ETV Bharat / briefs

ಭಾರತವೇ ಬೆಂಕಿಯುಂಡೆಯಾದ್ರೆ ಕುವೈತ್​ ಕಥೆಯೇನು..? ಸೂರ್ಯನ ತಾಪಕ್ಕೆ 116 ವರ್ಷ ಹಳೆಯ ದಾಖಲೆ ಪತನ - Skymet

ಭಾರತವೇ ಬೆಂಕಿಯುಂಡೆಯಂತಾಗಿದೆ ಎನ್ನುವ ಮಂದಿಗೆ ಈ ಸುದ್ದಿ ಮತ್ತಷ್ಟು ಬೆವರು ಹರಿಸುವಲ್ಲಿ ಸಂಶಯವಿಲ್ಲ. ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ ಕುವೈತ್​​​ನಲ್ಲಿ ಜೂನ್​​ 8ರಂದು ಬರೋಬ್ಬರಿ 63 ಡಿಗ್ರೀ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ..!

ಸೂರ್ಯ
author img

By

Published : Jun 14, 2019, 2:13 PM IST

Updated : Jun 14, 2019, 2:39 PM IST

ಕುವೈತ್​: ಈ ಬಾರಿಯ ಬೇಸಿಗೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ತಾಪಮಾನ ಗಣನೀಯ ಏರಿಕೆ ಕಂಡಿತ್ತು. ಈ ವಿಚಾರದಲ್ಲಿ ಕರ್ನಾಟಕವೂ ಸೇರಿತ್ತು. ಬಿಸಿಲಿನ ಧಗೆಗೆ ಹತ್ತಾರು ಮಂದಿ ಪ್ರಾಣ ಬಿಟ್ಟಿದ್ದಾರೆ. ರಾಜಸ್ಥಾನದ ಚುರುವಿನಲ್ಲಿ ದೇಶದಲ್ಲೇ ಗರಿಷ್ಠ(50.8ಡಿಗ್ರೀ ಸೆಲ್ಸಿಯಸ್) ತಾಪಮಾನ ದಾಖಲಾಗಿತ್ತು.

ಭಾರತವೇ ಬೆಂಕಿಯುಂಡೆಯಂತಾಗಿದೆ ಎನ್ನುವ ಮಂದಿಗೆ ಈ ಸುದ್ದಿ ಮತ್ತಷ್ಟು ಬೆವರು ಹರಿಸುವಲ್ಲಿ ಸಂಶಯವಿಲ್ಲ. ಮುಸ್ಲಿಂ ದೇಶವಾದ ಕುವೈತ್​ ಅಕ್ಷರಶಃ ಬೆಂಕಿಯಲ್ಲಿ ಬೇಯುತ್ತಿದೆ. ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ ಕುವೈತ್​ ​ನಲ್ಲಿ ಜೂನ್​​ 8ರಂದು ಬರೋಬ್ಬರಿ 63 ಡಿಗ್ರೀ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ..!

ಕುವೈತ್​​ನಲ್ಲಿ ದಾಖಲಾಗಿರುವ ಈ ತಾಪಮಾನ ವಿಶ್ವದಲ್ಲೇ ಗರಿಷ್ಠ ಎನ್ನಲಾಗಿದೆ. ಅತ್ತ ಪ್ರಮುಖ ತೈಲ ಉತ್ಪನ್ನ ರಾಷ್ಟ್ರ ಸೌದಿ ಅರೇಬಿಯಾದಲ್ಲೂ ಪರಿಸ್ಥಿತಿ ಹೆಚ್ಚೇನು ಭಿನ್ನವಾಗಿಲ್ಲ. ಸೌದಿ ಅರೇಬಿಯಾದ ಮಂದಿ 55 ಡಿಗ್ರೀ ಸೆಲ್ಸಿಯಸ್​ ಉಷ್ಣಾಂಶದಲ್ಲಿ ಜೀವನ ಸಾಗಿಸುತ್ತಿದ್ದಾರೆ.

116 ವರ್ಷ ಹಳೆಯ ದಾಖಲೆ ಪತನ:

1913ರ ಜುಲೈ 10ರಂದು ಕ್ಯಾಲಿಫೋರ್ನಿಯಾದ ಫರ್ನೇಸ್ ಕ್ರೀಕ್ ರಾಂಚ್​​ನಲ್ಲಿ 56.7 ಡಿಗ್ರೀ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. 116 ವರ್ಷ ಹಳೆಯ ದಾಖಲೆ ಇದೀಗ ಮೂಲೆಗುಂಪಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಭಾರತದಲ್ಲಿ 2016ರ ಮೇ 19ರಂದು ರಾಜಸ್ಥಾನದ ಫಲೋಡಿಯಲ್ಲಿ 51 ಡಿಗ್ರೀ ಸೆಲ್ಸಿಯಸ್ ದಾಖಲಾಗಿರುವುದು ನಮ್ಮ ದೇಶದ ಮಟ್ಟಿಗೆ ಗರಿಷ್ಠ ತಾಪಮಾನ.

