ಲಖನೌ: ಉತ್ತರ ಭಾರತದಲ್ಲಿ ಈಗ ಬಿಸಿ ಗಾಳಿಯ ಅಬ್ಬರ. ಜಾಗತಿಕ ಹವಾಮಾನ ವೈಪರೀತ್ಯ ದಿನ ದಿನಕ್ಕೂ ತಾಪಮಾನ ಏರುವಂತೆ ಮಾಡಿದೆ. ಪರಿಣಾಮ ಜನ- ಜಾನುವಾರು, ಪಕ್ಷಿ ಸಂಕುಲ ಬಿಸಿಲಿನಿಂದ ಬಸವಳಿದಿದೆ.
ಯೆಸ್, ಈ ಮಾತಿಗೆ ಇಂಬು ನೀಡುವಂತೆ ಲಖನೌ ಟ್ರಾಫಿಕ್ ಪೊಲೀಸರಿಗೆ ಬಿಸಿಲಿನ ಝಳ ತಡೆಯಲು ಸಾಧ್ಯವಾಗದೇ, ಅತ್ತ ಟ್ರಾಫಿಕ್ ಕಿರಿ ಕಿರಿ ನಿಯಂತ್ರಣ ಮಾಡಲು ಹರಸಾಹಸ ಪಡುತ್ತಿದ್ದಾರೆ.
-
SP Traffic, Lucknow: It's getting difficult for jawans to work due to rising temp. Karnataka police uses hats that help avoid sun&also have ventilation. Ordered 50 caps from Bengaluru for trial, detailed report will be made&a committee will decide if it'll be included in uniform pic.twitter.com/Jxbrt4RzNY
— ANI UP (@ANINewsUP) May 15, 2019 " class="align-text-top noRightClick twitterSection" data="
">SP Traffic, Lucknow: It's getting difficult for jawans to work due to rising temp. Karnataka police uses hats that help avoid sun&also have ventilation. Ordered 50 caps from Bengaluru for trial, detailed report will be made&a committee will decide if it'll be included in uniform pic.twitter.com/Jxbrt4RzNY
— ANI UP (@ANINewsUP) May 15, 2019SP Traffic, Lucknow: It's getting difficult for jawans to work due to rising temp. Karnataka police uses hats that help avoid sun&also have ventilation. Ordered 50 caps from Bengaluru for trial, detailed report will be made&a committee will decide if it'll be included in uniform pic.twitter.com/Jxbrt4RzNY
— ANI UP (@ANINewsUP) May 15, 2019
ಸದಾ ಬಿಸಿಲಿನಲ್ಲೇ ನಿಂತಿರಬೇಕಾದ ಟ್ರಾಫಿಕ್ ಪೊಲೀಸರು, ಸಖತ್ ಸಂಕಷ್ಟ ಎದುರಿಸುತ್ತಿದ್ದಾರೆ. ಇವರ ಬವಣೆ ನಿವಾರಿಸಲು ಲಖನೌ ಟ್ರಾಫಿಕ್ ಎಸ್ಪಿ ಹೊಸ ಐಡಿಯಾ ಮಾಡಿದ್ದಾರೆ. ಬಿಸಿಲಿನಿಂದ ರಕ್ಷಣೆ ಪಡೆಯಲು ಫ್ಯಾನ್ ಸವಲತ್ತು ಹೊಂದಿರುವ ವಿಶೇಷ ಕ್ಯಾಪ್ ನೀಡಲು ಚಿಂತನೆ ನಡೆಸಿದ್ದಾರೆ.
ಈಗಾಗಲೇ ಸೂರ್ಯನ ಕಿರಣ ಹಾಗೂ ದಗೆ ತಡೆಯಲು ಕರ್ನಾಟಕ ಪೊಲೀಸರು, ಇಂತಹ ವಿಶೇಷ ಕ್ಯಾಪ್ಗಳನ್ನ ಬಳಸುತ್ತಿದ್ದಾರೆ. ಇಂತಹುದೇ ಕ್ಯಾಪ್ ಬಳಸಲು ಉತ್ತರ ಪ್ರದೇಶ ಪೊಲೀಸರು ನಿರ್ಧರಿಸಿದ್ದಾರೆ.
ಇದಕ್ಕಾಗಿ ಬೆಂಗಳೂರಿನಿಂದ ಸುಮಾರು 50 ಕ್ಯಾಪ್ ತರಿಸಿದ್ದು, ಅದು ಸರಿ ಹೊಂದುತ್ತಾ ಎಂಬುದನ್ನ ಪರೀಕ್ಷಿಸಲು ಮುಂದಾಗಿದೆ. ಈ ಸಂಬಂಧ ಅಧ್ಯಯನದ ಮೂಲಕ ಅದರ ಉಪಯೋಗ ಹಾಗೂ ಅಗತ್ಯತೆಯ ಪರಿಶೀಲನೆ ನಡೆಸಲಿದೆ. ಇದು ಸರಿ ಹೊಂದಿದರೆ ಒಂದು ಸಮಿತಿ ರಚನೆ ಮಾಡಿ ಸಮವಸ್ತ್ರದ ಜತೆ ಕ್ಯಾಪ್ ನೀಡಲು ಉತ್ತರ ಪ್ರದೇಶ ಪೊಲೀಸರು ನಿರ್ಧರಿಸಿದ್ದಾರೆ.