ETV Bharat / briefs

ಐತಿಹಾಸಿಕ ಕಾಟೆ ದರ್ವಾಜಾ ಕೋಟೆಗೆ ಬೇಕಿದೆ ಸೂಕ್ತ ಕಾಯಕಲ್ಪ..! - fort

ನಗರದ ಹೃದಯ ಭಾಗದಲ್ಲಿ ಇರುವ ಕಾಟೆ ದರ್ವಾಜಾ ತನ್ನದೇ ಆದ ವೈಶಿಷ್ಟ್ಯ ಪಡೆದಿದೆ.ಇದು ಮೊಗಲ್ ವಂಶಸ್ಥರಿಂದ ನಿರ್ಮಾಣ ಮಾಡಲಾಗಿದೆ ಎನ್ನುವ ಮಾತುಗಳೂ ಇವೆ.

ಕಾಟೆ ದರ್ವಾಜಾ ಕೋಟೆ
author img

By

Published : Apr 28, 2019, 2:46 AM IST

ರಾಯಚೂರು: ಐತಿಹಾಸಿಕ ಹಿನ್ನೆಲೆ ಹೊಂದಿರುವ ಜಿಲ್ಲೆಯ ಕಾಟೆ ದರ್ವಾಜಾ ಕೋಟೆ ಪ್ರಸ್ತುತ ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.

ಶತ್ರು ಪಡೆಗಳು ಸುಲಭವಾಗಿ ಬಾರದಿರಲು ಈ ಕೋಟೆಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. ರಾಯಚೂರಿನಲ್ಲಿರುವ ಕಾಟೆ ದರ್ವಾಜಾ ಕೋಟೆಯನ್ನು ವಾರಂಗಲ್​​ನ ಕಾಕತೀಯ ವಂಶಸ್ಥರು ನಿರ್ಮಿಸಿದ್ದಾರೆ ಎನ್ನಲಾಗಿದೆ.

ನಗರದ ಹೃದಯ ಭಾಗದಲ್ಲಿ ಇರುವ ಕಾಟೆ ದರ್ವಾಜಾ ತನ್ನದೇ ಆದ ವೈಶಿಷ್ಟ್ಯ ಪಡೆದಿದೆ.ಇದು ಮೊಗಲ್ ವಂಶಸ್ಥರಿಂದ ನಿರ್ಮಾಣ ಮಾಡಲಾಗಿದೆ ಎನ್ನುವ ಮಾತುಗಳೂ ಇವೆ. ಕಾಟೆ ದರ್ವಾಜಾಕ್ಕೆ ಎರಡು ದ್ವಾರವಿದ್ದು ಬೃಹತ್ ಕಲ್ಲುಗಳಿಂದ ಮಾಡಲಾಗಿದೆ. ಕಾಟೆ ದರ್ವಾಜಾ ಇದು ಉರ್ದು ಶಬ್ದವಾಗಿದೆ ಇದನ್ನು ಕನ್ನಡದಲ್ಲಿ ಮುಳ್ಳುಗಸೆ ಅಥವಾ ಮುಳ್ಳಿನ ಬಾಗಿಲು ಎಂಬ ಅರ್ಥ ನೀಡುತ್ತದೆ.

ಹಿಂದೆ ಕೋಟೆ ದ್ವಾರಗಳನ್ನು ಶತ್ರುಗಳಿಂದ ರಕ್ಷಿಸಲು ದ್ವಾರಗಳಿಗೆ ಭರ್ಚಿಗಳನ್ನು ಸಿಕ್ಕಿಸಿ ಸಿದ್ದಪಡಿಸಲಾಗುತ್ತಿತ್ತು. ಇದರ ಜೊತೆಗೆ ಶತ್ರುಗಳು ದ್ವಾರಗಳನ್ನು ಸುಲಭವಾಗಿ ಹೊಡೆದು ಸುಲಭವಾಗಿ ಪ್ರವೇಶಿಸದಿರಲಿ ಎಂಬ ರಕ್ಷಣೆಯ ಭಾಗವಾಗಿ ಈ ಬಾಗಿಲು (ದರ್ವಾಜಗಳ) ನಿರ್ಮಾಣದ ಉದ್ದೇಶವಾಗಿತ್ತು.

