ನವದೆಹಲಿ : ಜೀಪ್ ಭಾರತದ ವಾಹನ ಪ್ರಿಯರ ನೆಚ್ಚಿನ ಹಾಗೂ ನಂಬಿಕಸ್ಥ ವಾಹನ ಎಂದು 2019ರ ಬ್ರ್ಯಾಂಡ್ ಟ್ರಸ್ಟ್ ರಿಪೋರ್ಟ್ ಹೇಳಿದೆ.
ಜೀಪ್ ಕಂಪಾಸ್, ಜೀಪ್ ರ‍್ಯಾಂಗ್ಲರ್ ಹಾಗೂ ಜೀಪ್ ಗ್ರ್ಯಾಂಡ್ ಚೆರೋಕಿ ಮೂರು ವಿಧದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವುಗಳಲ್ಲಿ ಜೀಪ್ ಕಂಪಾಸ್ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಎಸ್ಯುವಿ ವಾಹನ.
ನಂತರದ ಸ್ಥಾನ ಮಾರುತಿ ಸುಜುಕಿ ಪಡೆದಿದ್ದು, ಆಲ್ಟೋ, ವ್ಯಾಗನರ್, ಸ್ವಿಫ್ಟ್ ಡಿಜೈರ್, ವಿತಾರ ಬ್ರೀಜಾ, ಬಲೇನೊ ಹಾಗೂ ಸಿಯಾಜ್ ಉತ್ತಮ ಬೇಡಿಕೆಯಲ್ಲಿದೆ. ಹುಂಡೈ 3ನೇ ಸ್ಥಾನ, ಫೋರ್ಡ್ ನಾಲ್ಕು ಹಾಗೂ ಹೋಂಡಾ 5ನೇ ಸ್ಥಾನದಲ್ಲಿದೆ. ನಂತರದಲ್ಲಿ ಟಾಟಾ ಮೋಟಾರ್ಸ್, ಟೊಯೊಟಾ, ಮಹೀಂದ್ರಾ, ನಿಸ್ಸಾನ್ ಹಾಗೂ ಹಿಂದೂಸ್ತಾನ್ ಮೋಟಾರ್ಸ್ ಇವೆ.