ETV Bharat / briefs

ಸಿಡಿಲಿಗೆ ಬಲಿಯಾಗುವುದನ್ನು ತಡೆಯಲು ಮಿಂಚು ಪ್ರತಿಬಂಧಕ: ಬೇಡಿಕೆಗೆ ಸಿಗುತ್ತಾ ಪರಿಹಾರ? - prevent thunderbolt

ಜಿಲ್ಲೆಯಲ್ಲಿ ಸಿಡಿಲು ಕೇವಲ ಪ್ರಾಣ ಹಾನಿಯಲ್ಲದೆ ಮನೆ, ಆಸ್ತಿಪಾಸ್ತಿ, ಜಾನುವಾರುಗಳ ಸಾವು ಹೀಗೆ ಎಲ್ಲವನ್ನೂ ಹಾನಿ ಮಾಡುತ್ತಿದೆ. ಸಿಡಿಲಿನಿಂದ ಜನರನ್ನು ರಕ್ಷಿಸಲು ಪರಿಹಾರವಿದ್ದರೂ, ಆಡಳಿತ ವ್ಯವಸ್ಥೆ ಮಾತ್ರ ಪರಿಹಾರವನ್ನು ಕಲ್ಪಿಸಲಾರದಷ್ಟು ಜಡ್ಡುಕಟ್ಟಿ ಹೋಗಿದೆ. ಅದರಲ್ಲೂ ಸಿಡಿಲಿನಿಂದ ಅತೀ ಹೆಚ್ಚು ಸಾವಾಗುತ್ತಿರುವ ನೆಲ್ಯಾಡಿ, ಕುಂಬ್ರಾ, ಚಾರ್ವಾಕ, ಕಾಣಿಯೂರು, ಪುಣಚ ಹಾಗೂ ಇತರ ಪ್ರದೇಶಗಳಲ್ಲಿ ಮಿಂಚು ಬಂಧಕವನ್ನು ಅಳವಡಿಸಬೇಕು ಎನ್ನುವ ಬಗ್ಗೆ ತಾಲೂಕು ಪಂಚಾಯತ್ ಸಭೆಗಳಲ್ಲೂ ನಿರ್ಣಯವಾಗಿದೆ.

ಸಿಡಿಲಿಗೆ ಬಲಿಯಾಗುವುದನ್ನು ತಡೆಯಲು ಮಿಂಚು ಪ್ರತಿಬಂಧಕ: ಬೇಡಿಕೆಗೆ ಸಿಗುತ್ತಾ ಪರಿಹಾರ?

author img

By

Published : Jul 9, 2021, 1:15 AM IST

ಮಂಗಳೂರು: ಮಳೆಗಾಲದಲ್ಲಿ ಸಿಡಿಲಿಗೆ ಹೆಚ್ಚು ಬಲಿಯಾಗುವ ಪ್ರದೇಶಗಳನ್ನು ಗುರುತಿಸಿ ಆ ಭಾಗದಲ್ಲಿ ಮಿಂಚು ಬಂಧಕ ಅಳವಡಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿತ್ತು. 2 ವರ್ಷ ಕಳೆದರೂ ಈ ವರೆಗೂ ಯೋಜನೆ ಕಾರ್ಯ ರೂಪಕ್ಕೆ ಬಾರದಿರುವುದು ಸರ್ಕಾರದ ದಿವ್ಯ ನಿರ್ಲಕ್ಷ್ಯದ ಒಂದು ಭಾಗವಾಗಿದೆ.

ರೈಲು ಹೋದ ಬಳಿಕ ಟಿಕೆಟ್ ತೆಗೆಯುವುದು ನಮ್ಮನ್ನಾಳುವ ಜನಪ್ರತಿನಿಧಿಗಳ ಹಾಗೂ ಸರ್ಕಾರದ ಪಾಲಿಸಿ. ಹೌದು, ಇಂಥಹ ಉದಾಹರಣೆಯನ್ನು ನೀಡುವುದಕ್ಕೆ ಹಲವು ನಿದರ್ಶನಗಳೂ ನಮ್ಮ ಮುಂದಿದೆ. ಮಳೆಗಾಲ ಬಂತೆಂದರೆ ಮಳೆಯ ಪ್ರವಾಹದ ಜೊತೆಗೆ ಭೀಕರ ಸಿಡಿಲು ಕೂಡಾ ಬರುವುದು ಸಾಮಾನ್ಯ. ಅದರಲ್ಲೂ ಕರಾವಳಿ ಭಾಗದಲ್ಲಿ ಯಾವ ರೀತಿ ಪ್ರತಿವರ್ಷ ದೈವಗಳಿಗೆ ಕೋಳಿ ಬಲಿ ನೀಡಲಾಗುತ್ತದೋ ಅದೇ ರೀತಿಯಲ್ಲಿ ಮಳೆಗಾಲದಲ್ಲಿ ಬರುವ ಈ ಸಿಡಿಲು-ಮಿಂಚಿಗೆ ಜನರ ಬಲಿಯಾಗುತ್ತಾರೆ.

