ETV Bharat / briefs

ಸಂಪುಟದಲ್ಲಿ ದಲಿತ,ಅಲ್ಪಸಂಖ್ಯಾತರಿಗೆ ಅವಕಾಶ ನೀಡಿ: ಎಚ್​.ವಿಶ್ವನಾಥ್ ಆಗ್ರಹ - undefined

ಜಾತ್ಯಾತೀತ ಜೆಡಿಎಸ್ ಪಕ್ಷ​ ದಲಿತ,ಅಲ್ಪಸಂಖ್ಯಾತರಿಗೆ ಮೀಸಲಾತಿಗೆ ನ್ಯಾಯ ಒದಗಿಸಿ ಮಂತ್ರಿಸ್ಥಾನ ನೀಡಬೇಕು ಎಂದು ಹುಣಸೂರು ಶಾಸಕ ಎಚ್.ವಿಶ್ವನಾಥ ಸಮ್ಮಿಶ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ
author img

By

Published : Jun 12, 2019, 6:18 PM IST

ಕೊಡಗು: ಸಮಾನ ಮನಸ್ಕರು ಒಟ್ಟಿಗೆ ಸೇರಿ ರಾಜ್ಯದ ರಾಜಕಾರಣವನ್ನು ಶುದ್ಧೀಕರಿಸಬೇಕಾಗಿದೆ ಎಂದು ಜೆಡಿಎಸ್ ಹಿರಿಯ ಮುಖಂಡ ಹಾಗು ಹುಣಸೂರು ಶಾಸಕ ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟರು. ಇದೇ ವೇಳ ಅವರು, ಸಂಪುಟದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ನೀಡುವಂತೆ ಆಗ್ರಹಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿರುವ ಜೆಡಿಎಸ್​ ಮುಖಂಡ ಎಚ್.ವಿಶ್ವನಾಥ್

ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಅಲ್ಪಸಂಖ್ಯಾತರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಲಾಗಿದೆ. ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಮುಮ್ತಾಜ್ ಅಲಿಖಾನ್‌ಗೆ ವಿಧಾನ ಪರಿಷತ್ ಸ್ಥಾನ ಕೊಟ್ಟು ಸಚಿವರನ್ನಾಗಿ ಮಾಡಿದ್ದರು. ಎನ್​ಡಿಎ ಸರ್ಕಾರ ಅಲ್ಪಸಂಖ್ಯಾತರಿಗೆ ಕೇಂದ್ರದಲ್ಲಿ ಮಿನಿಸ್ಟರ್‌ಶಿಪ್‌ ನೀಡಿದ್ದಾರೆ. ನಮ್ಮ ಹೆಸರೇ ಜಾತ್ಯಾತೀತವಾಗಿದ್ದು, ಸಂಪುಟದಲ್ಲಿ ಅಲ್ಪಸಂಖ್ಯಾತ ಹಾಗೂ ದಲಿತರಿಗೆ ಅವಕಾಶ ಕಲ್ಪಿಸಿ ಮೀಸಲಾತಿ ನ್ಯಾಯ ಒದಗಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ವಿಚಾರ:

ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ನನ್ನ ರಾಜೀನಾಮೆ ಅಂಗೀಕರಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಹೇಳಿದ್ದೇನೆ. ಅವರು ರಾಜೀನಾಮೆ ಹಿಂಪಡೆಯುವಂತೆ ಮನವೊಲಿಸುತ್ತಿದ್ದಾರೆ‌. ಕ್ಷೇತ್ರದ ಶಾಸಕನಾಗಿ ಮತ್ತು ಸಮ್ಮಿಶ್ರದ ಸರ್ಕಾರದ ಯೋಜನೆಗಳನ್ನು ಜನತೆಗೆ ತಿಳಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.

ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಲವು ಆಕಾಂಕ್ಷಿಗಳಿದ್ದು ಮಧು ಬಂಗಾರಪ್ಪ, ವೈ.ಎಸ್.ವಿ.ದತ್ತಾ ಹೆಸರು ಕೇಳಿ ಬರುತ್ತಿದೆ. ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯವಿದೆ ಎಂದು ಹೇಳಿದರು.

ಇದೇ ವೇಳೆ ಹಿರಿಯ ಸಾಹಿತಿ ದಿ. ಗಿರೀಶ್ ಕಾರ್ನಾಡ್‌ ಅವರ ಸಾಹಿತ್ಯಿಕ ಸಾಧನೆಗಳನ್ನೂ ಹೆಚ್‌. ವಿಶ್ವನಾಥ್ ಕೊಂಡಾಡಿದ್ರು.

