ಹೈದರಾಬಾದ್: ಈ ಬಾರಿಯ ಐಪಿಎಲ್ನಲ್ಲಿ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀರಸ ಪ್ರದರ್ಶನ ತೋರಿ ಅಭಿಮಾನಿಗಳಿಗೆ ಬೇಸರ ತರಿಸಿದೆ. ಆದರೆ ಆರ್ಸಿಬಿ ಫ್ಯಾನ್ಸ್ ಖುಷಿಪಡುವ ವಿಚಾರ ಇಲ್ಲೊಂದಿದೆ.
2019ರ ಐಪಿಎಲ್ನಲ್ಲಿ ಅತೀ ಟ್ವೀಟ್ಗೊಳಗಾದ ಅಗ್ರ ಮೂವರಲ್ಲಿ ವಿರಾಟ್ ಹೆಸರೂ ಇದೆ. ತಂಡಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಲ್ಕನೇ ಸ್ಥಾನ ಪಡೆದಿದೆ. ಮಾರ್ಚ್ 1ರಿಂದ 13 ಮೇ ತನಕ ಅವಧಿಯಲ್ಲಿ ನಡೆದ ಟ್ವೀಟ್ಗಳನ್ನು ಇಲ್ಲಿ ಲೆಕ್ಕಾಚಾರಕ್ಕೆ ಪರಿಗಣಿಸಲಾಗಿದೆ.
ಟ್ವಿಟರ್ ಅಂಕಿ-ಅಂಶದಲ್ಲಿ ಕೆಲ ಅಚ್ಚರಿಗಳಿದ್ದು, ಟೂರ್ನಿಯಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಆಂಡ್ರೆ ರಸೆಲ್ಗಿಂತ ಹೆಚ್ಚಿನ ಟ್ವೀಟ್ ಹರ್ಭಜನ್ ಸಿಂಗ್ ಹೆಸರಿನಲ್ಲಿದೆ.
ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಆಟಗಾರರ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹರ್ಭಜನ್ ಸಿಂಗ್. ಆಂಡ್ರೆ ರಸೆಲ್, ಹಾರ್ದಿಕ್ ಪಾಂಡ್ಯ, ಕ್ರಿಸ್ ಗೇಲ್ ಕ್ರಮವಾಗಿ ನಂತರದ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.
ತಂಡಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ಅಗ್ರಸ್ಥಾನ ಪಡೆದಿದ್ದರೆ, ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ರೈಸರ್ಸ್ ಹೈದರಾಬಾದ್ ನಂತರದ ಸ್ಥಾನ ಪಡೆದಿವೆ.
ಅತೀ ಹೆಚ್ಚು ಟ್ವೀಟ್:
ಹೈದರಾಬಾದ್ನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಉಪಾಂತ್ಯ ಪಂದ್ಯ ಈ ಆವೃತ್ತಿಯಲ್ಲಿ ಅತೀ ಹೆಚ್ಚು ಟ್ವೀಟ್ಗೊಳಗಾದ ಪಂದ್ಯ. ಆದರೆ ಫೈನಲ್ ಗೆದ್ದ ಮುಂಬೈ ತಂಡ ನಂತರದ ಟ್ವಿಟರ್ ಮಾತುಕತೆಯಲ್ಲಿ ಚೆನ್ನೈಯನ್ನು ಮೀರಿಸಿದೆ. ಮುಂಬೈ ಶೇ.63ರಷ್ಟು ಉಲ್ಲೇಖಗಳನ್ನು ಮಾಡಿದ್ದರೆ ಚೆನ್ನೈ ಶೇ. 37ರಷ್ಟು ಉಲ್ಲೇಖಗಳನ್ನು ಮಾಡಿದೆ.
ಗೋಲ್ಡನ್ ಟ್ವೀಟ್:
ಮೇ 8ರಂದು ಹಾರ್ದಿಕ್ ಪಾಂಡ್ಯ ಧೋನಿ ಜೊತೆಗಿರುವ ತಮ್ಮ ಫೋಟೋವನ್ನು ಶೇರ್ ಮಾಡಿ ನನ್ನ ಸ್ಫೂರ್ತಿ, ಲೆಜೆಂಡ್, ಆತ್ಮೀಯ ಮಿತ್ರ ಎಂದು ಅಡಿಬರಹ ನೀಡಿದ್ದರು. ಈ ಟ್ವೀಟ್ ಸುಮಾರು 16 ಸಾವಿರ ರಿಟ್ವೀಟ್ ಕಂಡಿದೆ. ಸದ್ಯ ಪಾಂಡ್ಯರ ಈ ಟ್ವಿಟರ್ ಪೋಸ್ಟ್ ಅನ್ನು ಈ ಆವೃತ್ತಿಯ ಐಪಿಎಲ್ನ ಗೋಲ್ಡನ್ ಟ್ವೀಟ್ ಎಂದು ಪರಿಗಣಿಸಲಾಗಿದೆ.
ಹೆಚ್ಚಿನ ಓದಿಗಾಗಿ:
ಧೋನಿಯೇ ನನ್ನ ಸ್ಫೂರ್ತಿ, ನನ್ನ ಲೆಜೆಂಡ್ ಎಂದ ಹಾರ್ದಿಕ್ ಪಾಂಡ್ಯ
ಒಟ್ಟಾರೆ ಟ್ವೀಟ್ನಲ್ಲೂ ದಾಖಲೆ:
ಐಪಿಎಲ್ ಕುರಿತಂತೆ ಮಾರ್ಚ್ 1ರಿಂದ 13 ಮೇ ತನಕ ಅವಧಿಯಲ್ಲಿ ಎರಡು ಕೋಟಿ 70 ಲಕ್ಷ ಮಂದಿ ಟ್ವೀಟ್ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಟ್ವೀಟ್ ಪ್ರಮಾಣ ಶೇ.44ರಷ್ಟು ಹೆಚ್ಚಳವಾಗಿದೆ. ಐಪಿಎಲ್ನ ಇಷ್ಟೊಂದು ಆವೃತ್ತಿಯ ಬಳಿಕವೂ ಇದರ ಮೇಲಿನ ಕ್ರೇಜ್ ಕಿಂಚಿತ್ತೂ ಕಮ್ಮಿಯಾಗಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ.
-
Thanks to cricket fans across the world, #IPL2019 set a new record on Twitter with a smashing 27 million Tweets, representing a 44% growth from last year. pic.twitter.com/9LegMouXrQ
— Twitter India (@TwitterIndia) May 14, 2019 " class="align-text-top noRightClick twitterSection" data="
">Thanks to cricket fans across the world, #IPL2019 set a new record on Twitter with a smashing 27 million Tweets, representing a 44% growth from last year. pic.twitter.com/9LegMouXrQ
— Twitter India (@TwitterIndia) May 14, 2019Thanks to cricket fans across the world, #IPL2019 set a new record on Twitter with a smashing 27 million Tweets, representing a 44% growth from last year. pic.twitter.com/9LegMouXrQ
— Twitter India (@TwitterIndia) May 14, 2019