Intro:Body:

ಭಾರತವೇ ಬೆಂಕಿಯುಂಡೆಯಾದ್ರೆ ಕುವೈಟ್ ಕಥೆಯೇನು..? ಸೂರ್ಯನ ತಾಪಕ್ಕೆ 116 ವರ್ಷ ಹಳೆಯ ದಾಖಲೆ ಪತನ

ಕುವೈಟ್: ಈ ಬಾರಿಯ ಬೇಸಿಗೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ತಾಪಮಾನ ಗಣನೀಯ ಏರಿಕೆ ಕಂಡಿತ್ತು. ಈ ವಿಚಾರದಲ್ಲಿ ಕರ್ನಾಟಕವೂ ಸೇರಿತ್ತು. ಬಿಸಿಲಿನ ಧಗೆಗೆ ಹತ್ತಾರು ಮಂದಿ ಪ್ರಾಣ ಬಿಟ್ಟಿದ್ದಾರೆ. ರಾಜಸ್ಥಾನದ ಚುರುವಿನಲ್ಲಿ ದೇಶದಲ್ಲೇ ಗರಿಷ್ಠ(50.8ಡಿಗ್ರೀ ಸೆಲ್ಸಿಯಸ್) ತಾಪಮಾನ ದಾಖಲಾಗಿತ್ತು.

ಭಾರತವೇ ಬೆಂಕಿಯುಂಡೆಯಂತಾಗಿದೆ ಎನ್ನುವ ಮಂದಿಗೆ ಈ ಸುದ್ದಿ ಮತ್ತಷ್ಟು ಬೆವರು ಹರಿಸುವಲ್ಲಿ ಸಂಶಯವಿಲ್ಲ. ಮುಸ್ಲಿಂ ದೇಶವಾದ ಕುವೈಟ್ ಅಕ್ಷರಶಃ ಬೆಂಕಿಯಲ್ಲಿ ಬೇಯುತ್ತಿದೆ. ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ ಕುವೈಟ್​ನಲ್ಲಿ ಜೂನ್​​ 8ರಂದು ಬರೋಬ್ಬರಿ 63 ಡಿಗ್ರೀ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ..!

ಕುವೈಟ್​ನಲ್ಲಿ ದಾಖಲಾಗಿರುವ ಈ ತಾಪಮಾನ ವಿಶ್ವದಲ್ಲೇ ಗರಿಷ್ಠ ಎನ್ನಲಾಗಿದೆ. ಅತ್ತ ಪ್ರಮುಖ ತೈಲ ಉತ್ಪನ್ನ ರಾಷ್ಟ್ರ ಸೌದಿ ಅರೇಬಿಯಾದಲ್ಲೂ ಪರಿಸ್ಥಿತಿ ಹೆಚ್ಚೇನು ಭಿನ್ನವಾಗಿಲ್ಲ. ಸೌದಿ ಅರೇಬಿಯಾದ ಮಂದಿ 55 ಡಿಗ್ರೀ ಸೆಲ್ಸಿಯಸ್​ ಉಷ್ಣಾಂಶದಲ್ಲಿ ಜೀವನ ಸಾಗಿಸುತ್ತಿದ್ದಾರೆ.

116 ವರ್ಷ ಹಳೆಯ ದಾಖಲೆ ಪತನ:

1913ರ ಜುಲೈ 10ರಂದು ಕ್ಯಾಲಿಫೋರ್ನಿಯಾದ ಫರ್ನೇಸ್ ಕ್ರೀಕ್ ರಾಂಚ್​​ನಲ್ಲಿ 56.7 ಡಿಗ್ರೀ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. 116 ವರ್ಷ ಹಳೆಯ ದಾಖಲೆ ಇದೀಗ ಮೂಲೆಗುಂಪಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಭಾರತದಲ್ಲಿ 2016ರ ಮೇ 19ರಂದು ರಾಜಸ್ಥಾನದ ಫಲೋಡಿಯಲ್ಲಿ 51 ಡಿಗ್ರೀ ಸೆಲ್ಸಿಯಸ್ ದಾಖಲಾಗಿರುವುದು ನಮ್ಮ ದೇಶದ ಮಟ್ಟಿಗೆ ಗರಿಷ್ಠ ತಾಪಮಾನ.

Conclusion:
Last Updated : Jun 14, 2019, 2:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.