ETV Bharat / briefs

ರಾಯ್​,ಬಟ್ಲರ್​ ಅಬ್ಬರಕ್ಕೆ ಬಾಂಗ್ಲಾ ಬೌಲರ್ಸ್​ ತತ್ತರ​... 387ರನ್​ಗಳ ಬೃಹತ್​ ಟಾರ್ಗೆಟ್​ ನೀಡಿದ ಇಂಗ್ಲೆಂಡ್​ - ಕ್ರಿಕೆಟ್​

ಬಾಂಗ್ಲಾ ಬೌಲರ್​ಗಳನ್ನು ಚೆಂಡಾಡಿದ ಜಾಸನ್​ ರಾಯ್​ (153), ಜೋಸ್​ ಬಟ್ಲರ್​(64) ರನ್​ಗಳಿಸುವ ಮೂಲಕ 386 ರನ್​ಗಳ ಬೃಹತ್​ ಮೊತ್ತ ಕಲೆ ಹಾಕಲು ನೆರವಾದರು.

jason
author img

By

Published : Jun 8, 2019, 6:55 PM IST

Updated : Jun 8, 2019, 7:12 PM IST

ಕಾರ್ಡಿಫ್​: ಇಂಗ್ಲೆಂಡ್​ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಜಾಸನ್​ ರಾಯ್(153) ಸ್ಪೋಟಕ ಶತಕದ ನೆರವಿನಿಂದ ಇಂಗ್ಲೆಂಡ್​ 37 ರನ್​ಗಳ ಬಬೃಹತ್​ ಮೊತ್ತ ಕಲೆ ಹಾಕಿದೆ.

ಟಾಸ್​ ಸೋತು ಬ್ಯಾಟಿಂಗ್​ ಇಳಿದ ಆಂಗ್ಲರು ಆರಂಭ ಓವರ್​ಗಳಲ್ಲಿ ಸ್ಪಿನ್​ಗೆ ಆಡಲು ತಿಣುಕಾಡಿದರೂ 5 ಓವರ್​ಗಳ ನಂತರ ತಮ್ಮ ಸ್ಪೋಟಕ ಆಟ ಆರಂಭಿಸಿದರು. ಇದರ ಫಲ ಆರಂಬಿಕರಿಂದ ಮೊದಲ ವಿಕೆಟ್​ಗೆ 128 ರನ್​ಗಳ ಜೊತೆಯಾಟ ಬಂದಿತು.

  • He finally gets to raise his bat for his maiden World Cup hundred and England's third this edition. 👏 pic.twitter.com/XXq2Wp8n3p

    — Cricket World Cup (@cricketworldcup) June 8, 2019 " class="align-text-top noRightClick twitterSection" data=" ">

ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಬಾಂಗ್ಲಾ ನಾಯಕ ಮುಷ್ರಫ್​ ಮೊರ್ತಾಜಾ 51 ರನ್​ಗಳಿಸಿದ್ದ ಬೈರ್ಸ್ಟೋವ್​ ವಿಕೆಟ್​ ಪಡೆಯುವ ಮೂಲಕ ​ಬೇರ್ಪಡಿಸಿದರು. ನಂತರ ಬಂದ ರೂಟ್​ (21) ರಾಯ್​ ಜೊತೆಗೂಡಿ 77 ರನ್​ಗಳ ಜೊತೆಯಾಟ ನೀಡಿ ಸೈಫುದ್ದೀನ್​ ಓವರ್​ನಲ್ಲಿ ಬೌಲ್ಡ್​ ಆದರು. ನಂತರದ 2 ಓವರ್​ಗಳ ಅಂತರದಲ್ಲಿ ರಾಯ್​(153) ಕೂಡ ಮೆಹಿದಿ ಹಸನ್​​ ಬೌಲಿಂಗ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್​ ಸಿಡಿಸಿ 4ನೇ ಎಸೆತದಲ್ಲಿ ಕ್ಯಾಚ್​ ಔಟ್​ ಆದರು.

ನಂತರ ಬಂದ ಮಾರ್ಗನ್​ ಜಾಸ್​ ಬಟ್ಲರ್​ ಜೊತೆಗೂಡಿ 95 ರನ್​ಗಳ ಜೊತೆಯಾಟ ನೀಡಿದರು. ಬಟ್ಲರ್​ 44 ಎಸೆತಗಳಲ್ಲಿ 4 ಸಿಕ್ಸರ್​ ಹಾಗೂ 2 ಬೌಂಡರಿ ಸಹಿತ 64 ಹಾಗೂ ಮಾರ್ಗನ್​ 35 ಎಸೆತಗಳಲ್ಲಿ ಒಂದು ಬೌಂಡರಿ 2 ಸಿಕ್ಸರ್​ 35 ರನ್​ಗಳಿಸಿ ಔಟಾದರು. ಕೊನೆಯಲ್ಲಿ ಅಬ್ಬರಿಸಿದ ಪ್ಲಂಕೇಟ್​ 9 ಎಸೆತಗಳಲ್ಲಿ 27 ಹಾಗೂ ವೋಕ್ಸ್​ 8 ಎಸೆಗಳಲ್ಲಿ 18 ರನ್​ಗಳಿಸಿ 386 ರನ್​ಗಳ ಬೃಹತ್​ ಮೊತ್ತಕ್ಕೇರುವಂತೆ ಮಾಡಿದರು.

ಬಾಂಗ್ಲಾಪರ ಮೆಹಿದಿ ಹಸನ್​ 2, ಮುಸ್ತಫಿಜುರ್​ ರಹಮಾನ್​ 1, ಮೊಹಮ್ಮದ್​ ಸೈಫುದ್ದೀನ್​, ಮುಷ್ರಫೆ ಮೋರ್ಟಾಜ 1 ವಿಕೆಟ್​ ಪಡೆದರು. ಬಾಂಗ್ಲದೇಶದ ಎಲ್ಲಾ ಬೌಲರ್​ಗಳು 6 ಕ್ಕಿಂತ ಹೆಚ್ಚಿನ ಎಕಾನಮಿಯಲ್ಲಿ ರನ್​ಬಿಟ್ಟುಕೊಟ್ಟು ದುಬಾರಿಯಾದರು.

Intro:Body:Conclusion:
Last Updated : Jun 8, 2019, 7:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.