Intro:ರಾಜಕೀಯ ಶುದ್ಧೀಕರಿಸಬೇಕಿದೆ; ಹೆಚ್.ವಿಶ್ವನಾಥ್

ಕೊಡಗು: ಸಮಾನ ಮನಸ್ಕರು ಒಟ್ಟಿಗೆ ಸೇರಿ ರಾಜ್ಯದ ರಾಜ ಕಾರಣವನ್ನು ಶುದ್ದೀಕರಿಸಬೇಕಾಗಿದೆ ಎಂದು ಜೆಡಿಎಸ್ ರಾಜ್ಯ ಅಧ್ಯಕ್ಷ ಹೆಚ್.ವಿಶ್ವನಾಥ್ ಅಭಿಪ್ರಾಯಪಟ್ಟರು. 
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ ಹಲವು ಪಕ್ಷಗಳಿವೆ. ರಾಜಕೀಯ ನಾಯಕರಿದ್ದಾರೆ. ಆದರೆ ಎಲ್ಲೂ ಒಂದೆಡೆ 
ಇಂದಿ‌ನ ರಾಜಕಾರಣ ಮಲಿನ ಆಗುತ್ತಿದ್ದು, ಈ ಹಿನ್ನಲೆಯಲ್ಲಿ ರಾಜಕಾರಣವನ್ನು ಶುದ್ಧೀಕರಿಸುವ ಅನಿವಾರ್ಯ ಎದುರಾಗಿದೆ ಎಂದರು. 
ವರ್ಷದ ಹಿಂದೆಯೇ ಆಂದ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಅಲ್ಪಸಂಖ್ಯಾತರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಈ ಹಿಂದೆ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಅವರು  ಮುಖ್ಯಮಂತ್ರಿ ಆಗಿದ್ದಾಗ ಗೆಲ್ಲದೇ ಇದ್ದಂತಹ ಮಮ್ತಾಜ್ ಅಲಿಖಾನ್ ಎಂಬುವರಿಗೆ ವಿಧಾನಪರಿಷತ್ ಸ್ಥಾನಕೊಟ್ಟು ಮಂತ್ರಿ ಸ್ಥಾನಕೊಟ್ಟಿದ್ದರು.ಹಾಗೆಯೇ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರದದಲ್ಲೂ ಅಲ್ಪಸಂಖ್ಯಾತರಿಗೆ ಕೇಂದ್ರ ಮಂತ್ರಿಸ್ಥಾನ ನೀಡಿದ್ದಾರೆ.ಇಷ್ಟೆಲ್ಲಾ ನಿದರ್ಶನಗಳು ಕಣ್ಮುಂದೆ ಇರುವಾಗ ನಾವು ಜೆಡಿಎಸ್. ನಮ್ಮ ಹೆಸರೇ ಜಾತ್ಯಾತೀತವಾಗಿದ್ದು ಆದ್ದರಿಂದ ಸಂಪುಟದಲ್ಲಿ ಅಲ್ಪಸಂಖ್ಯಾತ ಹಾಗೂ ದಲಿತರಿಗೆ ಅವಕಾಶ ಕಲ್ಪಿಸಿ ಮೀಸಲಾತಿಗೆ ನ್ಯಾಯ ಒದಗಿಸಬೇಕು ಎಂದು ಪರೋಕ್ಷವಾಗಿ ಕುಟುಕಿದರು. 
ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾತ್ರ ರಾಜೀನಾಮೆ ಕೊಟ್ಟಿದ್ದೇನೆಯೇ ಹೊರತು ಪ್ರಾಥಮಿಕ ಸದಸ್ಯತ್ವಕ್ಕೆ ಅಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ.ನನ್ನ ರಾಜೀನಾಮೆ ಅಂಗೀಕರಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಹೇಳಿದ್ದೇನೆ.ಅವರು ರಾಜೀನಾಮೆ ಹಿಂಪಡೆವಂತೆ ಮನ ವೊಲಿಸುತ್ತಿದ್ದಾರೆ‌. ಕ್ಷೇತ್ರದ ಶಾಸಕನಾಗಿ ಮತ್ತು ಸಮ್ಮಿಶ್ರದ ಸರ್ಕಾರದ ಯೋಜನೆಗಳನ್ನು ಜನತೆಗೆ ತಿಳಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು. 
ಪಕ್ಷದ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಹಲವು ಆಕಾಂಕ್ಷಿಗಳಿದ್ದಾರೆ.  ಮದು ಬಂಗಾರಪ್ಪ, ವೈ.ಎಸ್.ವಿ.ದತ್ತಾ ಅವರ ಹೆಸರು ಕೇಳಿ ಬರುತ್ತಿದ್ದು, ಅವರಿಗೆ ತೆರವಾಗಿರುವ ಸ್ಥಾನವನ್ನು ಸಮರ್ಥವಾಗಿ ನಿಭಾಹಿಸುವ ಸಾಮರ್ಥ್ಯವಿದೆ ಎಂದು ಸಮರ್ಥಿಸಿಕೊಂಡರು. 
ಇತ್ತೀಚೆಗೆ ನಿಧನರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ನಾಡಿನ ಎತ್ತರದ ಮೇರು ಸಾಂಸ್ಕೃತಿಕ ಪ್ರತಿಭೆ. ಪಾಶ್ಚಾತ್ಯ ರಾಷ್ಟ್ರಗಳ ಸಾಹಿತ್ಯದ ಪರಾಮರ್ಶಕ.ಭಾರತದ ಸಾಹಿತ್ಯ ಲೋಕಕ್ಕೆ ಕೀರ್ತಿ ತಂದವರು.ಅವರ ಯಯಾತಿ ನಾಟಕ ಹಲವು ಮಜಲುಗಳನ್ನು ಹುಟ್ಟುಹಾಕುತ್ತದೆ. ಬದುಕಿನ ಬಗ್ಗೆ ಸಾಕಷ್ಟು ನಾಟಕಗಳು ಹಾಗೂ ಸಾಹಿತ್ಯವನ್ನು ಬರೆದಿದ್ದಾರೆ ಎಂದರು.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು. Body:0Conclusion:0

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.