ನವದೆಹಲಿ: ಲಕ್ಷದ್ವೀಪ ಹಾಗೂ ಜಮ್ಮು ಮತ್ತು ಕಾಶ್ಮೀರದ ಬುಡ್ಗಾಂ ಪ್ರದೇಶ ಟಿಬಿ ಮುಕ್ತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ ತಿಳಿಸಿದ್ದಾರೆ.
ಲಕ್ಷದ್ವೀಪ ಮತ್ತು ಜಮ್ಮು - ಕಾಶ್ಮೀರದ ಒಂದು ಜಿಲ್ಲೆಯನ್ನು ಟಿಬಿ ಮುಕ್ತ ಪ್ರದೇಶ ಎಂದು ಘೋಷಿಸಲಾಗಿದೆ.
ನನ್ನ ಪ್ರಕಾರ ಇದು ಒಳ್ಳೆ ಸಾಧನೆ, 2025ರ ವೇಳೆಗೆ ಭಾರತ ಟಿಬಿ ಮುಕ್ತ ವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ ತಿಳಿಸಿದರು.