ETV Bharat / briefs

ಕೊಹ್ಲಿ,ಧೋನಿ,ರೋಹಿತ್​ಗಿಲ್ಲ ಸೆಹ್ವಾಗ್​ ಟೀಮ್​ನಲ್ಲಿ ಸ್ಥಾನ.... RCB ಆಟಗಾರರಿಗೂ ನೋ ಚಾನ್ಸ್! - ಮುಂಬೈ

ತಮ್ಮ ತಂಡಗಳನ್ನು ಫೈನಲ್​ವರೆಗೆ ತಂದಿರುವ ರೋಹಿತ್​ ಧೋನಿಯನ್ನು ಬಿಟ್ಟು ತಮ್ಮ ತಂಡದಲ್ಲಿ 2 ವರ್ಷದಿಂದ ನಾಯಕ ಸ್ಥಾನದಿಂದ ಹೊರಗಿರುವ ಡೇವಿಡ್​ ವಾರ್ನರ್​ರನ್ನು ನಾಯಕನನ್ನಾಗಿ ಮಾಡಿದ್ದಲ್ಲದೆ ಆರ್​ಸಿಬಿ ತಂಡದ ಒಬ್ಬ ಆಟಗಾರರನ್ನು ತಂಡ ಉತ್ತಮ ಇಲೆವೆನ್​ನಲ್ಲಿ ಆಯ್ಕೆ ಮಾಡದೆ ಸೆಹ್ವಾಗ್​ ಅಭಿಮಾನಿಗಳ ಅವಕೃಪೆಗೆ ತುತ್ತಾಗಿದ್ದಾರೆ.

veeru
author img

By

Published : May 12, 2019, 12:55 PM IST

ಮುಂಬೈ: ಭಾರತ ಕಂಡಂತಹ ಸ್ಫೋಟಕ ಬ್ಯಾಟ್ಸ್​ಮನ್​ ವಿರೇಂದ್ರ ಸೆಹ್ವಾಗ್​ ತಮ್ಮ ಅತ್ಯುತ್ತಮ ಐಪಿಎಲ್​ ತಂಡದಲ್ಲಿ ಭಾರತ ತಂಡದ ಪ್ರಮುಖರಾದ ರೋಹಿತ್​, ಕೊಹ್ಲಿ ಹಾಗೂ ಧೋನಿಗೆ ಸ್ಥಾನ ನೀಡದೆ 11ರ ಬಳಗವನ್ನು ಪ್ರಕಟಿಸಿದ್ದಾರೆ.

12ನೇ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರಿರುವ ಆಧಾರದ ಮೇಲೆ 11 ಸಧಸ್ಯರ ತಂಡವನ್ನು ಆಯ್ಕೆ ಮಾಡಿರುವ ವೀರೂ ಬೆಸ್ಟ್​ ಫಿನಿಶರ್​ ಧೋನಿ, ಆರ್​ಸಿಬಿ ನಾಯಕ ಕೊಹ್ಲಿ, ಮುಂಬೈ ನಾಯಕ ರೋಹಿತ್​ ಶರ್ಮಾರನ್ನು ತಮ್ಮ ತಂಡದಿಂದ ಕೈಬಿಟ್ಟಿದ್ದಾರೆ.

