ಭೋಪಾಲ್: ಮಾಲೆಗಾಂವ್ ಸ್ಫೋಟ ಪ್ರಕರಣ ಸಂಬಂಧ ಜೈಲು ಸೇರಿದ್ದ ಸಾಧ್ವಿ ಪ್ರಗ್ಯ ಸಿಂಗ್ ಅವರು ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡದಂತೆ ವ್ಯಕ್ತಿಯೊಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ.
ಭೋಪಾಲ್ನಲ್ಲಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಸಾಧ್ವಿ ಅವರಿಗೆ ಉಗ್ರ ಕಳಂಕ ಇರುವ ಕಾರಣ ಅವರಿಗೆ ಅವಕಾಶ ನೀಡಕೂಡದು ಎಂದು ಮಾಲೆಗಾಂವ್ ಸ್ಫೋಟದಲ್ಲಿ ಮಗನನ್ನುಕಳೆದುಕೊಂಡ ತೆಹ್ಸೀನ್ ಪೂಂಚ್ವಾಲಾ ಅವರು ಎನ್ಐಎ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
-
Malegaon blast victim's father approaches NIA court to bar Sadhvi Pragya Thakur from contesting Lok Sabha poll
— ANI Digital (@ani_digital) April 18, 2019 " class="align-text-top noRightClick twitterSection" data="
Read @ANI Story | https://t.co/hJuDNnAjsB pic.twitter.com/aXATqXy1qN
">Malegaon blast victim's father approaches NIA court to bar Sadhvi Pragya Thakur from contesting Lok Sabha poll
— ANI Digital (@ani_digital) April 18, 2019
Read @ANI Story | https://t.co/hJuDNnAjsB pic.twitter.com/aXATqXy1qNMalegaon blast victim's father approaches NIA court to bar Sadhvi Pragya Thakur from contesting Lok Sabha poll
— ANI Digital (@ani_digital) April 18, 2019
Read @ANI Story | https://t.co/hJuDNnAjsB pic.twitter.com/aXATqXy1qN
ಅನಾರೋಗ್ಯದ ನೆಪ ಹೇಳಿ ಜಾಮೀನಿನ ಮೇಲೆ ಹೊರಬಂದಿರುವ ಸಾಧ್ವಿ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಹೇಗೆ ಅವಕಾಶ ಸಿಕ್ಕಿದೆ? ಈ ಬೇಸಿಗೆಯ ಶೆಕೆಯಲ್ಲಿ ಅವರು ಓಡಾಡುತ್ತಿದ್ದಾರೆಂದರೆ ಅವರ ಆರೋಗ್ಯ ಸರಿಯಾಗಿಯೇ ಇದೆ. ಸಾಧ್ವಿ ಅವರು ಕೋರ್ಟ್ ದಾರಿ ತಪ್ಪಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.