ETV Bharat / briefs

ಮೀನು ಕೃಷಿಯಿಂದ ಸವಳು, ಜವಳು ಭೂಮಿ ಅಭಿವೃದ್ಧಿ .. ಸಚಿವ ಪೂಜಾರಿ - Bagalkote latest news

ಮೀನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುತ್ತಿದೆ. ಜಿಲ್ಲೆಯಲ್ಲಿರುವ ಪ್ರತಿ ಮತಕ್ಷೇತ್ರಕ್ಕೂ 200 ಕಿಸಾನ್ ಕಾರ್ಡ್‌ಗಳನ್ನು ತರಿಸಬೇಕು. ಇವುಗಳ ಮೂಲಕ 3 ಲಕ್ಷ ಮೀತಿಗೆ ಒಳಪಟ್ಟು ಶೂನ್ಯ ದರದಲ್ಲಿ ಸಾಲ ಸೌಲಭ್ಯ ಒದಗಿಸುವ ಕೆಲಸವಾಗಬೇಕು.

Meeting
Meeting
author img

By

Published : Jun 17, 2020, 7:10 PM IST

ಬಾಗಲಕೋಟೆ : ಜಿಲ್ಲೆಯಲ್ಲಿರುವ ಸವಳು, ಜವಳು ಭೂಮಿಯನ್ನು ಗುರುತಿಸಿ ಮೀನು ಕೃಷಿ ಕೈಗೊಳ್ಳುವ ಮೂಲಕ ಆ ಭೂಮಿಯನ್ನು ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳುವಂತೆ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಮುಜರಾಯಿ, ಮೀನುಗಾರಿಕೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಸವಳು,ಜವಳು ಭೂಮಿ ಗುರುತಿಸಿ ಅಭಿವೃದ್ಧಿಪಡಿಸುವ ಕುರಿತು ಕ್ರೀಯಾ ಯೋಜನೆ ರೂಪಿಸಿ ಹಂತ ಹಂತವಾಗಿ ಭೂಮಿಯನ್ನು ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಲು ಸಚಿವರು ತಿಳಿಸಿದರು.

ಮೀನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುತ್ತಿದೆ. ಜಿಲ್ಲೆಯಲ್ಲಿರುವ ಪ್ರತಿ ಮತಕ್ಷೇತ್ರಕ್ಕೂ 200 ಕಿಸಾನ್ ಕಾರ್ಡ್‌ಗಳನ್ನು ತರಿಸಬೇಕು. ಇವುಗಳ ಮೂಲಕ 3 ಲಕ್ಷ ಮೀತಿಗೆ ಒಳಪಟ್ಟು ಶೂನ್ಯ ದರದಲ್ಲಿ ಸಾಲ ಸೌಲಭ್ಯ ಒದಗಿಸುವ ಕೆಲಸವಾಗಬೇಕು. ಅಲ್ಲದೇ ಜಿಲ್ಲೆಯ ಮೀನುಗಾರರಿಗೆ ಮೀನುಗಾರಿಕೆ ಕುರಿತು ಒಂದು ತಿಂಗಳ ಅವಧಿಯ ತರಬೇತಿ ನೀಡಬೇಕು ಎಂದರು.

ಮಹಿಳಾ ಮೀನು ಕೃಷಿ ರೈತರಿಗೆ ಶೂನ್ಯ ದರದಲ್ಲಿ 50 ಸಾವಿರ ರೂ.ಗಳ ಸಾಲ ವಿತರಣೆ ನೀಡಲಾಗುತ್ತಿದೆ. ಕರಾವಳಿ ಪ್ರದೇಶದಲ್ಲಿ 62 ಕೋಟಿ ರೂ.ಗಳ 23 ಸಾವಿರ ಮಹಿಳೆಯರಿಗೆ ಸಾಲ ವಿತರಿಸಲಾಗಿದೆ. ಅಲ್ಲದೇ 1 ಸಾವಿರ ಮಹಿಳೆಯರಿಗೆ ದ್ವಿಚಕ್ರ ವಾಹನ, ಶೇ.50ರಷ್ಟು ಸಬ್ಸಿಡಿಯಲ್ಲಿ ಸಾಲ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯ ಮಹಿಳಾ ಮೀನುಗಾರರಿಗೆ ಈ ಸೌಲಭ್ಯ ದೊರೆಯುವಂತಾಗಬೇಕು ಎಂದರು.