ಈ ಕಾಟೆ ದರ್ವಾಜೆಯ ವಿಶಿಷ್ಟ ನೋಡುವುದಾದ್ರೆ ಇದು ಒಂದು ಗುಂಬಜ್ ಹಾಗೂ ಹಲವಾರು ಕಮಾನುಗಳನ್ನು ಹಾಗೂ ಸಣ್ಣ ಸಣ್ಣ ಕಿಟಕಿಗಳು ಇವೆ. ಹಲವಾರು ವರ್ಷಗಳ ಇತಿಹಾಸ ಹೊಂದಿರುವ ಈ ಕಾಟೆ ದರ್ವಾಜ ಈಗ ಅವನತಿಯತ್ತ ಸಾಗುತ್ತಿದೆ.

ಇಲ್ಲಿ‌ ಈಗ ಸುತ್ತಲೂ ಧೂಳು ಹಿಡಿದಿದೆ ಅಲ್ಲದೇ ಮೂಲ ರೂಪ ಕಳೆದುಕೊಳ್ಳುವ ಜೊತೆಗೆ ಇಲ್ಲಿ ಸ್ಥಳೀಯರು ಕಟ್ಟಿಗೆ,ಟೇಬಲ್ ಇತರೆ ವಸ್ತುಗಳಿಂದ ಪರಿಸರ ಸಂಪೂರ್ಣ ಹಾಳಾಗಿದೆ. ಈ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಪ್ರಾಚ್ಯವಸ್ತು ವಸ್ತು ಇಲಾಖೆ ಗಮನ ಹರಿಸಿ ರಕ್ಷಣೆ ಮಾಡುವ ಜೊತೆಗೆ ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಮಾಡಬೇಕಿದೆ.

