ವಿಜಯಪುರ: ಕೊರೊನಾ ವೈರಸ್ ನಿಯಂತ್ರಣಕ್ಕೆ ಮಾಸ್ಕ್ ಧರಿಸುವ ಸಂಬಂಧ ಜಿಲ್ಲಾಡಳಿದಿಂದ ಜನ ಜಾಗೃತಿ ಕಾರ್ಯಕ್ರಮ ನಡೆಯಿತು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರು ತಮ್ಮ ಸಿಬ್ಬಂದಿ ಜೊತೆಗೆ ನಗರದ ಬಸವೇಶ್ವರ ವೃತ್ತ, ಎಲ್ಬಿಎಸ್ ಮಾರುಕಟ್ಟೆ ರಸ್ತೆ, ಗಾಂಧಿ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಾಸ್ಕ್ ಧರಿಸಿ ಕೊರೊನಾ ವೈರಸ್ನಿಂದ ದೂರವಿರುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಈ ವೇಳೆ ಮಹಾನಗರ ಪಾಲಿಕೆಯಿಂದ ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಿಸಲಾಯಿತು. ಅಲ್ಲದೇ, ರಸ್ತೆ ಮೇಲೆ ಮಾಸ್ಕ್ ಇಲ್ಲದೆ ಓಡಾಟ ನಡೆಸುವ ಹಾಗೂ ಬೀದಿ ವ್ಯಾಪಾರಿಗಳಿಗೆ ಮಾಸ್ಕ್ ಧರಿಸುವಂತೆಯೂ ಅಧಿಕಾರಿಗಳು ಮನವಿ ಮಾಡಿದರು.