ಕುಷ್ಟಗಿ(ಕೊಪ್ಪಳ) : ಕಳೆದ ಭಾನುವಾರ ರಾತ್ರಿ ಸುರಿದ ಮಳೆಗೆ ತಾಲೂಕಿನ ದೋಟಿಹಾಳ-ಮುದೇನೂರು ರಸ್ತೆಯ ಸೇತುವೆ ಭಾಗಶಃ ಕುಸಿದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಕಲ್ಯಾಣ ಕರ್ನಾಟಕ ಅಭಿವೃಧ್ಧಿ ಯೋಜನೆ ಅಡಿ ತೆಗ್ಗಿಹಾಳ-ಮುದೇನೂರು-ದೋಟಿಹಾಳದ ಒಟ್ಟು 19 ಕಿ.ಮೀ. ರಸ್ತೆಯ ಅಭಿವೃಧ್ಧಿಗೆ ಸರ್ಕಾರ ಪ್ರತಿ ಕಿ.ಮೀ. 1 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿತ್ತು. ಅಲ್ಲದೆ ರಸ್ತೆ ಕಾಮಗಾರಿಯನ್ನ ಮೂರು ಜನ ಗುತ್ತಿಗೆದಾರರು ನಿರ್ವಹಿಸಿ ಅಭಿವೃದ್ಧಿ ಪಡಿಸಿದ ತಿಂಗಳೊಳಗೆ ಸೇತುವೆ ಅವಸ್ಥೆ ತಲುಪಿದೆ.
ಅಲ್ಲದೇ ಈ ರಸ್ತೆ ವ್ಯಾಪ್ತಿಯ ಹಳೆ ಮಿನಿ ಸೇತುವೆಗಳನ್ನು ಅಭಿವೃದ್ಧಿಗೆ ಅಧಿಕಾರಿಗಳು ಮುಂದಾಗಿಲ್ಲ. ಈ ಕುರಿತು ಸರ್ಕಾರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.