ರಾಯಚೂರು ಜಿಲ್ಲೆ ಸಂಪತ್ಭರಿತ ನಾಡಾಗಿದೆ.ಅನ್ನ,ಚಿನ್ನದ ಜೊತೆ ಶಕ್ತಿ ಕೇಂದ್ರವೂ ಆಗಿದೆ.ಆರ್ಟಿಪಿಎಸ್ ಮೂಲಕ ಅರ್ಧ ರಾಜ್ಯಕ್ಕೆ ವಿದ್ಯುತ್ ನೀಡುತ್ತಿದೆ ರಾಯಚೂರು.
ಇಷ್ಟು ಮಾತ್ರವಲ್ಲದೇ ಐತಿಹಾಸಿಕ ವಾಗಿಯೂ ಪ್ರಸಿದ್ದಿ ಪಡೆದಿದೆ.ಇಲ್ಲಿ ರಾಯಚೂರು ಕೋಟೆ‌ಪ್ರಸಿದ್ದವಾಗಿದೆ.
ಕೋಟೆಯ ನಿರ್ಮಾಣ ಶತೃಗಳು ಸುಲಭವಾಗಿ ಬಾರದಿರಲು ಈ ಕೋಟೆ ನಿರ್ಮಾಣದ ಉದ್ದೇಶವಾಗಿರುತ್ತಿತ್ತು.
ರಾಯಚೂರು ಕೋಟೆ ವಾರಂಗಲ್ ನ ಕಾಕತೀಯ ವಂಶಸ್ಥರು ನಿರ್ಮುಸಿದ್ದಾರೆ ಎಂದು ಇತಿಹಾಸದಿಂದ ತಿಳಿಯುತ್ತದೆ.
ಅಲ್ಲದೇ ಕೋಟೆಯ ಭಾಗವಾಗಿ ಅನೇಕ ದ್ವಾರಗಳು ಕಾಣಬಹುದಾಗಿದೆ.
ಅದನ್ನು ನವರಂಗ್ ದರ್ವಾಜಾ,ಕಾಟೆ ದರ್ವಾಜಾ ಸೇರಿದಂತೆ ಇತರೆ ಐತಿಹಾಸಿಕ ಸ್ಥಳಗಳು.
ಈಗ ನಗರದ ಹೃದಯ ಭಾಗದಲ್ಲಿ ಇರುವ ಕಾಟೆ ದರ್ವಾಜಾ ತನ್ನದೇ ಆದ ವೈಶಿಷ್ಟ್ಯ ಪಡೆದಿದೆ.ಇದು ಮೊಗಲ್ ವಂಶಸ್ಥರಿಂದ ನಿರ್ಮಾಣ ಮಾಡಲಾಗಿದೆ ಎಂತಲೂ ಹೇಳಲಾಗುತ್ತದೆ.
ಕಾಟೆ ದರ್ವಾಜಾಕ್ಕೆ ಎರಡು ದ್ವಾರ ವಿದ್ದು ಬೃಹತ್ ಕಲ್ಲುಗಳಿಂದ ಮಾಡಲಾಗಿದೆ.
ಕಾಟೆ ದರ್ವಾಜಾ ಇದು ಉರ್ದು ಶಬ್ದವಾಗಿದೆ ಇದನ್ನು ಕನ್ನಡದಲ್ಲಿ ಅನುವಾದ ಮಾಡಿ ನೀಡುವುದಾದ್ರೆ ಮುಳ್ಳುಗಸೆ ಅಥವಾ ಮುಳ್ಳಿನ ಬಾಗಿಲು ಎಂಬ ಅರ್ಥ ನೀಡುತ್ತದೆ.
ಹಿಂದೆ ಕೋಟೆ ದ್ವಾರಗಳನ್ನು ಶತ್ರುಗಳಿಂದ ರಕ್ಷಿಸಲು ದ್ವಾರಗಳಿಗೆ ಭರ್ಚಿಗಳನ್ನು ಸಿಕ್ಕಿಸಿ ಸಿದ್ದಪಡಿಸಲಾಗುತ್ತಿತ್ತು.
ಇದರ ಜೊತೆಗೆ ಶತ್ರುಗಳು ದ್ವಾರಗಳನ್ನು ಸುಲಭವಾಗಿ ಹೊಡೆದು ಸುಲಭವಾಗಿ ಪ್ರವೇಶಿಸದಿರಲಿ ಎಂಬ ರಕ್ಷಣೆಯ ಭಾಗವಾಗಿ ಈ ಬಾಗಿಲು (ದರ್ವಾಜಗಳ ) ನಿರ್ಮಾಣದ ಉದ್ದೇಶವಾಗಿತ್ತು.
ಈ ಕಾಟೆ ದರ್ವಾಜೆಯ ವಿಶಿಷ್ಟ ನೋಡುವುದಾದ್ರೆ ಇದಕ್ಕೆ ಬೃಹತ್ ದ್ವಾರವಾಗಿದ್ದು ಇದು ಒಂದು ಗುಂಬಜ್ ಹಾಗೂ ಹಲವಾರು ಕಮಾನುಗಳನ್ನು ಹಾಗೂ ಸಣ್ಣ ಸಣ್ಣ ಕಿಟಕಿಹಳು ಒಳಗೊಂಡಿದ್ದು ಚಿಕ್ಕ ಚಿಕ್ಕ ಬಾಗಿಲು ಒಳಗೊಂಡಿದೆ.
ಹಲವಾರು ವರ್ಷಗಳ ಇತಿಹಾಸ ಹೊಂದಿರುವ ಈ ಕಾಟೆ ದರ್ವಾಜ ಈಗ ಅವನತಿಯತ್ತ ಸಾಗುತ್ತಿದೆ.
ಹೌದು, ಇಲ್ಲಿ‌ ಈಗ ಸುತ್ತಲೂ ಧೂಳು ಹಿಡಿದಿದೆ ಅಲ್ಲದೇ ಮೂಲ ರೂಪ ಕಳೆದುಕೊಳ್ಳುವ ಜೊತೆಗೆ ಇಲ್ಲಿ ಸ್ಥಳೀಯರು ಕಟ್ಟಿಗೆ,ಟೇಬಲ್ ಇತರೆ ವಸ್ತುಗಳು ಇಡುವ ಜೊತೆಗೆ ಅಸ್ವಚ್ಛತೆಗೆ ಕಾರಣವಾಗುತ್ತಿದೆ.
ಈ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಪ್ರಾಚ್ಯವಸ್ತು ವಸ್ತು ಇಲಾಖೆ ಗಮನ ಹರಿಸಿ ರಕ್ಷಣೆ ಮಾಡುವ ಜೊತೆಗೆ ಮುಂದಿನ ಪೀಳಿಗೆಗೆ ಉಳಿಸಿವ ಜವಾಬ್ದಾರಿ ನಿರ್ವಹಿಸಬೇಕಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.