ಡಬ್ಲಿನ್: ಇಂದಲ್ಲ ನಾಳೆ ದಾಖಲೆಗಳು ಬ್ರೇಕ್ ಆಗಲೇಬೇಕು. ಕ್ರಿಕೆಟ್ ಲೋಕದಲ್ಲಿ ಈ ಮಾತು ಸರ್ವೇ ಸಾಮಾನ್ಯ. ವಿಂಡೀಸ್ನ ಆರಂಭಿಕ ಆಟಗಾರರಿಬ್ಬರು ಇಂದು ಹೊಸದೊಂದು ದಾಖಲೆ ಬರೆದಿದ್ದಾರೆ.
ಐರ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ನಡುವಿನ ತ್ರಿಕೋನ ಸರಣಿಯ ಆರಂಭಿಕ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ವಿಂಡೀಸ್ನ ಆರಂಭಿಕ ಬ್ಯಾಟ್ಸ್ಮನ್ಗಳಾದ ಜಾನ್ ಕ್ಯಾಂಪ್ಬೆಲ್(179) ಹಾಗೂ ಶೈ ಹೋಪ್(170) ಮೊದಲ ವಿಕೆಟ್ಗೆ 365 ರನ್ ಬಾರಿಸಿ ದಾಖಲೆ ಬರೆದಿದ್ದಾರೆ.
ಕಳೆದ ವರ್ಷ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನದ ಇಮಾಮ್ ಉಲ್ ಹಕ್ ಹಾಗೂ ಫಕರ್ ಜಮಾನ್ 304 ರನ್ಗಳ ದಾಖಲೆ ಇಂದು ಪತನವಾಗಿದೆ.
-
🚨 WORLD RECORD ALERT 🚨
— ICC (@ICC) May 5, 2019 " class="align-text-top noRightClick twitterSection" data="
Shai Hope and John Campbell have added the highest-ever ODI opening partnership in history, and both have recorded their maiden ODI 1️⃣5️⃣0️⃣s !
What an effort!#IREvWI LIVE ➡ https://t.co/WU4333bGEo pic.twitter.com/3HKaBCwMcZ
">🚨 WORLD RECORD ALERT 🚨
— ICC (@ICC) May 5, 2019
Shai Hope and John Campbell have added the highest-ever ODI opening partnership in history, and both have recorded their maiden ODI 1️⃣5️⃣0️⃣s !
What an effort!#IREvWI LIVE ➡ https://t.co/WU4333bGEo pic.twitter.com/3HKaBCwMcZ🚨 WORLD RECORD ALERT 🚨
— ICC (@ICC) May 5, 2019
Shai Hope and John Campbell have added the highest-ever ODI opening partnership in history, and both have recorded their maiden ODI 1️⃣5️⃣0️⃣s !
What an effort!#IREvWI LIVE ➡ https://t.co/WU4333bGEo pic.twitter.com/3HKaBCwMcZ
ನೂರೈವತ್ತರ ಗಡಿ ದಾಟಿದ ಆರಂಭಿಕರು:
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಆರಂಭಿಕರಿಬ್ಬರೂ ನೂರೈವತ್ತರ ಗಡಿ ದಾಟಿದ ಮೊದಲ ದೃಷ್ಟಾಂತವಿದು. ಜೊತೆಗೆ ವಿಂಡೀಸ್ ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿಗೆ ಓಪನರ್ಸ್ಗಳು 150ಕ್ಕೂ ಅಧಿಕ ರನ್ ಗಳಿಸಿದ ಸಾಧನೆ ಮಾಡಿದ್ದಾರೆ.
ದಾಖಲೆಯ ಜೊತೆಯಾಟದಿಂದ ವಿಂಡೀಸ್ ನಿಗದಿತ 50 ಓವರ್ನಲ್ಲಿ ಮೂರು ವಿಕೆಟ್ ನಷ್ಟಕ್ಕೆ 381 ರನ್ ಬಾರಿಸಿತ್ತು. ಬೃಹತ್ ಮೊತ್ತ ಬೆನ್ನತ್ತಿದ ಐರ್ಲೆಂಡ್ 34.4 ಓವರ್ನಲ್ಲಿ 185 ರನ್ನಿಗೆ ಸರ್ವಪತನವಾಯಿತು. ಈ ಮೂಲಕ ವಿಂಡೀಸ್ 196 ರನ್ಗಳ ಅರ್ಹ ಜಯ ಸಾಧಿಸಿತು.