ಚಿಕ್ಕೋಡಿ : ಪ್ರೀತಿಸಿ ಮದುವೆಯಾಗಿದ್ದ ಮುಸ್ಲಿಂ ಯುವತಿಯನ್ನು ಯುವಕನ ಪೋಷಕರು ಮನೆಗೆ ಸೇರಿಸಿಕೊಳ್ಳದ ಕಾರಣ ಆಕೆಗೆ ವಿರಕ್ತಮಠದ ಆನಂದ ದೇವರು ಸ್ವಾಮೀಜಿ ಲಿಂಗದೀಕ್ಷೆ ನೀಡಿದರು.
ಮುಸ್ಲಿಂ ಯುವತಿ ಲಿಂಗದೀಕ್ಷೆ ಪಡೆದಿದ್ದಕ್ಕೆ ಕಾರಣ : ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಲಿಂಗಾಯತ ಸಮುದಾಯಕ್ಕೆ ಸೇರಿದ ಯುವಕನೋರ್ವ ಪ್ರೀತಿಸಿದ ಅದೇ ಗ್ರಾಮದ ಮುಸ್ಲಿಂ ಯುವತಿಯನ್ನು ನಾಲ್ಕು ತಿಂಗಳ ಹಿಂದೆ ಚಿಕ್ಕೋಡಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ರಿಜಿಸ್ಟ್ರಾರ್ ಮದುವೆಯಾಗಿದ್ದ.

ಆದರೆ, ಯುವಕನ ತಂದೆ-ತಾಯಿ ಲಿಂಗದೀಕ್ಷೆ ಮಾಡಿಕೊಂಡರೆ ಮಾತ್ರ ಸೊಸೆಯನ್ನು ಮನೆ ಸೇರಿಸಿಕೊಳ್ಳುವುದು ಎಂದು ಷರತ್ತು ವಿಧಿಸಿದ್ದರು. ಹೀಗಾಗಿ, ಪೋಷಕರ ನಿರಾಕರಣೆ ಹಿನ್ನೆಲೆಯಲ್ಲಿ ಯುವಕ ವಿರಕ್ತಮಠಕ್ಕೆ ಭೇಟಿ ನೀಡಿ ಆನಂದ ದೇವರು ಸ್ವಾಮೀಜಿಗೆ ವಿಚಾರ ತಿಳಿಸಿದ್ದ.
ಸ್ವಾಮೀಜಿ ನಿಗದಿಪಡಿಸಿದ ದಿನಾಂಕವಾದ ಮೇ 7ರಂದು ಹುಕ್ಕೇರಿ ವಿರಕ್ತಮಠಕ್ಕೆ ಆಗಮಿಸಿದ ಜೋಡಿ, ಸ್ವಾಮೀಜಿ ಕೈಯಿಂದ ಲಿಂಗಾಯತ ವಿಧಿ-ವಿಧಾನ ನೆರವೇರಿಸಿ ಮುಸ್ಲಿಂ ಯುವತಿಗೆ ಲಿಂಗದೀಕ್ಷೆ ಮಾಡಿಸಿಕೊಂಡಿದ್ದಾನೆ.