ಬೆಂಗಳೂರು: ಸಂಜೆ 6 ಗಂಟೆಗೆ ಮೈತ್ರಿ ಪಕ್ಷಗಳ ಶಾಸಕರ ಸಭೆ ಸಚಿವ ಕೃಷ್ಣಭೈರೇಗೌಡರ ಸರ್ಕಾರಿ ನಿವಾಸದಲ್ಲಿ ನಡೆದಿದ್ದು. ಕಾಂಗ್ರೆಸ್ ನ ಐವರು, ಜೆಡಿಎಸ್ ನ ಇಬ್ಬರು ಶಾಸಕರು ಭಾಗಿಯಾಗಿದ್ದಾರೆ. ಎರಡೂ ಪಕ್ಷದ ಶಾಸಕರಿಗೆ ಸಭೆಗೆ ಆಹ್ವಾನ ನೀಡಲಾಗಿತ್ತು. ಇಂದು ರಾತ್ರಿಯೊಳಗೆ ಅಭ್ಯರ್ಥಿ ಆಯ್ಕೆ ಫೈನಲ್ ಆಗಲಿದೆ.
ಸಂಜೆ ಒಮ್ಮತದ ತೀರ್ಮಾನ
ತುಮಕೂರು ಸಂಸದ ಮುದ್ದಹನುಮೇಗೌಡರಿಗೆ ಮೊದಲ ಪ್ರಾಶಸ್ತ್ಯ ನೀಡುತ್ತೇವೆ. ಬೆಳಗ್ಗೆ ನಡೆಸಿದ್ದ ಸಭೆಯಲ್ಲೂ ಒಮ್ಮತದ ತೀರ್ಮಾನ ಆಗಿದೆ. ಆದರೆ ಒಪ್ಪದಿದ್ದರೆ ಬಿ.ಎಲ್. ಶಂಕರ್ ಸ್ಪರ್ಧಿಯಾಗಲಿದ್ದಾರೆ. ಅಚ್ಚರಿಯ ರೀತಿಯಲ್ಲಿ ಕೃಷ್ಣಭೈರೇಗೌಡರ ಮನವೊಲಿಸುವ ಸಾಧ್ಯತೆ ಕೂಡ ಇದೆ. ಸಂಜೆಯ ಸಭೆಯ ಬಳಿಕ ಅಭ್ಯರ್ಥಿ ಹೆಸರು ಅಂತಿಮವಾಗಲಿದ್ದು, ಅದೇ ಹೆಸರನ್ನ ಹೈಕಮಾಂಡ್ ಗೆ ಕಳಿಸಲಿರುವ ನಾಯಕರು ಅಂತಿಮ ಗೊಳಿಸುವಂತೆ ಮನವಿ ಮಾಡಲಿದ್ದಾರೆ.
ಬೆಳಗ್ಗೆ ಸಭೆ
ಕೃಷ್ಣ ಬೈರೇಗೌಡ ನಿವಾಸದಲ್ಲಿ ಇಂದು ಬೆಳಗ್ಗೆ ನಡೆದ ಸಭೆಯ ನಂತರ ಮಾತನಾಡಿದ ಅವರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಸಭೆ ಆಗಿದೆ. ಸಭೆಯಲ್ಲಿ ಕಾಂಗ್ರೆಸ್ ಶಾಸಕರು ಭಾಗಹಿಸಿದ್ದು. ದೇವೇಗೌಡರ ಉತ್ತರದಿಂದ ಸ್ಪರ್ಧೆ ಮಾಡಿದರೆ ಅಭ್ಯಂತರವಿಲ್ಲ. ಜೆಡಿಎಸ್ ನ ಇಬ್ಬರು ಶಾಸಕರು ಈ ಸಭೆಗೆ ಬಾಗವಹಿಸಬೇಕಿತ್ತು. ದೇವೇಗೌಡರ ನಾಮಪತ್ರ ಸಲ್ಲಿಕೆಗೆ ತುಮಕೂರಿಗೆ ಹೋಗಿದ್ದಾರೆ. ಅವರು ಬಂದ ನಂತರ ಎರಡೂ ಪಕ್ಷದ ನಾಯಕರು ಒಟ್ಟಿಗೆ ಸಭೆ ಮಾಡಿ ತೀರ್ಮಾನ ಮಾಡುತ್ತೇವೆ. ಇಂದು ರಾತ್ರಿ ಒಳಗೆ ಅಭ್ಯರ್ಥಿ ಯಾರೆಂದು ಅಂತಿಮ ಮಾಡುತ್ತೇವೆ.
ಕಾಂಗ್ರೆಸ್ ನಲ್ಲೂ ಕೂಡ ಮುದ್ದ ಹನುಮೇಗೌಡ , ಬಿಎಲ್ ಶಂಕರ್ , ಪರಿಷತ್ತ್ ಸದಸ್ಯ ರಾದ ಗೋವಿಂದ್ ರಾಜು, ನಾರಾಯಣ ಸ್ವಾಮಿ , ಜಿಲ್ಲಾಧ್ಯಕ್ಷ ರಾಜ್ ಕುಮಾರ್ , ಇಷ್ಟು ಜನ ಆಕಾಂಕ್ಷಿಗಳಿದ್ದಾರೆ. ನನ್ನ ಸ್ಪರ್ದೆ ಬಗ್ಗೆ ಕೆಲವರು ಮಾತಾಡಿದ್ದಾರೆ ಆದರೆ ಅದು ಹೈ ಕಮಾಂಡ್ ಅಥವಾ ಪಾರ್ಟಿ ಗೆ ಬಿಟ್ಟ ವಿಚಾರ. ಪಕ್ಷದ ತೀರ್ಮಾನಕ್ಕೆ ನಾವೇಲ್ಲಾ ಬದ್ದರಾಗಿರುತ್ತೇವೆ ಎಂದು ವಿವರಿಸಿದರು.