ಕರಾವಳಿಯಲ್ಲಿ ಮೇಘಸ್ಫೋಟದ ರೀತಿಯಲ್ಲಿ ಮಳೆ ಬರುತ್ತದೆ. ಇದರ ಜೊತೆಗೆ ಸಿಡಿಲು-ಮಿಂಚುಗಳ ಆರ್ಭಟವೂ ಹೆಚ್ಚಾಗುತ್ತದೆ. ಇಂಥ ಸಮಯದಲ್ಲಿ ಸಿಡಿಲಿಗೆ ತುತ್ತಾಗಿ ಜನರ ಪ್ರಾಣ ಬಲಿಯಾಗುವ ಸನ್ನಿವೇಶಗಳೂ ಹೆಚ್ಚಾಗಿದೆ. ಕರಾವಳಿ ಜಿಲ್ಲೆಯಾದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಮಳೆಗಾಲದಲ್ಲಿ ಸಿಡಿಲಿಗೆ ಬಲಿಯಾಗಿ ಸಾವನ್ನಪ್ಪುವವರ ಸಂಖ್ಯೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಗಣನೀಯ ಏರಿಕೆಯಾಗುತ್ತಿದೆ.

ಸಿಡಿಲಿಗೆ ಬಲಿಯಾಗುವುದನ್ನು ತಡೆಯಲು ಮಿಂಚು ಪ್ರತಿಬಂಧಕ

ಜಿಲ್ಲೆಯಲ್ಲಿ ಸಿಡಿಲು ಕೇವಲ ಪ್ರಾಣ ಹಾನಿಯಲ್ಲದೆ ಮನೆ, ಆಸ್ತಿಪಾಸ್ತಿ, ಜಾನುವಾರುಗಳ ಸಾವು ಹೀಗೆ ಎಲ್ಲವನ್ನೂ ಹಾನಿ ಮಾಡುತ್ತಿದೆ. ಸಿಡಿಲಿನಿಂದ ಜನರನ್ನು ರಕ್ಷಿಸಲು ಪರಿಹಾರವಿದ್ದರೂ, ಆಡಳಿತ ವ್ಯವಸ್ಥೆ ಮಾತ್ರ ಪರಿಹಾರವನ್ನು ಕಲ್ಪಿಸಲಾರದಷ್ಟು ಜಡ್ಡುಕಟ್ಟಿ ಹೋಗಿದೆ. ಅದರಲ್ಲೂ ಸಿಡಿಲಿನಿಂದ ಅತೀ ಹೆಚ್ಚು ಸಾವಾಗುತ್ತಿರುವ ನೆಲ್ಯಾಡಿ, ಕುಂಬ್ರಾ, ಚಾರ್ವಾಕ, ಕಾಣಿಯೂರು, ಪುಣಚ ಹಾಗೂ ಇತರ ಪ್ರದೇಶಗಳಲ್ಲಿ ಮಿಂಚು ಬಂಧಕವನ್ನು ಅಳವಡಿಸಬೇಕು ಎನ್ನುವ ಬಗ್ಗೆ ತಾಲೂಕು ಪಂಚಾಯತ್ ಸಭೆಗಳಲ್ಲೂ ನಿರ್ಣಯವಾಗಿದೆ.

ಜಿಲ್ಲಾಡಳಿತ 2014 ರಲ್ಲೇ ಜಿಲ್ಲೆಯಲ್ಲಿ ಎಲ್ಲೆಲ್ಲಿ ಮಿಂಚು ಬಂಧಕ ಅಳವಡಿಸಬೇಕು ಎನ್ನುವ ಕುರಿತು ಸಮೀಕ್ಷೆ ನಡೆಸಿ ವರದಿಯನ್ನೂ ಪಡೆದಿದೆ. ಈ ಪೈಕಿ ಪುತ್ತೂರು ತಾಲೂಕಿನಲ್ಲಿ 2 ಮಿಂಚು ಪ್ರತಿಬಂಧಕ ಅಳವಡಿಸುವ ಯೋಜನೆ ರೂಪಿಸಲಾಗಿತ್ತು. ಸದ್ಯದಲ್ಲೇ ಇದಕ್ಕೆ ಒಪ್ಪಿಗೆ ದೊರೆಯುವ ಸಾಧ್ಯತೆಯಿದೆ. ಪ್ರಾಣ ಹೋದ ಮನೆಗೆ ಪರಿಹಾರ ನೀಡುವ ಬದಲು ಪ್ರಾಣ ಹೋಗದಂತೆ ತಡೆಯುವ ಕೆಲಸವನ್ನು ಮೊದಲೇ ಮಾಡಬೇಕೆಂಬ ಅರಿವಿದ್ದರೂ,ಇಂಥಹ ಉದಾಸೀನತೆ ಏಕೆ ಎನ್ನುವ ಪ್ರಶ್ನೆ ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.