು 50,000 ಶುಲ್ಕವನ್ನು ಪಡೆಯುತ್ತಿದ್ದಾರಂತೆ.
ಈ ವೈರಲ್ ಚಾಟ್ ಕುರಿತು ದೆಹಲಿ ಸಾಕೆಟ್ ಮ್ಯಾಕ್ಸ್ ಆಸ್ಪತ್ರೆಯ ಆಡಳಿತದೊಂದಿಗೆ ಮಾತನಾಡಿದಾಗ, ಆಸ್ಪತ್ರೆಯ ವಕ್ತಾರರು ತಮಗೂ ಈ ಮಾಹಿತಿ ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಯಿತು ಎಂದು ತಿಳಿಸಿದರು.
ಡಾ. ಅಹ್ಲುವಾಲಿಯಾ ವಿಡಿಯೋ ಸಮಾಲೋಚನೆ ಮತ್ತು ವಾಟ್ಸ್ಆ್ಯಪ್ ಸಂದೇಶಗಳಿಗಾಗಿ 500 ರಿಂದ 50 ಸಾವಿರ ಶುಲ್ಕ ವಿಧಿಸುತ್ತಾರಂತೆ. ಸುದ್ದಿ ತಿಳಿದ ಆಸ್ಪತ್ರೆಯ ಆಡಳಿತ ಡಾ. ವಿಕಾಸ್ ಅಹ್ಲುವಾಲಿಯಾ ಅವರನ್ನು ಆಸ್ಪತ್ರೆಯಿಂದ ವಜಾಗೊಳಿಸಿದೆ.