ಓಪನರ್​ ಸ್ಥಾನಕ್ಕೆ ಧವನ್​ ಹಾಗೂ ಬ್ಯಾರ್ಸ್ಟೋವ್​, 3 ನೇಕ್ರಮಾಂಕಕ್ಕೆ ಕೆಎಲ್​ ರಾಹುಲ್​,4 ನೇಸ್ಥಾನಕ್ಕೆ ಡೇವಿಡ್​ ವಾರ್ನರ್​ ಮಧ್ಯಮಕ್ರಮಾಂಕದಲ್ಲಿ ಪಂತ್​, ಹಾರ್ದಿಕ್​ ಹಾಗೂ ರಸೆಲ್​ರನ್ನು ಆಯ್ಕೆ ಮಾಡಿದ್ದಾರೆ. ಬೌಲರ್​ಗಳ ವಿಭಾಗದಲ್ಲಿ ಜಸ್ಪ್ರೀತ್​ ಬುಮ್ರಾ,ರಬಡಾ ಹಾಗೂ ಸ್ಪಿನ್ನರ್​ ವಿಭಾಗದಲ್ಲಿ ಶ್ರೇಯಸ್​ ಗೋಪಾಲ್​,ರಾಹುಲ್ ಚಹಾರ್​ರನ್ನು ಆಯ್ಕೆ ಮಾಡಿದ್ದಾರೆ. 12ನೇ ಆಟಗಾರನಾಗಿ ಇಮ್ರಾನ್​ ತಾಹೀರ್​ರನ್ನು ಆಯ್ಕೆ ಮಾಡಿದ್ದಾರೆ.

ಈ ತಂಡಕ್ಕೆ ನಾಯಕನನ್ನಾಗಿ ಡೇವಿಡ್​ ವಾರ್ನರ್​ರನ್ನು ಆಯ್ಕೆ ಮಾಡಿದ್ದಾರೆ. ಜೊತೆಗೆ ವಾರ್ನರ್​ರನ್ನು ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಎಂದು ಪರಿಗಣಿಸಿ, ಯಶಸ್ವಿ ನಾಯಕರಾದ ರೋಹಿತ್​ ಹಾಗೂ ಧೋನಿಯನ್ನು ತಂಡದಿಂದ ಕೈಬಿಟ್ಟಿದ್ದಾರೆ. ಇದರ ಜೊತೆಗೆ ರನ್​ಮಿಷನ್​ ಕೊಹ್ಲಿ,ಮಿ.360 ಎಬಿಡಿಯನ್ನು ಸಹಾ ವೀರೂ ತಮ್ಮ ತಂಡದಲ್ಲಿ ಪರಿಗಣಿಸಿಲ್ಲ.

ರೋಹಿತ್​ ಹಾಗೂ ಕೊಹ್ಲಿ ಈ ಸೀಸನ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡದಿರುವುದರಿಂದ ಅವರನ್ನು ತಮ್ಮ ತಂಡದಿಂದ ಕೈಬಿಟ್ಟಿರುವುದ ಉತ್ತಮ ನಿರ್ಧಾರವಾಗಿರಬಹುದು, ಆದರೆ ಸಿಎಸ್​ಕೆ ತಂಡದ ಬ್ಯಾಟ್ಸ್​ಮನ್ಸ್​ಗಳು ರನ್​ಗಳಿಸಲು ಪರದಾಡಿದರು ಹಲವು ಪಂದ್ಯಗಳಲ್ಲಿ ಏಕಾಂಗಿಯಾಗಿ ಹೋರಾಡಿ ಫೈನಲ್​ಗೆ ತಂದಿರುವ ಧೋನಿಯನ್ನು ಹಾಗೂ ಆರ್​ಸಿಬಿ ಒಬ್ಬ ಆಟಗಾರನನ್ನು ಆಯ್ಕೆ ಮಾಡಿರುವುದನ್ನು ಕ್ರಿಕೆಟ್​ ಅಭಿಮಾನಿಗಳು ಕಂಡಿಸಿದ್ದಾರೆ.

ಸೆಹ್ವಾಗ್​ ಇಲೆವೆನ್​:

ಶಿಖರ್ ಧವನ್, ಜಾನಿ ಬೈರ್‌ಸ್ಟೋವ್, ಕೆಎಲ್ ರಾಹುಲ್, ಡೇವಿಡ್ ವಾರ್ನರ್(ನಾಯಕ), ರಿಷಬ್ ಪಂತ್, ಆಂಡ್ರೆ ರಸೆಲ್, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ಕಗಿಸೋ ರಬಾಡ, ರಾಹುಲ್ ಚಹಾರ್ ಮತ್ತು ಜಸ್ಪ್ರೀತ್ ಬುಮ್ರಾ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.