ಮುಂಬೈ: ಭಾರತ ತಂಡದ ಪರ ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಕೇದಾರ್ ಜಾಧವ್ಗೆ ಬಾಲಿವುಡ್ನಲ್ಲಿ ಆಭಿನಯಿಸುವ ಅವಕಾಶ ಪಡೆದುಕೊಂಡಿದ್ದಾರಂತೆ.
ಮೊದಲ ಅಭ್ಯಾಸ ಪಂದ್ಯದ ನಂತರ ರೋಹಿತ್ ಶರ್ಮಾ, ಜಡೇಜಾ ಹಾಗೂ ಕೇದಾರ್ ಒಟ್ಟಿಗೆ ಪ್ರಯಾಣ ಮಾಡುವಾಗ ಉಪನಾಯಕ ರೋಹಿತ್ ಲೈವ್ ವಿಡಿಯೋ ಮಾಡುತ್ತಾ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಜಡೇಜಾರಿಗೆ ಮೊದಲು ಶುಭ ಕೋರಿದರು. ನಂತರ ಜೊತೆಯಲ್ಲಿದ್ದ ಕೇದಾರ ಜಾಧವ್ರನ್ನು ಬಾಲಿವುಡ್ನ ರೇಸ್ -4 ನ ಸಿನಿಮಾದಿಂದ ಆಫರ್ ಬಂದಿರುವ ಬಗ್ಗೆ ಪ್ರಶ್ನಿಸಿದರು.
ಈ ಪ್ರಶ್ನೆಗೆ ಜಾಧವ್ ಹೌದು ಎಂಬ ಉತ್ತರ ನೀಡಿದರು. ಆದರೆ, ಇನ್ನೂ ಸಿನಿಮಾ ಮಾತುಕತೆ ಹಂತದಲ್ಲಿದೆ ಎಂದರು. ಸಲ್ಮಾನ್ಖಾನ್ ಅಭಿನಯಿಸಿದ ರೇಸ್ -3 ನಂತರದ ಭಾಗವಾದ ರೇಸ್ 4ನಲ್ಲಿ ನಲ್ಲಿ ಜಾಧವ್ ಅಭಿನಯಿಸುವ ಸಾಧ್ಯತೆಯಿದೆ.
ವಿಶ್ವಕಪ್ನಲ್ಲಿ ಅವಕಾಶಗಿಟ್ಟಿಸಿಕೊಂಡಿರುವ ಜಾಧವ್ಗೆ ಸಿನಿಮಾ ಆಫರ್ ಸಿಕ್ಕಿರುವುದರಿಂದ ಒಂದೇ ವರ್ಷದಲ್ಲಿ ಎರಡು ಕಡೆ ಅದೃಷ್ಟ ಹುಡುಕಿಕೊಂಡು ಮನೆಬಾಗಿಲಿಗೆ ಬಂದಾಂತಾಗಿದೆ.
- View this post on Instagram
Bus drives are fun! PS - listen carefully! @kedarjadhavofficial @royalnavghan
">