ಟೆಲ್ ಅವಿವ್: ಚಂದ್ರನ ಮೇಲೆ ತನ್ನ ನೌಕೆ ಇಳಿಸಬೇಕೆನ್ನುವ ಇಸ್ರೇಲ್ನ ಕನಸು ವಿಫಲವಾಗಿದ್ದು, ಸ್ವಲ್ಪದರಲ್ಲೇ ಎಡವಿದೆ.
ಚಂದ್ರನ ಸಮೀಪಕ್ಕೆ ತಲುಪಿದ್ದ ಬೆರೆಶೀಟ್ ನೌಕೆಯು ಎಂಜಿನ್ ವಿಫಲವಾದ ಕಾರಣ ನಿಧಾನವಾಗಿ ಕೆಳಗಿಳಿಯದೆ ಚಂದ್ರನ ಮೇಲ್ಮೈ ಮೇಲೆ ದೊಪ್ಪನೆ ಬಿದ್ದಿದೆ. ಪರಿಣಾಮವಾಗಿ ನೌಕೆ ಹಾಗೂ ಅದಕ್ಕೆ ಅಳವಡಿಸಿದ್ದ ಉಪಗ್ರಹಗಳು ನುಚ್ಚು ನೂರಾಗಿದೆ.
ಮಹತ್ವಾಕಾಂಕ್ಷೆಯ ಬೆರೆಶೀಟ್ ಚಂದ್ರಯಾನವನ್ನು ಪೂರೈಸುವ ಉದ್ದೇಶದಿಂದ ಇಸ್ರೇಲ್ ಬಾಹ್ಯಾಕಾಶ ಸಂಸ್ಥೆಯು ಹಗಲು ರಾತ್ರಿ ಶ್ರಮಿಸಿತ್ತು. ಭಾರತ ಕೈಗೊಂಡಿದ್ದ ಮಂಗಳಯಾನವು ಇದಕ್ಕೆ ಸ್ಫೂರ್ತಿ ಎಂದೂ ಹೇಳಿಕೊಂಡಿತ್ತು.
ಇಸ್ರೇಲ್ ಒಂದು ವೇಳೆ ಈ ಯೋಜನೆ ಪೂರ್ಣಗೊಳಿಸಿದ್ದರೆ ಚಂದ್ರಯಾನ ಪೂರೈಸಿದ ಅಮೆರಿಕ, ಚೀನಾ, ರಷ್ಯಾ ನಂತರದ ಸ್ಥಾನವನ್ನು ಪಡೆದುಕೊಳ್ಳುತ್ತಿತ್ತು.