ಬೆಂಗಳೂರು: ಬೆಂಗಳೂರಿನ ರಸ್ತೆಯೊಂದರಲ್ಲಿ ಸ್ಕೂಟರ್ನಲ್ಲಿ ಬಂದು ಕಸ ಎಸೆದು ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಜನ ಗೂಸಾ ಕೊಟ್ಟಿದ್ದಾರೆ.
ಇದು ಯಾವ ರಸ್ತೆ, ನಿಖರ ಜಾಗ ಯಾವುದು ಎಂದು ಶೇರ್ ಮಾಡಿರುವವರು ಹೇಳಿಕೊಂಡಿಲ್ಲ. ಆದ್ರೆ, ಹಸಿರು ಟಿಶರ್ಟ್ ತೊಟ್ಟ ತಂಡವೊಂದು ಕಸ ಹಾಕಿ ಹೋಗುತ್ತಿದ್ದವನನ್ನು ತಡೆದು ಧರ್ಮದೇಟು ಕೊಟ್ಟಿದೆ.
ನಡೆದದ್ದೇನು..?
ನೀಲಿ ಬಣ್ಣದ ಸ್ಕೂಟರ್ನಲ್ಲಿ ಬಂದ ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ತಾನು ತಂದಿದ್ದ ಕಸದ ಚೀಲ ಎಸೆದು ಹೋಗುತ್ತಿದ್ದ. ಇದನ್ನು ಗಮನಿಸಿದ ಹಸಿರು ಟಿ ಶರ್ಟ್ ತೊಟ್ಟಿದ್ದ ಗುಂಪೊಂದು ತಡೆದಾಗ, ನೀನ್ಯಾರು ಕೇಳೋಕೆ? ಎಂದು ಆವಾಜ್ ಹಾಕಿದ್ದಾನೆ. ಇದರಿಂದ ಕೋಪಗೊಂಡ ಜನರ ಆತನನ್ನು ಹಿಡಿದು ಎಳೆದಾಡಿದ್ದಾರೆ. ಹಿಂಬದಿಯಿಂದ ಮೂರ್ನಾಲ್ಕು ಮಂದಿ ಗೂಸಾ ಕೊಟ್ಟಿದ್ದಾರೆ.
-
ತುಂಬಾ ಅತ್ಯುತ್ತಮ ಕಾರ್ಯ. ಪ್ರತಿ ನಗರ, ಪಟ್ಟಣ, ಗ್ರಾಮಗಳಲ್ಲೂ ಇಂತಹ ತಂಡಗಳು ಕಾರ್ಯ ನಿರ್ವಹಿಸಬೇಕು. ಅಂದಾಗ ಮಾತ್ರ ನಮ್ಮ ಜನ ಜಾಗೃತರಾಗಬಹುದು...! pic.twitter.com/f8PMSSvhpJ
— Nataraj Sidnal (ಸಿದ್ನಾಳ ನಟರಾಜ) (@nataraj_sidnal) May 19, 2019 " class="align-text-top noRightClick twitterSection" data="
">ತುಂಬಾ ಅತ್ಯುತ್ತಮ ಕಾರ್ಯ. ಪ್ರತಿ ನಗರ, ಪಟ್ಟಣ, ಗ್ರಾಮಗಳಲ್ಲೂ ಇಂತಹ ತಂಡಗಳು ಕಾರ್ಯ ನಿರ್ವಹಿಸಬೇಕು. ಅಂದಾಗ ಮಾತ್ರ ನಮ್ಮ ಜನ ಜಾಗೃತರಾಗಬಹುದು...! pic.twitter.com/f8PMSSvhpJ
— Nataraj Sidnal (ಸಿದ್ನಾಳ ನಟರಾಜ) (@nataraj_sidnal) May 19, 2019ತುಂಬಾ ಅತ್ಯುತ್ತಮ ಕಾರ್ಯ. ಪ್ರತಿ ನಗರ, ಪಟ್ಟಣ, ಗ್ರಾಮಗಳಲ್ಲೂ ಇಂತಹ ತಂಡಗಳು ಕಾರ್ಯ ನಿರ್ವಹಿಸಬೇಕು. ಅಂದಾಗ ಮಾತ್ರ ನಮ್ಮ ಜನ ಜಾಗೃತರಾಗಬಹುದು...! pic.twitter.com/f8PMSSvhpJ
— Nataraj Sidnal (ಸಿದ್ನಾಳ ನಟರಾಜ) (@nataraj_sidnal) May 19, 2019
ಆತನನ್ನು ಮತ್ತೆ ಅದೇ ಜಾಗಕ್ಕೆ ಎಳೆದು ತಂದು ಎಸೆದಿದ್ದ ಕಸವನ್ನು ವಾಪಸ್ ತುಂಬಿಸಿ ಸ್ಕೂಟರ್ನಲ್ಲಿ ಕಳುಹಿಸಿದ್ದಾರೆ. ಟ್ವಿಟರ್ನಲ್ಲಿ ಈ ವೀಡಿಯೊ ಕುರಿತು ಚರ್ಚೆಯಾಗುತ್ತಿದ್ದು, ತುಂಬಾ ಅತ್ಯುತ್ತಮ ಕಾರ್ಯ. ಪ್ರತಿ ನಗರ, ಪಟ್ಟಣ, ಗ್ರಾಮಗಳಲ್ಲೂ ಇಂತಹ ತಂಡಗಳು ಕಾರ್ಯ ನಿರ್ವಹಿಸಬೇಕು. ಅಂದಾಗ ಮಾತ್ರ ನಮ್ಮ ಜನ ಜಾಗೃತರಾಗಬಹುದು...! ಎಂಬ ಮಾತುಗಳು ಕೇಳಿಬರುತ್ತಿವೆ.