ಜಿಲ್ಲೆಯಲ್ಲಿ ಕಿಸಾನ್ ಕಾರ್ಡ್‌ಗಾಗಿ ಬಂದ 400 ಅರ್ಜಿಗಳನ್ನು ಒಂದು ತಿಂಗಳಲ್ಲಿ ವಿಲೇವಾರಿ ಮಾಡಬೇಕು. ಈ ಕಾರ್ಡ್‌ ಇದ್ದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾಲ ಸೌಲಭ್ಯ ದೊರೆಯುತ್ತಿದೆ. ಆದಷ್ಟು ಮೀನುಗಾರರಿಗೆ ಕಾರ್ಡ್ ವಿತರಿಸುವ ಕೆಲಸವಾಗಬೇಕು. ಜಿಲ್ಲೆಯಲ್ಲಿ ಸುಮಾರು 150 ಕೆರೆಗಳಿದ್ದು, ನರೇಗಾದಡಿ ಅವುಗಳನ್ನು ಅಭಿವೃದ್ದಿ ಪಡಿಸುವ ಕೆಲಸವಾಗಬೇಕೆಂದು ಜಿಪಂ ಉಪ ಕಾರ್ಯದರ್ಶಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ 1163 ಸಿ ದರ್ಜೆಯ ಹಾಗೂ 3ಬಿ ದರ್ಜೆಯ ದೇವಸ್ಥಾನಗಳಿದ್ದು, ಸಿ ದರ್ಜೆಯ ಪ್ರತಿ ದೇವಸ್ಥಾನಗಳಿಗೆ ಗ್ರಾಮ ಮಟ್ಟದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಇವರು ದೇವಾಸ್ಥಾನದಲ್ಲಿ ಪೂಜೆ ಮಾಡುತ್ತಿರುವ ಅರ್ಚಕರು ಸೇರಿ ಇತರೆ ಮಾಹಿತಿಯ ವರದಿಯನ್ನು ಒಂದು ವಾರದಲ್ಲಿ ಸಲ್ಲಿಸಲು ತಿಳಿಸಿದರು. ದೇವಸ್ಥಾನಗಳನ್ನು ಮೇಲ್ದರ್ಜೆಗೇರಿಸಲು ಕ್ರಮಕೈಗೊಂಡು ಅವುಗಳ ಆದಾಯವನ್ನು ಸಹ ಹೆಚ್ಚಿಸಲು ಕ್ರಮಕೈಗೊಳ್ಳಲು ಸಚಿವ ಪೂಜಾರಿ ತಿಳಿಸಿದರು.

ಕೊರೊನಾ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಸಾಮೂಹಿಕ ಮದುವೆಯನ್ನು 10 ರಿಂದ 15 ಜೋಡಿಗಳಂತೆ ಬೇರೆ ಬೇರೆ ಸಮಯದಲ್ಲಿ ಮಾಡಲು ತಿಳಿಸಿದರು. ಬಳಿಕ ಸಂಸದ ಪಿ ಸಿ ಗದ್ದಿಗೌಡರ ಮಾತನಾಡಿ ಜಿಲ್ಲೆಯ ಮೀನುಗಾರರಿಗೆ ಸರ್ಕಾರದ ಸೌಲಭ್ಯಗಳ ಮಾಹಿತಿ ಕೊರತೆ ಇದೆ. ಅವರಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ ಹೆಚ್ ಬಾಂಗಿ, ನಿಜ ಶರಣ ಚೌಡಯ್ಯ, ಉತ್ತರ ಕರ್ನಾಟಕ ಒಳನಾಡು ಮೀನುಗಾರಿಕೆ ಅಭಿವೃದ್ದಿ ಕೇಂದ್ರದ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.