ಮುಂಬೈ: ಟೀಂ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಅಬ್ಬರಿಸುತ್ತಿದ್ದಾರೆ. ಇದರ ಮಧ್ಯೆ ತನ್ನ ತಾಯಿ ನೆನಪು ಮಾಡಿಕೊಂಡು ವಿಶೇಷ ಸಂದೇಶವೊಂದನ್ನ ರವಾನೆ ಮಾಡಿದ್ದಾರೆ.
-
Mom you have worked really hard all your life, you've done it for us. From a teacher to a principal, now you are retiring. You've had such a successful career and we're proud of you. Now it's time for us to take care of you. Put your feet up and relax mom. We love you. 🤗🤗 pic.twitter.com/yOjaV2yktB
— Jasprit bumrah (@Jaspritbumrah93) April 29, 2019 " class="align-text-top noRightClick twitterSection" data="
">Mom you have worked really hard all your life, you've done it for us. From a teacher to a principal, now you are retiring. You've had such a successful career and we're proud of you. Now it's time for us to take care of you. Put your feet up and relax mom. We love you. 🤗🤗 pic.twitter.com/yOjaV2yktB
— Jasprit bumrah (@Jaspritbumrah93) April 29, 2019Mom you have worked really hard all your life, you've done it for us. From a teacher to a principal, now you are retiring. You've had such a successful career and we're proud of you. Now it's time for us to take care of you. Put your feet up and relax mom. We love you. 🤗🤗 pic.twitter.com/yOjaV2yktB
— Jasprit bumrah (@Jaspritbumrah93) April 29, 2019
ಸದ್ಯ ತಮ್ಮ ಶಿಕ್ಷಣ ವೃತ್ತಿನಿಂದ ಜಸ್ಪ್ರೀತ್ ಬುಮ್ರಾ ತಾಯಿ ನಿವೃತ್ತಿ ಹೊಂದಿದ್ದಾರೆ. ಇದೇ ಸಂದರ್ಭದಲ್ಲಿ ಮಗ ಬುಮ್ರಾ ಟ್ವಿಟ್ಟರ್ನಲ್ಲಿ ಭಾವನಾತ್ಮಕ ಸಂದೇಶ ರವಾನೆ ಮಾಡಿದ್ದಾರೆ. ಕೇವಲ 7 ವರ್ಷದವನಾಗಿದ್ದಾಗ ಬುಮ್ರಾ ತನ್ನ ತಂದೆಯನ್ನ ಕಳೆದುಕೊಂಡಿದ್ದು, ಆತನ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಬೆಳೆಸಿದ್ದು ತಾಯಿ ದಲ್ಜೀತ್ ಕೌರ್. ಅಹಮದಾಬಾದ್ನ ನಿರ್ಮನ್ ಹೈಸ್ಕೂಲ್ನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಇಂದು ನಿವೃತ್ತಿ ಹೊಂದಿದ್ದಾರೆ.
ಅಮ್ಮಾ ನೀನು ನನಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದೀಯಾ. ಶಿಕ್ಷಕಿಯಿಂದ ಹಿಡಿದು ಪ್ರಿನ್ಸಿಪಾಲ್ ಆಗಿ ಇದೀಗ ನಿವೃತ್ತಿ ಪಡೆದುಕೊಳ್ಳುತ್ತಿರುವಿರಿ. ಅದು ನನಗೆ ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ನಿಮ್ಮನ್ನ ಚೆನ್ನಾಗಿ ನೋಡಿಕೊಳ್ಳುವ ಕರ್ತವ್ಯ ನನ್ನದು. ವೀ ಲವ್ಯೂ ಅಂತಾ ಬರೆದುಕೊಂಡಿದ್ದಾರೆ. ಮೊದಲ ವಿಶ್ವಕಪ್ ಆಡಲು ಜಸ್ಪ್ರೀತ್ ಬುಮ್ರಾ ಆಯ್ಕೆಯಾಗಿದ್ದು, ಲಂಡನ್ಗೆ ಪ್ರಯಾಣ ಬೆಳೆಸಲಿದ್ದಾರೆ.