ಕೊಲ್ಲಂ(ಕೇರಳ): "ನನ್ನ ಅಮ್ಮ ಮದುವೆಯಾಗುತ್ತಿದ್ದಾಳೆ. ಹೀಗೊಂದು ಬರಹ ಬರೆಯಬೇಕೇ ಎನ್ನುವ ಪ್ರಶ್ನೆ ನನ್ನಲ್ಲಿ ಮೂಡಿತ್ತು. ಮರುಮದುವೆ ತಪ್ಪು ಎನ್ನುವ ಭಾವನೆ ಇನ್ನೂ ಹಲವರಲ್ಲಿದೆ," ಹೀಗೆ ಗೋಕುಲ್ ಶ್ರೀಧರ್ ಎನ್ನುವ ಯುವಕನ ಫೇಸ್ಬುಕ್ ಬರಹ ಆರಂಭವಾಗುತ್ತದೆ.
ಅಮ್ಮನ ಮರುಮದುವೆಯ ಖುಷಿಯನ್ನು ಕೇರಳದ ಕೊಲ್ಲಂ ನಿವಾಸಿ ಎಂಜಿನಿಯರ್ ಶ್ರೀಧರ್ ಗೋಕುಲ್ ತಮ್ಮ ಫೇಸ್ಬುಕ್ನಲ್ಲಿ ಎರಡು ದಿನಗಳ ಹಿಂದೆ ಪೋಸ್ಟ್ ಮಾಡಿದ್ದರು. ಸದ್ಯ ಇದೇ ಪೋಸ್ಟ್ ವೈರಲ್ ಆಗಿದೆ.
ಗೋಕುಲ್ 10 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಆತನ ತಾಯಿ, ತಂದೆಯ ಜೊತೆಗಿನ ಸಂಬಂಧಕ್ಕೆ ಕೊನೆ ಹಾಡಿ ಮಗನೊಂದಿಗೆ ಬದುಕು ಆರಂಭಿಸಿದ್ದರು. ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಗೋಕುಲ್ ತಾಯಿ ಹೊಸ ಜೀವನ ಆರಂಭಿಸುವ ಸಲುವಾಗಿ ಉದ್ಯೋಗವನ್ನೇ ತೊರೆದಿದ್ದರು.
- " class="align-text-top noRightClick twitterSection" data="">
"ಅಮ್ಮ ನನಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಮೊದಲ ಮದುವೆ ನಿಜಕ್ಕೂ ಅದೊಂದು ದುರಂತ. ಆ ಸಂಬಂಧದಲ್ಲಿ ಆಕೆ ಸಾಕಷ್ಟು ನೋವು ಅನುಭವಿಸಿದ್ದಾಳೆ. ಒಂದು ದಿನ ಆಕೆ ತಂದೆಯಿಂದ ಹೊಡೆತ ತಿಂದು ತಲೆಯಲ್ಲಿ ರಕ್ತ ಸುರಿಯುತ್ತಿತ್ತು. ಆದರೂ ಆಕೆ ಆ ನೋವನ್ನೆಲ್ಲಾ ಸಹಿಸಿ ಜೀವನ ಸಾಗಿಸುತ್ತಿದ್ದಳು. ನಾನು ಬದುಕುತ್ತಿರುವುದು ನಿನಗಾಗಿ ಎಂದು ನನ್ನ ಬಳಿ ಒಮ್ಮೆ ಹೇಳಿದ್ದಳು."
"ಆಕೆ ಮೊದಲ ಮದುವೆ ಎಲ್ಲ ಸಂಬಂಧವನ್ನು ಕಡಿದುಕೊಂಡು ಹೊರಟಾಗ ಅಮ್ಮನಿಗೆ ಮರುಮದುವೆ ಮಾಡಿಸುತ್ತೇನೆ ಎನ್ನುವ ಪ್ರತಿಜ್ಞೆ ಮಾಡಿದ್ದೆ. ನನ್ನ ಯಶಸ್ಸಿಗಾಗಿ ಆಕೆಯ ಅಮೂಲ್ಯ ಸಮಯವನ್ನು ನನಗಾಗಿ ಮೀಸಲಿಟ್ಟಿದ್ದಳು" ಎನ್ನುವ ಮೂಲಕ ಗೋಕುಲ್ ಶ್ರೀಧರ್ ಪೋಸ್ಟ್ ಕೊನೆಯಾಗುತ್ತದೆ.
ಅಮ್ಮನಿಗೆ ಮರುಮದುವೆ ಮಾಡಿಕೊಳ್ಳುವಂತೆ ಆಗಾಗ ನಾನು ಹೇಳುತ್ತಲೇ ಇದ್ದೆ. ಆದರೆ ನನ್ನ ಮಾತನ್ನು ಆಕೆ ತಳ್ಳಿಹಾಕುತ್ತಲೇ ಬಂದಿದ್ದಳು. ಆಕೆಯ ಸಹೋದ್ಯೋಗಿಯಿಂದ ಹೊಸ ಸಂಬಂಧ ಕೂಡಿ ಬಂದಿದ್ದು, ಅದಕ್ಕೆ ಮದುವೆಯ ಮುದ್ರೆ ಬಿದ್ದಿದೆ ಎಂದು ಪುತ್ರ ಗೋಕುಲ್ ಹೇಳಿದ್ದಾರೆ.