ಮೊಹಾಲಿ: ಸನ್ರೈಸರ್ಸ್ ವಿರುದ್ಧ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಸಂಘಟಿತ ಹೋರಾಟ ನಡೆಸಿದ ಕಿಂಗ್ಸ್ ಇಲೆವೆನ್ ಪಂಜಾಬ್ 5 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪಂಜಾಬ್ ಸನ್ರೈಸರ್ಸ್ ಬ್ಯಾಟ್ಸ್ಮನ್ಗಳನ್ನು ತಮ್ಮ ಅದ್ಭುತ ಬೌಲಿಂಗ್ ದಾಳಿಯಿಂದ ಕೇವಲ 150 ರನ್ಗಳಿಗೆ ಕಟ್ಟಿಹಾಕಿತು.
ಮೊದಲಾರ್ಧದಲ್ಲಿ ರನ್ಗಳಿಸಲು ಪರದಾಡಿದ ಸನ್ರೈಸರ್ಸ್ 10.4 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಕೇವಲ 56 ರನ್ಗಳಿಸಿತ್ತು. ಈ ಪಂದ್ಯದಲ್ಲೂ ರನ್ಗಳಿಸಲು ವಿಫಲವಾದ ಬೈರ್ಸ್ಟೋವ್ ಕೇವಲ1 ರನ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ವಿಜಯ್ 27 ಎಸೆತಗಳಲ್ಲಿ 26 ರನ್ಗಳಿಸಿ ಔಟಾದರು.
-
What a finish this by the @lionsdenkxip. @klrahul11 remains unbeaten on 71*. They win by 6 wickets.#KXIPvSRH pic.twitter.com/nd5u9UYiW5
— IndianPremierLeague (@IPL) April 8, 2019 " class="align-text-top noRightClick twitterSection" data="
">What a finish this by the @lionsdenkxip. @klrahul11 remains unbeaten on 71*. They win by 6 wickets.#KXIPvSRH pic.twitter.com/nd5u9UYiW5
— IndianPremierLeague (@IPL) April 8, 2019What a finish this by the @lionsdenkxip. @klrahul11 remains unbeaten on 71*. They win by 6 wickets.#KXIPvSRH pic.twitter.com/nd5u9UYiW5
— IndianPremierLeague (@IPL) April 8, 2019
ಮೊಹಮ್ಮದ್ ನಬಿ 12 ಹಾಗೂ ಮನೀಷ್ ಪಾಂಡೆ 19 ರನ್ಗೆ ಸೀಮಿತವಾದರು. ಆದರೆ ಏಕಾಂಗಿ ಹೋರಾಟ್ ನಡೆಸಿದ ವಾರ್ನರ್ 62 ಎಸೆತಗಳಲ್ಲಿ 70 ರನ್ಗಳಿಸಿ ಔಟಾಗದೆ ಉಳಿದರು. ಕೊನೆಯ ಮೂರು ಎಸೆತ ಎದುರಿಸಿದ ದೀಪಕ್ ಹೂಡ 1 ಸಿಕ್ಸರ್ ಹಾಗೂ 2 ಬೌಂಡರಿ ಸಿಡಿಸಿ ತಂಡದ ಮೊತ್ತವನ್ನು 150ಕ್ಕೆ ತಂದು ನಿಲ್ಲಿಸಿದರು.
ಪಂಜಾಬ್ ಪರ ಅಶ್ವಿನ್, ಶಮಿ ಹಾಗೂ ಮುಜೀಬ್ ತಲಾ ಒಂದು ವಿಕೆಟ್ ಪಡೆದರು. ಅಂಕಿತ್ ರಜಪೂತ್ ವಿಕೆಟ್ ಪಡೆಯದಿದ್ದರು ನಾಲ್ಕು ಓವರ್ಮನಲ್ಲಿ ಕೇವಲ 21 ರನ್ ನೀಡಿದರು.
151 ರನ್ ಗುರಿ ಪಡೆದ ಪಂಜಾಬ್ ತಂಡದ ಮೊತ್ತ 18 ಆಗುವ ವೇಳೆಗೆ 12 ರನ್ಗಳಿಸಿದ್ದ ಸ್ಫೋಟಕ ದಾಂಡಿಗ ಗೇಲ್ ವಿಕೆಟ್ ಕಳೆದುಕೊಂಡಿತು. ನಂತರ ಜೊತೆಯಾದ ಕನ್ನಡಿಗರಾದ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಎಚ್ಚರಿಕೆಯಿಂದ ವಿಕೆಟ್ ಕಳೆದುಕೊಳ್ಳದಂತೆ 114 ರನ್ ಸೇರಿಸಿದರು. ಅಗರ್ವಾಲ್ 43 ಎಸೆತಗಳಲ್ಲಿ 55 ರನ್ಗಳಿಸಿ ಔಟಾದರೆ ರಾಹುಲ್ 71 ರನ್ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಹೈದರಾಬಾದ್ ಪರ ಸಂದೀಪ್ ಶರ್ಮಾ 2, ಸಿದ್ದಾರ್ಥ್ ಕೌಲ್ 1,ರಶೀದ್ ಖಾನ್ 1 ವಿಕೆಟ್ ಪಡೆದರು.